ETV Bharat / state

ವಿಶ್ವದ ಜನರು ನೋಡಿದ್ದು ಕಾಂತಾರ ‘2’, ಪಾರ್ಟ್ 1 ಬರಬೇಕಿದೆ: ನಿರ್ದೇಶಕ ರಿಷಬ್ ಶೆಟ್ಟಿ - ಸಪ್ತಮಿ ಗೌಡ

ವಿಶ್ವವೇ ಭಾರತೀಯ ಚಿತ್ರರಂಗವನ್ನು ಹಿಂದಿರುಗಿ ನೋಡುವಂತೆ ಮಾಡಿತ್ತು ಕಾಂತಾರ ಮೂವಿ. ಇದೀಗ ನಟ ನಿರ್ದೇಶಕರಾಗಿರುವ ರಿಷಬ್​ ಶೆಟ್ಟಿ ನೀವು ನೋಡಿದ್ದು ಕಾಂತಾರ ಭಾಗ 2, ಪಾರ್ಟ್​ 1 ಬರಬೇಕಿದೆ ಎಂದು ಎಲ್ಲರಲ್ಲೂ ಕುತೂಹಲದ ಜೊತೆ ಅಚ್ಚರಿ ಮೂಡಿಸಿದ್ದಾರೆ.

Kantara movie centenary ceremony
ಕಾಂತಾರ ಚಿತ್ರದ ಶತದಿನೋತ್ಸವ ಸಮಾರಂಭ
author img

By

Published : Feb 6, 2023, 11:24 AM IST

ಬೆಂಗಳೂರು: ಭಾರತೀಯ ಚಿತ್ರರಂಗ ಅಲ್ಲದೇ ವಿಶ್ವದಾದ್ಯಂತ ಅಬ್ಬರಿಸಿದ ಚಿತ್ರ ಕಾಂತಾರ. ಕಳೆದ ವರ್ಷ ತೆರೆಕಂಡು ಕರ್ನಾಟಕ, ಭಾರತ ಮಾತ್ರವಲ್ಲದೆ ಭಾರತದಾಚೆಗೂ ಕನ್ನಡ ಸಿನಿಮಾದ ತಾಕತ್ತನ್ನು ಸಾಬೀತು ಮಾಡಿದ ಚಿತ್ರ. ಈವರೆಗೆ ಕನ್ನಡದ ಸ್ಟಾರ್ ಆಗಿರುವ ನಟ ಹಾಗು ನಿರ್ದೇಶಕ ರಿಷಬ್ ಶೆಟ್ಟಿ ಅವರನ್ನು ಪ್ಯಾನ್‌ ಇಂಡಿಯಾ ಸ್ಟಾರ್ ಆಗಿ ಮಾಡಿದ ಕಾಂತಾರ ಸಿನಿಮಾ 2022ರಲ್ಲಿ ಸೂಪರ್ ಹಿಟ್ ಜೊತೆಗೆ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದ ಚಿತ್ರ. 16 ಕೋಟಿ ಬಜೆಟ್ ನಲ್ಲಿ ನಿರ್ಮಾಣ ಆದ ಕಾಂತಾರ ಚಿತ್ರ ವಿಶ್ವದಾದ್ಯಂತ ಬರೋಬ್ಬರಿ 450ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ 100 ದಿನ‌ ಕಂಪ್ಲೀಟ್ ಮಾಡಿದ ಮೊದಲ ಚಿತ್ರವಾಗಿ ಹೊರ ಹೊಮ್ಮಿದೆ.

Kantara movie centenary ceremony
ಕಾಂತಾರ ಚಿತ್ರದ ಶತದಿನೋತ್ಸವ ಸಮಾರಂಭ

ಇತ್ತೀಚೆಗೆ ಕಾಂತಾರ ಚಿತ್ರದ ಶತದಿನೋತ್ಸವ ಸಮಾರಂಭವನ್ನು ಬೆಂಗಳೂರಿನ ಬಂಟರ ಸಂಘದಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರು ಅದ್ಧೂರಿಯಾಗಿ ಹಮ್ಮಿಕೊಂಡು, ಈ ಚಿತ್ರದ ಕಲಾವಿದರು, ತಂತ್ರಜ್ಞರು, ವಿತರಕರು, ಪ್ರದರ್ಶಕರು, ಚಿತ್ರಮಂದಿರದ ಮಾಲೀಕರಿಗೆ ಹಾಗು ಈ ಚಿತ್ರದಲ್ಲಿ ದುಡಿದ ಲೈಟ್ ಬಾಯ್​ಯಿಂದ ಹಿಡಿದು ಕಲಾವಿದರವೆಗೂ ಕಾಂತಾರ ಚಿತ್ರದ ಸ್ಮರಣಿಕೆ ನೀಡಿ ಗೌರವಿಸಲಾಯಿತು.

Kantara movie centenary ceremony
ಕಾಂತಾರ ಚಿತ್ರದ ಶತದಿನೋತ್ಸವ ಸಮಾರಂಭ

ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಕರ್ನಾಟಕ ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ. ಚಂದ್ರಶೇಖರ್ ಸೇರಿದಂತೆ ಕಾಂತಾರ ಚಿತ್ರದ ನಟ ಹಾಗು ನಿರ್ದೇಶಕ ರಿಷಬ್ ಶೆಟ್ಟಿ, ಸಪ್ತಮಿ ಗೌಡ, ನಿರ್ಮಾಪಕ ವಿಜಯ್ ಕಿರಂಗದೂರ್, ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್, ಗಾಯಕ‌ ವಿಜಯ್ ಪ್ರಕಾಶ್, ಕೆ.ಆರ್.‌ಜಿ ಸ್ಟುಡಿಯೋ ಕಾರ್ತಿಕ್, ಯೋಗಿ ಜಿ ರಾಜ್ ಸೇರಿದಂತೆ ಇಡೀ ಕಾಂತಾರ ಚಿತ್ರತಂಡದವರು ಉಪಸ್ಥಿತರಿದ್ದರು.

Kantara movie centenary ceremony
ಕಾಂತಾರ ಚಿತ್ರದ ಶತದಿನೋತ್ಸವ ಸಮಾರಂಭ

ಈ ಸಂದರ್ಭದಲ್ಲಿ ಮಾತನಾಡಿದ್ದ ನಾಯಕ, ನಿರ್ದೇಶಕ ರಿಷಭ್ ಶೆಟ್ಟಿ, ಕಾಂತಾರ ಚಿತ್ರದದ ಗೆಲುವು ಖುಷಿ ಕೊಟ್ಟಿದೆ. ಈ ಕಥೆಯನ್ನು ಮೊದಲು ಕಾರ್ತಿಕ್ ಗೌಡ ಅವರ ಹತ್ತಿರ, ಆನಂತರ ವಿಜಯ್ ಸರ್ ಅವರ ಬಳಿ ಕಥೆ ಹೇಳಿದೆ. ತಕ್ಷಣ ಒಪ್ಪಿಗೆ ನೀಡಿ ನಿರ್ಮಾಣಕ್ಕೆ ಮುಂದಾದರು. ಚಿತ್ರವನ್ನು ನಾನು ಅಂದುಕೊಂಡಂತೆ ತರಲು ಸಂಪೂರ್ಣ ಸಹಕಾರ ನೀಡಿದ ನಿರ್ಮಾಪಕ ವಿಜಯ್ ಕಿರಗಂದೂರು ಅವರಿಗೆ ನಾನು ಆಭಾರಿ. ಯಶಸ್ಸಿಗೆ ಕಾರಣರಾದ ನನ್ನ ಚಿತ್ರತಂಡ, ಮಾಧ್ಯಮ ಮಿತ್ರರಿಗೆ ಹಾಗೂ ಸಮಸ್ತ ಜನತೆಗೆ ನನ್ನ ಧನ್ಯವಾದ. ನನ್ನ ಮಡದಿ ಪ್ರಗತಿ ಅವರಿಗೆ ವಿಶೇಷ ಧನ್ಯವಾದ ಎಂದರು. ಇನ್ನು, ಕಾಂತಾರ ಸಿನಿಮಾದ ಪಾರ್ಟ್ ಬರುತ್ತ ಎಂಬ ಪ್ರಶ್ನೆಗೆ ನಟ ಹಾಗು ನಿರ್ದೇಶಕ ರಿಷಬ್ ಶೆಟ್ಟಿ ಈ ನೂರು ದಿನದ ಸಕ್ಸಸ್ ಸಂಭ್ರಮದಲ್ಲಿ ಹೊಸ ಸಂಗತಿ ಬಿಚ್ಚಿಟ್ಟಿದ್ದಾರೆ.

ಹೌದು, ನಟ ಹಾಗು ನಿರ್ದೇಶಕ ರಿಷಬ್ ಶೆಟ್ಟಿ ಎಲ್ಲರೂ ಕೇಳುತ್ತಿದ್ದಾರೆ? ಕಾಂತಾರ ಭಾಗ 2 ಯಾವಾಗ ಎಂದು? ಆದರೆ ನೀವು ನೋಡಿರುವುದೇ ಭಾಗ 2. "ಕಾಂತಾರ ಭಾಗ 1" ಮುಂದೆ ಬರಲಿದೆ ಅಂತಾ ರಿಷಬ್ ಶೆಟ್ಟಿ ಹೇಳುವ ಮೂಲಕ ಅಚ್ಚರಿ ಮೂಡಿಸಿದರು. ‌ಸಹಜವಾಗಿ ಸಿನಿಮಾ ರಂಗದಲ್ಲಿ ಒಂದು ಸಿನಿಮಾ ಹಿಟ್ ಆದರೆ, ಚಿತ್ರದ ಸರಣಿ ಬರೋದು ಕಾಮನ್. ಆದ್ರೆ ರಿಷಬ್ ಶೆಟ್ಟಿ ಹೇಳಿದ ಮಾತು ಸಾಕಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಯಾಕೆಂದರೆ ಕಾಂತಾರ ಪಾರ್ಟ್ 1 ಮಾಡುವ ಸಿದ್ಧತೆಯಲ್ಲಿರೋದು ಅವರ ಮಾತುಗಳಲ್ಲಿ ಸುಳಿವು ನೀಡಿದ್ದರು. ‌ಈಗಾಗಲೇ ಕಾಂತಾರ ಪಾರ್ಟ್ 2 ನೋಡಿರುವ ಕೋಟ್ಯಂತರ ಕನ್ನಡ ಸಿನಿಮಾ ಪ್ರೇಕ್ಷಕರು ಕಾಂತಾರ ಪಾರ್ಟ್ 1‌ ನೋಡಬೇಕಿದೆ.

ಇನ್ನು, ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆಗೆ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರ ದಂಡಿದೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಅರವಿಂದ್ ಕಶ್ಯಪ್ ಛಾಯಾಗ್ರಾಹಣ ಈ ಚಿತ್ರಕ್ಕಿತ್ತು.

ಇದನ್ನೂ ಓದಿ: ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಹುಟ್ಟಿದ್ದ ಶರಣ್​ಗೆ ಇಂದು 51ನೇ ಜನ್ಮದಿನ ಸಂಭ್ರಮ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.