ETV Bharat / state

ತಮ್ಮ ರಾಜ್ಯಕ್ಕೆ ನಮ್ಮನ್ನು ಕಳುಹಿಸಿಕೊಡುವಂತೆ ತಾಲೂಕಾಡಳಿತಕ್ಕೆ ಮನವಿ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ಸುಮಾರು ಎರಡು ತಿಂಗಳ ಹಿಂದೆ ನಡೆದ ಹಜರತ್​ ಖ್ವಾಜಾ ಶಮನಾಪೀರ ದರ್ಗಾ ಉರುಸ್​​ಗೆ ದೇಶದ ನಾನಾ ರಾಜ್ಯಗಳ 20ಕ್ಕೂ ಹೆಚ್ಚು ಮಂದಿ ಬಂದಿದ್ದು, ಲಾಕ್​​ಡೌನ್ ಹಿನ್ನೆಲೆ ತಮ್ಮ ಮೂಲ ರಾಜ್ಯಗಳಿಗೆ ಹೋಗಲು ಸಾಧ್ಯವಾಗಿಲ್ಲ. ಸದ್ಯ ತಮ್ಮನ್ನು ತಮ್ಮ ತಾಯ್ನಾಡಿಗೆ ಕಳುಹಿಸಿಕೊಡಬೇಕಾಗಿ ತಾಲೂಕು ಆಡಳಿತವನ್ನು ಒತ್ತಾಯಿಸುತ್ತಿದ್ದಾರೆ.

Inter state labours request to send them back to their native
ತಮ್ಮ ರಾಜ್ಯಕ್ಕೆ ನಮ್ಮನ್ನು ಕಳುಹಿಸಿಕೊಡುವಂತೆ ಅಂತರ್​-ರಾಜ್ಯ ಕಾರ್ಮಿಕರ ಅಳಲು
author img

By

Published : May 15, 2020, 2:52 PM IST

Updated : May 15, 2020, 4:44 PM IST

ಚಿಕ್ಕೋಡಿ(ಬೆಳಗಾವಿ): ಎರಡು ತಿಂಗಳ ಹಿಂದೆ ಸದಲಗಾ ಪಟ್ಟಣದಲ್ಲಿ ಜರುಗಿದ ಉರುಸ್​​ಗೆ ದೇಶದ ನಾನಾ ರಾಜ್ಯಗಳ 20ಕ್ಕೂ ಹೆಚ್ಚು ಮಂದಿ ಬಂದಿದ್ದು, ಲಾಕ್​​ಡೌನ್ ಹಿನ್ನೆಲೆ ತಮ್ಮ ಮೂಲ ರಾಜ್ಯಗಳಿಗೆ ಹೋಗಲು ಸಾಧ್ಯವಾಗಿಲ್ಲ. ಸದ್ಯ ತಮ್ಮನ್ನು ತಮ್ಮ ತಾಯ್ನಾಡಿಗೆ ಕಳುಹಿಸಿಕೊಡಬೇಕೆಂದು ತಾಲೂಕು ಆಡಳಿತವನ್ನು ಒತ್ತಾಯಿಸುತ್ತಿದ್ದಾರೆ.

ತಮ್ಮ ರಾಜ್ಯಕ್ಕೆ ನಮ್ಮನ್ನು ಕಳುಹಿಸಿಕೊಡುವಂತೆ ಅಂತರ್​-ರಾಜ್ಯ ಕಾರ್ಮಿಕರ ಅಳಲು

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ಸುಮಾರು ಎರಡು ತಿಂಗಳ ಹಿಂದೆ ಹಜರತ್​ ಖ್ವಾಜಾ ಶಮನಾಪೀರ ದರ್ಗಾದ ಉರುಸ್​​ ನಡೆದಿದೆ. ನಂತರ ಏಕಾಏಕಿ ಲಾಕ್​ಡೌನ್ ಜಾರಿಯಾಗಿದ್ದು, ವಿವಿಧ ರಾಜ್ಯಗಳ ಹಲವಾರು ಕಾರ್ಮಿಕರು ಅಲ್ಲೇ ಉಳಿದಿದ್ದಾರೆ. ಅದರಲ್ಲಿ ಒಬ್ಬ ಬಿಹಾರದವನು, ಆರು ಜನ ಮಧ್ಯಪ್ರದೇಶ, ಆರು ಜನ ಉತ್ತರ ಪ್ರದೇಶ, ಇಬ್ಬರು ಗುಜರಾತ್​, ಇಬ್ಬರು ಮಹಾರಾಷ್ಟ್ರ ಹಾಗೂ ಕರ್ನಾಟಕದ ಹಾವೇರಿಯ ಇಬ್ಬರು ಸೇರಿದಂತೆ 20ಕ್ಕೂ ಹೆಚ್ಚು ಜನರಿದ್ದಾರೆ.

ಇಲ್ಲಿಯವರೆಗೆ ಸರ್ಕಾರದಿಂದ ಹಾಲನ್ನು ಮಾತ್ರ ವಿತರಿಸಲಾಗಿದೆ. ಇಲ್ಲಿಯವರೆಗೆ ಸದಲಗಾ ಗ್ರಾಮಸ್ಥರು ಅವರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ಈಗ ತಾವಿಲ್ಲದೆ ಊರಿನಲ್ಲಿ ತಮ್ಮ ತಂದೆ-ತಾಯಿಗಳಿಗೆ ತೊಂದರೆಯಾಗುತ್ತಿದ್ದು, ತಮ್ಮನ್ನು ಆದಷ್ಟು ಬೇಗ ಊರಿಗೆ ಕಳುಹಿಸಿಕೊಡಿ‌ ಎಂದು ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.

Last Updated : May 15, 2020, 4:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.