ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ದೀಪ ಬೆಳಗಿಸುವಂತೆ ನೀಡಿದ ಕರೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹಾಗೂ ಕುಟುಂಬ ವಿರೋಧ ವ್ಯಕ್ತಪಡಿಸಿತು.
ಭಾರತಕ್ಕೆ ಬೇಕಾಗಿರುವುದು ಮಹಾ ಪುರುಷರ ಸಿದ್ಧಾಂತವೇ ಹೊರತು ದೀಪಗಳಲ್ಲ ಎಂಬ ಭಿತ್ತಿ ಪತ್ರ ಪ್ರದರ್ಶಿಸಿದರು. ಅಲ್ಲದೇ ಕುಟುಂಬದ ಯಾವ ಸದಸ್ಯರೂ ದೀಪ ಬೆಳಗಿಸದೇ ಮೋದಿ ಕರೆಗೆ ವಿರೋಧ ವ್ಯಕ್ತಪಡಿಸಿದರು.
ಜಿಲ್ಲೆಯ ಗೋಕಾಕ್ ನಗರದ ಮನೆಯಲ್ಲಿ ಅವರು ಲೈಟ್ ಆನ್ ಮಾಡಿ ಮಕ್ಕಳೊಂದಿಗೆ ಕೈಯಲ್ಲಿ ಭಿತ್ತಿ ಪತ್ರ, ಬಿ.ಆರ್.ಅಂಬೇಡ್ಕರ್, ಬುದ್ಧ ಹಾಗೂ ಬಸವಣ್ಣನವರ ಭಾವಚಿತ್ರ ಹಿಡಿದು ವಿಭಿನ್ನ ಸಂದೇಶ ರವಾನಿಸಿದರು.