ಬೆಳಗಾವಿ: ಖಾನಾಪೂರ ತಾಲೂಕಿನ ಹಲಸಿ ಗ್ರಾಮದಲ್ಲಿ ಬಸವೇಶ್ವರ ಭಾವಚಿತ್ರಕ್ಕೆ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಕೂಡಲ ಸಂಗಮ ಜಯಮೃತ್ಯುಂಜಯ ಶ್ರೀಗಳು ಭೇಟಿ ನೀಡಿ ಹೊಸ ಭಾವಚಿತ್ರ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸ್ವಾಮೀಜಿಗಳು, ಸಮಾಜದಲ್ಲಿ ಇಂತಹ ಘಟನೆಗೆ ಕಾರಣರಾದವರನ್ನು ಪೊಲೀಸರು ತಕ್ಷಣವೇ ಬಂಧಿಸಿ ಕಠಿಣ ಶಿಕ್ಷೆ ಒದಗಿಸುವಂತೆ ಆಗ್ರಹಿಸಿದರು. ಕಳೆದ ರಾತ್ರಿ ಹಲಸಿಯಲ್ಲಿ ಯಾರೋ ಅಪರಿಚಿತ ಕೆಲ ಪುಂಡರು ಕನ್ನಡ ಧ್ವಜಕ್ಕೆ ಬೆಂಕಿ ಹಾಗೂ ಬಸವೇಶ್ವರ ಭಾವ ಚಿತ್ರಕ್ಕೆ ಮಸಿ ಬಳಿದಿದ್ದರು. ಈ ಸಂಬಂಧ ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.