ಧಾರವಾಡ: ಲಾಕ್‌ಡೌನ್ ಸಡಿಲಿಕೆ ಹಿನ್ನೆಲೆ ರಾಜ್ಯ ಸರ್ಕಾರದ ಆದೇಶದಂತೆ ಧಾರವಾಡ ಜಿಲ್ಲಾದ್ಯಂತ ಬಸ್‌ಗಳ ಸಂಚಾರ ಆರಂಭಗೊಂಡಿದೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಗ್ರಾಮೀಣ ಘಟಕದಿಂದ ಸುಮಾರು 462 ಬಸ್ಸುಗಳು ಸದ್ಯ 419 ಮಾರ್ಗಗಳಲ್ಲಿ ಸಂಚರಿಸಲು ಸಕಲ ಸಿದ್ಧತೆ ಮಾಡಲಾಗಿದೆ. ಈಗಾಗಲೇ ನಗರ ಸಾರಿಗೆ ಬಸ್, ಸಾರಿಗೆ ಬಸ್‌ಗಳು ಸಿಬಿಟಿ, ಹಳೇ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣದಿಂದ ಸಂಚಾರ ಆರಂಭಿಸಿವೆ.
ರಾಜ್ಯಾದ್ಯಂತ ಬಸ್ ಸೇವೆ ಆರಂಭ: ಜನರಲ್ಲಿ ಪ್ರಯಾಣದ ಸಂಭ್ರಮ - KSRTC Bus start in the state,
14:13 May 19
ಧಾರವಾಡ ಜಿಲ್ಲಾದ್ಯಂತ ಬಸ್ ಸಂಚಾರ ಆರಂಭ
13:48 May 19
ಮಂಗಳೂರಿನಲ್ಲೂ ಬಸ್ ಸೇವೆ ಆರಂಭ
ಮಂಗಳೂರು: ಲಾಕ್‌ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಸಾರಿಗೆ ಸಂಚಾರ ಇಂದು ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಇಂದು ಮಂಗಳೂರಿನಲ್ಲಿಯೂ ಕೆಎಸ್ಆರ್ಟಿಸಿ ಬಸ್ ಸೇವೆ ಆರಂಭಗೊಂಡಿತು.
13:25 May 19
ಚಿತ್ರದುರ್ಗದಲ್ಲೂ ಬಸ್ ಸೇವೆ ಆರಂಭ
ಚಿತ್ರದುರ್ಗ: ತನ್ನ ಸಂಚಾರ ಸ್ಥಗಿತಗೊಳಿಸಿದ್ದ ಕೆಎಸ್ಆರ್ಟಿಸಿ ಮತ್ತೆ ಸಂಚಾರ ಆರಂಭಿಸಿದೆ. ಇಂದು ಬೆಳಿಗ್ಗೆಯಿಂದಲೇ ಜಿಲ್ಲೆಯಲ್ಲಿ ಸಂಚಾರ ಆರಂಭಿಸಿದ್ದು, ಬಸ್‌ಗಳು ಅಂತರ್ ಜಿಲ್ಲಾ ವ್ಯಾಪ್ತಿಯಲ್ಲಿ ಸಂಚರಿಸುತ್ತಿವೆ. ಕೊರೊನಾ ಹಾವಳಿಯಿಂದ ಕೇವಲ 30 ಪ್ರಯಾಣಿಕರು ಪ್ರಯಾಣ ಬೆಳೆಸಲು ಸರ್ಕಾರ ಅವಕಾಶ ಕಲ್ಪಿಸಿದೆ. ಮಾಸ್ಕ್ ಧರಿಸದೆ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳದ ಪ್ರಯಾಣಿಕರನ್ನು ನಿಷೇಧಿಸಲಾಗಿದೆ.
12:29 May 19
ಚಿಕ್ಕಬಳ್ಳಾಪುರದಲ್ಲೂ ಬಸ್ ಸೇವೆ ಆರಂಭ
ಚಿಕ್ಕಬಳ್ಳಾಪುರ: ಜಿಲ್ಲೆಯಿಂದ ಬೇರೆ ಜಿಲ್ಲೆಗಳಿಗೆ KSRTC ಬಸ್ ಸೇವೆ ಆರಂಭಿವಾಗಿದ್ದು, ಬೆಳಗ್ಗೆ 7 ಗಂಟೆಯಿಂದಲೇ ಬಸ್ ಸಂಚಾರ ಶುರುವಾಗಿದೆ. ಬೆಳ್ಳಂಬೆಳಗ್ಗೆ ಬಸ್ಗಾಗಿ ಪ್ರಯಾಣಿಕರು ಕ್ಯೂ ನಿಂತು ಸಾಮಾಜಿಕ ಅಂತರ ಕಾಯ್ದುಕೊಂಡಿದ್ದರು. ಪ್ರತೀ ಬಸ್ನಲ್ಲಿ 30 ಜನರು ಪ್ರಯಾಣಿಸಲು ಅವಕಾಶ ಮಾಡಿಕೊಟ್ಟಿದ್ದು, ಪ್ರತೀ ಪ್ರಯಾಣಿಕರನ್ನೂ ಸ್ಕ್ರೀನಿಂಗ್ ಹಾಗೂ ಸ್ಯಾನಿಟೈಸರ್ ಮಾಡಿದ ಬಳಿಕ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.
12:26 May 19
ಬೀದರ್ನಲ್ಲಿ ಬಸ್ ಸೇವೆ ಆರಂಭ
ಬೀದರ್: ಲಾಕ್ಡೌನ್ನಿಂದಾಗಿ ಸಾರಿಗೆ ಸಂಚಾರ ಸ್ತಬ್ಧಗೊಳಿಸಿದ್ದ ಸರ್ಕಾರ ಈಗ ಇಂದಿನಿಂದ ಬಸ್ ಸೇವೆ ಆರಂಭಿಸಿದ್ದು, ಬೀದರ್-ಕಲಬುರಗಿ ಮಧ್ಯ ಬಸ್ ಸೇವೆ ಆರಂಭವಾಗಿದೆ.
12:24 May 19
ಬಾಗಲಕೋಟೆಯಲ್ಲಿ ಬಸ್ ಸಂಚಾರ ಆರಂಭ
ಬಾಗಲಕೋಟೆ: ಕಳೆದ ಎರಡು ತಿಂಗಳನಿಂದ ಲಾಕ್‌ಡೌನ್ ಪರಿಣಾಮ ಬಸ್ ಸಂಚಾರ ಬಂದ್ ಆಗಿತ್ತು. ಸರ್ಕಾರದ ಆದೇಶದಂತೆ ಇಂದಿನಿಂದ ಬಸ್ ಸಂಚಾರ ಆರಂಭವಾಗಿದೆ. ಈ ಹಿನ್ನೆಲೆ ಬಾಗಲಕೋಟೆ ಬಸ್ ನಿಲ್ದಾಣದಿಂದ ಬಸ್‌ಗಳು ಸಂಚಾರ ಆರಂಭಿಸಿವೆ. ಬಸ್ ನಿಲ್ದಾಣದ ಮುಖ್ಯ ಪ್ರವೇಶ ದ್ವಾರದಲ್ಲಿ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿದೆ. ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಎಲ್ಲರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಿ ಕೆಎಸ್ಆರ್ಟಿಸಿ ಸಿಬ್ಬಂದಿ ಒಳಗಡೆ ಬಿಡುತ್ತಿದ್ದಾರೆ.
12:04 May 19
ಹಾಸನದಲ್ಲಿ ಬಸ್ ಸಂಚಾರ ಆರಂಭ
ಹಾಸನದ ಬಸ್ ನಿಲ್ದಾಣದಿಂದ ಬೆಂಗಳೂರು-ಮಂಗಳೂರು-ಮೈಸೂರು-ಕೊಡಗು ಹಾಗೂ ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಮೊದಲ ಹಂತದಲ್ಲಿ ಅಂತರ್ ಜಿಲ್ಲಾ ಬಸ್‌ಗಳ ಓಡಾಟಕ್ಕೆ ಇಂದಿನಿಂದ ಚಾಲನೆ ಸಿಕ್ಸಿಕಿದೆ. ಕಳೆದ ಒಂದೂವರೆ ತಿಂಗಳಿಂದ ಇತರೆ ಭಾಗಗಳಿಂದ ಬಂದಂತಹ ನಾಗರಿಕರು ಮತ್ತು ಬೇರೆ ಭಾಗಗಳಿಗೆ ಹೋಗಲು ಸಾಧ್ಯವಾಗದೆ ಇಲ್ಲಿಯೇ ಉಳಿದಿದ್ದ ಜನ ಇಂದು ಖುಷಿ ಖುಷಿಯಾಗಿ ತಮ್ಮ ಊರಿನತ್ತ ಪಯಣ ಬೆಳೆಸಿದರು.
10:39 May 19
ಬೆಳಗಾವಿ ಜಿಲ್ಲೆಯಾದ್ಯಂತ ಬಸ್ ಸೇವೆ ಆರಂಭ
ಬೆಳಗಾವಿ: ಲಾಕ್‌ಡೌನ್ ಘೋಷಣೆಯಾದ 56 ದಿನಗಳ ಬಳಿಕ ಬೆಳಗಾವಿಯಿಂದ ಸಾರಿಗೆ ಬಸ್‌ಗಳ ಸಂಚಾರ ಸೇವೆ ಆರಂಭವಾಗಿದ್ದು, ಬೆಳಗಾವಿಯಿಂದ ದಾವಣಗೆರೆ ಮಾರ್ಗವಾಗಿ ಬೆಂಗಳೂರಿಗೆ ಮೊದಲ ಬಸ್ ಸೇವೆ ಸಾರ್ವಜನಿಕರಿಗೆ ಲಭ್ಯವಾಗಿದೆ.
ಚಿಕ್ಕೋಡಿಯಿಂದ ಸುಮಾರು 150-200 ಬಸ್‌ಗಳು ಪ್ರಯಾಣಿಸಲು ಸಜ್ಜಾಗಿ ನಿಂತಿವೆ. ಅಥಣಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಹುಬ್ಬಳ್ಳಿ ಹಾಗೂ ಇನ್ನಿತರ ಪ್ರದೇಶಗಳಿಗೆ ಪ್ರಯಾಣ ಬೆಳೆಸಲಿವೆ ಸಾರಿಗೆ ಸಂಸ್ಥೆಯ ಬಸ್‌ಗಳು. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಬಸ್ ತಂಗುದಾಣಗಳ ಕಡೆ ಆಗಮಿಸುತ್ತಿಲ್ಲ. ಒಂದು ತಾಲೂಕು ಪ್ರದೇಶಕ್ಕೆ ತೆರಳಲು ಒಂದು ಬಸ್ನಲ್ಲಿ ನಾಲ್ಕೈದು ಜನ ಪ್ರಯಾಣ ಮಾಡುತ್ತಿದ್ದು, ಈಗಾಗಲೇ ಬೆಳಗಾವಿ ಜಿಲ್ಲೆಯ ಪ್ರತಿ ತಾಲೂಕಿಗೂ ಬಸ್‌ಗಳನ್ನು ಬಿಡಲಾಗಿದೆ.
ಅಥಣಿ ತಾಲೂಕಿನಲ್ಲಿ ಒಟ್ಟಾರೆ 62 ಹಳ್ಳಿಗಳು ಇರುವುದರಿಂದ ವಿವಿಧ ಹಳ್ಳಿಗಳಿಗೆ ಮೊದಲಿನಂತೆ ಸೇವೆ ನೀಡುತ್ತಿರುವ 54 ಬಸ್‌ಗಳ ಸಂಚಾರ ಆರಂಭವಾಗಿದೆ. ಕೋವಿಡ್-19 ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಸಿಬ್ಬಂದಿಯಿಂದ ಪ್ರಯಾಣಿಕರ ದೇಹದ ಉಷ್ಣತೆಯ ತಪಾಸಣೆ ಮಾಡಲಾಗುತ್ತಿದೆ. ಬಸ್ ನಿಲ್ದಾಣದಲ್ಲಿ ಮತ್ತು ಬಸ್ಗಳಲ್ಲಿ ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಯಾಣ ಮಾಡುತ್ತಿದ್ದಾರೆ ಪ್ರಯಾಣಿಕರು.