ETV Bharat / state

ಪರಿಷತ್ ಕೋಲಾಹಲ ಪ್ರಕರಣ ರಾಜ್ಯ ರಾಜಕಾರಣದ ಅಗೌರವಕ್ಕೆ ಸಾಕ್ಷಿ: ಜಯ ಮೃತ್ಯುಂಜಯ ಸ್ವಾಮೀಜಿ

ಕರ್ನಾಟಕ ವಿಧಾನ ಪರಿಷತ್ ಸದಸ್ಯರು ಬುದ್ದಿ ಜೀವಿಗಳು, ರಾಜ್ಯದಲ್ಲಿ ಈ ರೀತಿ ವರ್ತನೆ ಕರ್ನಾಟಕದ ಜನರು ತಲೆ ತಗ್ಗಿಸುವಂತೆ ಮಾಡಿದೆ. ತಮ್ಮ ಹಕ್ಕುಗಳನ್ನು ಪಡೆಯಲು ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ.

Jayamritunjaya Swamiji
ಸಮುದಾಯ ಭವನದ ಭೂಮಿ ಪೂಜೆ ನೆರವೇರಿಸಿದ ಜಯಮೃತ್ಯುಂಜಯ ಸ್ವಾಮೀಜಿ
author img

By

Published : Dec 16, 2020, 7:10 PM IST

ಅಥಣಿ: ವಿಧಾನ ಪರಿಷತ್ ಕೋಲಾಹಲ ಪ್ರಕರಣ ಕರ್ನಾಟಕ ರಾಜಕಾರಣದಲ್ಲಿ ಅಗೌರವಕ್ಕೆ ಸಾಕ್ಷಿ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಜಯಮೃತ್ಯುಂಜಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ.

ಪರಿಷತ್ ಕೋಲಾಹಲ ಕರ್ನಾಟಕದ ರಾಜಕಾರಣದಲ್ಲಿ ಅಗೌರವಕ್ಕೆ ಸಾಕ್ಷಿ: ಜಯಮೃತ್ಯುಂಜಯ ಸ್ವಾಮೀಜಿ

ಅಥಣಿ ತಾಲೂಕಿನ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಸಮುದಾಯ ಭವನದ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಒಂದು ಸಮಾಜಕ್ಕೆ ನಿಜವಾದ ಬೆಲೆ, ನೆಲೆ ಇದ್ದರೆ ಮಾತ್ರ ಸಮೂಹದಲ್ಲಿ ದೃಢವಾಗಿ ಬೆಳೆಯಲು ಸಾಧ್ಯ. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಪಡೆಯಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಒತ್ತಡ ಹೇರಬೇಕಾಗಿದೆ ಎಂದರು.

ಪಂಚಮಸಾಲಿ ಸಮಾಜದಕ್ಕೆ 2ಎ ಮೀಸಲಾತಿ ಹೋರಾಟದ ಹಿನ್ನೆಲೆ ಮುಂಬರುವ ಜ.14 ಸಂಕ್ರಾಂತಿ ಹಬ್ಬದ ದಿನದಂದು ಕೂಡಲ ಸಂಗಮದಿಂದ ಬೆಂಗಳೂರು ಚಲೋ ಪಾದಯಾತ್ರೆ ಮಾಡುವ ಮೂಲಕ ನಮ್ಮ ಹಕ್ಕಿಗಾಗಿ ಒಗ್ಗಟ್ಟಿನಿಂದ ಹೋರಾಟ ಮಾಡಬೇಕಾಗಿದೆ. ನಮ್ಮ ಸಮಾಜದ ಸಹಸ್ರಾರು ಜನರು ಭಾಗವಹಿಸಿ ಎಂದು ಕರೆ ನೀಡಿದರು.

ನಿನ್ನೆ ಪರಿಷತ್ ಸದಸ್ಯರ ಗುದ್ದಾಟದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕ ವಿಧಾನ ಪರಿಷತ್ ಸದಸ್ಯರು ಬುದ್ದಿ ಜೀವಿಗಳು. ರಾಜ್ಯದಲ್ಲಿ ಈ ರೀತಿ ವರ್ತನೆ ಕರ್ನಾಟಕದ ಜನರು ತಲೆ ತಗ್ಗಿಸುವಂತೆ ಮಾಡಿದೆ. ತಮ್ಮ ಹಕ್ಕುಗಳನ್ನು ಪಡೆಯಲು ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಇದರಿಂದಾಗಿ ಯಾರು ತಪ್ಪು ಮಾಡಿದ್ದಾರೆ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು. ಕರ್ನಾಟಕ ರಾಜಕೀಯದಲ್ಲಿ ಅಗೌರವದಿಂದ ನಡೆದುಕೊಂಡಿದ್ದಾರೆ. ಈ ಸಂಗತಿ ನಮಗೆ ಬೇಸರ ಮೂಡಿಸಿದೆ ಎಂದರು.

ಪಂಚಮಸಾಲಿ ಸಮಾಜ ಒಕ್ಕಲುತನ ನಂಬಿಕೊಂಡು ಬಂದಿರುವುದರಿಂದ ಕಳೆದ ಹಲವು ವರ್ಷಗಳಿಂದ ಆರ್ಥಿಕವಾಗಿ ಹಿಂದುಳಿದೆ. ಹಾಗಾಗಿ ಈ ಸಮಾಜಕ್ಕೆ ಸರ್ಕಾರದ ನೆರವು ಅತಿ ಮುಖ್ಯವಾಗಿದೆ. ಸಿಂಘು ಗಡಿಯಲ್ಲಿ ಪಂಜಾಬ್ ರೈತರು ಸ್ವಾವಲಂಬಿಯಾಗಿ ಹೋರಾಟ ಮಾಡುತ್ತಿದ್ದಾರೆ. ಸರ್ಕಾರ ಯಾವುದೇ ಸೌಲಭ್ಯ ಪಡೆಯದೇ ಹೋರಾಟ ಮಾಡುತ್ತಿದ್ದಾರೆ. ರೈತರು ಸ್ವಾವಲಂಬಿ ಬದುಕು ಎಲ್ಲರಿಗೂ ಮಾದರಿ. ಕೇಂದ್ರ ಸರ್ಕಾರ ಮಧ್ಯೆ ಪ್ರವೇಶಿಸಿ ರೈತರ ಮನವಿ ಆಲಿಸಬೇಕು ಎಂದರು .

ಇನ್ನು ಅಥಣಿ ಪಂಚಮಸಾಲಿ ಸಮಾಜದ ಸಮುದಾಯ ಭವನದ ನಿರ್ಮಾಣದ ಇಪ್ಪತ್ತು ವರ್ಷಗಳ ಕನಸು. ಒಂದು ವರ್ಷದಲ್ಲಿ ಈ ಕಾಮಗಾರಿ ಪೂರ್ಣವಾಗಲಿ. ನಿಮ್ಮ ಜೊತೆ ಹರಿಹರ ಜಗದ್ಗುರು ಹಾಗೂ ನಾವು ಜೋತೆಯಾಗಿದ್ದೇವೆ ಎಂದು ಸ್ವಾಮೀಜಿ ಭರವಸೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.