ಬೆಳಗಾವಿ: ಅದು ಕೇವಲ 2 ತಿಂಗಳ ಹಿಂದಷ್ಟೆ ನಿರ್ಮಿಸಲಾದ ಕಾಂಕ್ರಿಟ್ ರಸ್ತೆ. ಸುಲಭ ಸಂಚಾರಕ್ಕೆ ನೆರವಾಗಬೇಕಿದ್ದ ಈ ರಸ್ತೆಯಿಂದ ಗ್ರಾಮಸ್ಥರು ನರಕಯಾತನೆ ಅನುಭವಿಸುವಂತಾಗಿದೆ.
ಬೆಳಗಾವಿ ತಾಲೂಕಿನ ಮುತನಾಳ ಗ್ರಾಮದಲ್ಲಿನ ಕಾಂಕ್ರೀಟ್ ರಸ್ತೆ ಜನರ ಉಸಿರಾಟಕ್ಕೆ ತೊಂದರೆಯಾಗಿದೆ. ರಸ್ತೆಯಲ್ಲಿ ಕಸ ಹೊಡೆದರೆ ಸಾಕು ಸಂಪೂರ್ಣ ಧೂಳುಮಯವಾಗುತ್ತಿದೆ. ಇನ್ನೂ ಭಾರಿ ವಾಹನಗಳ ಸಂಚಾರದಿಂದಾಗಿ ದಟ್ಟ ಹೊಗೆ ಆವರಿಸಿದಂತೆ ಧೂಳು ಮುತ್ತಿಕ್ಕಿಕೊಳ್ಳುತ್ತದೆ.
ಗ್ರಾಮಸ್ಥರು ಪೊರಕೆ ಹಿಡಿದು ಮುತನಾಳ ಪಂಚಾಯಿತಿಗೆ ಮುತ್ತಿಗೆ ಹಾಕಿ, ರಸ್ತೆ ದುರಸ್ತಿಗೊಳಿಸುವಂತೆ ಆಗ್ರಹಿಸಿದ್ದಾರೆ.