ETV Bharat / state

ಐರನ್ ಮ್ಯಾನ್ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕನ್ನಡಿಗ - ಐರನ್ ಮ್ಯಾನ್ ಕಠಿಣ ದೇಹ ದಂಡನೆ ಸ್ಪರ್ಧೆ

ಮಲೇಷಿಯಾದಲ್ಲಿ ಇತ್ತೀಚಿಗೆ ನಡೆದ ಐರನ್ ಮ್ಯಾನ್ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ರಾಜ್ಯದ ಸೇನಾಧಿಕಾರಿಯೊಬ್ಬರು ಭಾಗವಹಿಸಿ ಪ್ರಥಮ ಸ್ಥಾನ ಪಡೆದು ದೇಶಕ್ಕೆ ಕೀರ್ತಿ ತಂದಿದ್ದಾರೆ.

chikkodi
ಶಂಕರ ಕರಜಗಿ
author img

By

Published : Feb 8, 2020, 10:23 AM IST

ಚಿಕ್ಕೋಡಿ: ಮಲೇಷಿಯಾದಲ್ಲಿ ಇತ್ತೀಚಿಗೆ ನಡೆದ ಐರನ್ ಮ್ಯಾನ್ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಕನ್ನಡಿಗ ಸೇನಾಧಿಕಾರಿ ಶಂಕರ ಕರಜಗಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ದೇಶಕ್ಕೆ ಕೀರ್ತಿ ತಂದಿದ್ದಾರೆ.

ಐರನ್ ಮ್ಯಾನ್ ಕಠಿಣ ದೇಹ ದಂಡನೆ ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದ ಶಂಕರ ಕರಜಗಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ನಿವಾಸಿಯಾಗಿದ್ದಾರೆ. ಹಾಗೆಯೇ ಮೂಲತಃ ಟೆರಿಟರಲ್ ಆರ್ಮಿಯಲ್ಲಿ ಮೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು ಇವರು ಮಾಂಸಹಾರ ಸೇವಿಸುವುದಿಲ್ಲ. ಶಂಕರ್​ ಕರಜಗಿ ಮಲೇಷಿಯಾದಲ್ಲಿ ನಡೆದ ಐರನ್ ಮ್ಯಾನ್ ಕಠಿಣ ದೇಹ ದಂಡನೆ ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ.

ಐರನ್ ಮ್ಯಾನ್ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಶಂಕರ ಕರಜಗಿ

ಇನ್ನು ಸ್ಪರ್ಧೆಯ 17 ಗಂಟೆಯ ಅವಧಿಯಲ್ಲಿ ಶಂಕರ್​ 3 ಕಿ.ಮೀ ಸಮುದ್ರದಲ್ಲಿ ಈಜಿ, 42 ಕಿ.ಮೀ ಬೆಟ್ಟ ಗುಡ್ಡಗಳಲ್ಲಿ ಓಡುವ ಹಾಗೂ 40 ಡಿಗ್ರಿ ತಾಪಮಾನವಿರುವ ಬೆಟ್ಟ ಗುಡ್ಡಗಳ ಸಾಲಿನಲ್ಲಿ 180 ಕಿ.ಮೀ ಸೈಕಲ್ ಸವಾರಿ ಮಾಡುವ ಚಾಲೇಂಜ್ ಸ್ವೀಕರಿಸಿ 15 ಗಂಟೆ 43 ನಿಮಿಷಗಳಲ್ಲಿ ಅದನ್ನು ಯಶಸ್ವಿಯಾಗಿ ನಿರ್ವಹಿಸಿ ಐರನ್ ಮ್ಯಾನ್ ಪ್ರಶಸ್ತಿ ಪಡೆದು ಭಾರತೀಯ ಸೇನೆ ಹಾಗೂ ಕರ್ನಾಟಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.‌

ಇನ್ನು ಶಂಕರ್ ಅವರಿಗೆ ಸದ್ಯ 53 ವಯಸ್ಸಾಗಿದ್ದು, ಈ ವಯಸ್ಸಿನಲ್ಲಿ ಗಣನೀಯ ಪ್ರಮಾಣದ ಸಾಹಸ ಸಾಧನೆ ಮಾಡಿರುವ ಶಂಕರ್ ಅವರನ್ನು ಇತ್ತೀಚೆಗೆ ಕುಟುಂಬಸ್ಥರು ಸತ್ಕರಿಸಿ ಸನ್ಮಾನಿಸಿದರು. ಸೇನಾಧಿಕಾರಿ ಅವರ ಈ ಸಾಧನೆಗೆ ಮೆಚ್ಚಿ ಸೇನಾ ಮೆಡಲ್ ಪುರಸ್ಕಾರ ನೀಡುವಂತೆ ಸೇನಾಧಿಕಾರಿಗಳು ಶಿಫಾರಸ್ಸು ಮಾಡಿದ್ದಾರೆ.

ಇನ್ನು ಇಷ್ಟೆಲ್ಲಾ ಮಾಡಿರುವ ಶಂಕರ್ ಅವರು ಯಾವುದೇ ನಾನ್ ವೆಜ್ ಆಹಾರ ಸ್ವೀಕರಿಸದೆ ಕೇವಲ ಸಸ್ಯಾಹಾರಿಯಾಗಿರುವುದು ವಿಶೇಷ ಸಂಗತಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.