ಅಥಣಿ: ಅಥಣಿ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಅವರಿಂದ ಮಾಜಿ ಸಚಿವ ಎಂ.ಬಿ.ಪಾಟೀಲ್ ಪ್ರಮಾಣ ಮಾಡಿಸಿಕೊಂಡರು.
ಅಥಣಿ ಶಿವಣಗಿ ಸಾಂಸ್ಕೃತಿಕ ಭವನದಲ್ಲಿ ಅಥಣಿ ಪಟ್ಟಣದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಎದುರಿಗೆ ಗಜಾನನ ಮಂಗಸೂಳಿ ಕಡೆಯಿಂದಿ ಪ್ರಮಾಣ ಮಾಡಿಸಿದರು.
ಅನರ್ಹ ಶಾಸಕ ಮಹೇಶ ಕುಮಟಳ್ಳಿ ಹಾಗೆ ನಮಗೆ ಮತ್ತು ಮತದಾರರಿಗೆ ಕೈ ಕೊಟ್ಟು ಹೊಗಬಾರದು ಎಂಬ ಕಾರಣಕ್ಕೆ ಎಲ್ಲರ ಎದುರು ಪ್ರಮಾಣ ಮಾಡು ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಅಭ್ಯರ್ಥಿ ಗಜಾನನ ಅವರಿಗೆ ಹೇಳಿದ ನಂತರ ಗಜಾನನ ಅವರು ಶಿವಯೋಗಿಗಳ ಮೇಲೆ ಪ್ರಮಾಣ ಮಾಡಿದರು.