ಬೆಳಗಾವಿ : ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ನಾಲ್ವರು ಆರೋಪಿಗಳನ್ನು ಖಡೀ ಬಜಾರ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಗರದ ಖಡಕ್ ಗಲ್ಲಿಯ ನಿವಾಸಿ ಉತ್ಸವ್ ಜಾಧವ್, ಖಂಜರ್ ಗಲ್ಲಿಯ ಶಕೀಲ್ ಶಹಾಪುರವಾಲೆ, ಅಮೀರ್ ಮುಲ್ಲಾ ಹಾಗೂ ಚಾಂದು ಗಲ್ಲಿಯ ನಿವಾಸಿ ಮುಜಾವರ್ ಚಾಂದವಾಲಿ ಬಂಧಿತ ಆರೋಪಿಗಳು.
ಆರೋಪಿಗಳು ಈಗ ನಡೆಯುತ್ತಿರುವ ಐಪಿಎಲ್ ಕ್ರಿಕೆಟ್ ಕುರಿತು ಬೆಟ್ಟಿಂಗ್ ದಂಧೆ ನಡೆಸುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ₹15,700 ನಗದು ಹಾಗೂ ನಾಲ್ಕು ಮೊಬೈಲ್ ವಶಪಡಿಸಿಕೊಂಡು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಮಟ್ಕಾ ಅಡ್ಡೆ ಮೇಲೆ ದಾಳಿ : ಅಕ್ರಮವಾಗಿ ಮಟ್ಕಾ ದಂಧೆ ನಡೆಸುತ್ತಿದ್ದ ಮೂವರು ಮಟ್ಕಾ ಬುಕ್ಕಿಗಳನ್ನು ಶಹಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಡಗಾವಿಯ ನವೀನ್ ಬುಚಡೆ, ಖಾಸಬಾಗ್ ನಿವಾಸಿ ಮೋಹಿನ್ ಶಕೀಲ್, ನವೀಗಲ್ಲಿ ನಿವಾಸಿ ಸರ್ಫರಾಜ್ ಶೇಖ್ ಬಂಧಿತರು. ಬಂಧಿತರಿಂದ ₹12,600 ನಗದು ಹಾಗೂ ಓಸಿ ಚಿಟಿ ವಶಕ್ಕೆ ಪಡೆಯಲಾಗಿದೆ.