ETV Bharat / state

ಬೆಳಗಾವಿಯಲ್ಲಿ ಭಾರತ-ಜಪಾನ್ ಜಂಟಿ ಸೇನಾ ಸಮರಾಭ್ಯಾಸ; ಮೈನವಿರೇಳಿಸುವ ಸೈನಿಕರ ಸಾಹಸ - ಬೆಳಗಾವಿಯಲ್ಲಿ ಭಾರತ-ಜಪಾನ್ ಸಮರಾಭ್ಯಾಸ

ಇಲ್ಲಿನ ಎಂಎಲ್​ಐಆರ್​ಸಿ ಕೇಂದ್ರದಲ್ಲಿ ಭಾರತೀಯ ಸೇನೆಯ 15ನೇ ಬೆಟಾಲಿಯನ್‌ನ ಮರಾಠಾ ಲೈಟ್ ಇನ್ಫೆಂಟ್ರಿ ರೆಜಿಮೆಂಟ್​‌ ಮತ್ತು ಜಪಾನ್ ಗ್ರೌಂಡ್ ಸೆಲ್ಫ್ ಡಿಫೆನ್ಸ್ ಫೋರ್ಸ್‌ನ 30ನೇ ದಳದ ಯೋಧರು ಸಮಾರಾಭ್ಯಾಸ ನಡೆಸಿದರು.

Indian and japan army joint exercise
ಬೆಳಗಾವಿಯಲ್ಲಿ ಭಾರತ-ಜಪಾನ್ ಸಮರಾಭ್ಯಾಸ
author img

By

Published : Mar 8, 2022, 7:00 PM IST

ಬೆಳಗಾವಿ: ಮರಾಠಾ ಲಘು ಪದಾತಿದಳ‌ ಕೇಂದ್ರದ ಆಶ್ರಯದಲ್ಲಿ ಭಾರತ-ಜಪಾನ್ ಸೈನಿಕರ ರೋಮಾಂಚನಕಾರಿ ಸಮರಾಭ್ಯಾಸ ನಡೆಯಿತು.

ಭಾರತೀಯ ಸೇನೆಯ 15ನೇ ಬೆಟಾಲಿಯನ್‌ನ ಮರಾಠಾ ಲೈಟ್ ಇನ್ಫೆಂಟ್ರಿ ರೆಜಿಮೆಂಟ್​‌ನ 40 ಯೋಧರು ಹಾಗೂ ಜಪಾನ್ ಗ್ರೌಂಡ್ ಸೆಲ್ಫ್ ಡಿಫೆನ್ಸ್ ಫೋರ್ಸ್‌ನ 30ನೇ ದಳದ 40 ಯೋಧರು ಸಮರಾಭ್ಯಾಸದಲ್ಲಿ ಪಾಲ್ಗೊಂಡು ಸಾಹಸ ಪ್ರದರ್ಶಿಸಿದರು. ಎಂಎಲ್​ಐಆರ್​ಸಿ ಕೇಂದ್ರದಲ್ಲಿ ಜಮಾವಣೆಗೊಂಡ ಉಭಯ ದೇಶದ ಸೈನಿಕರಿಗೆ ಕಾರ್ಯಾಚರಣೆಯ ಸಂಕ್ಷಿಪ್ತ ಮಾಹಿತಿ ‌ನೀಡಲಾಯಿತು.

ಬಳಿಕ ಬೆಳಗಾವಿ ತಾಲೂಕಿನ ಹಾಲಭಾವಿ ಗ್ರಾಮದ ಬಳಿ ಉಗ್ರರ ಅಡಗುತಾಣಗಳ ಮೇಲೆ ದಾಳಿ ನಡೆಸುವ ಕಾರ್ಯಾಚರಣೆಯ ಅಣಕು ಪ್ರದರ್ಶನ ನಡೆಸಲಾಯಿತು. ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಹೆಲಿಕಾಪ್ಟರ್​ನಿಂದ ಹಗ್ಗದ ಸಹಾಯದಿಂದ ಕೆಳಗಿಳಿದ ಯೋಧರು ಸಾಹಸ ಪ್ರದರ್ಶಿಸಿದರು.

ಬ್ರಿಗೇಡಿಯರ್ ಎನ್.ಎಸ್.ಸೋಹಾಲ್ ಹಾಗೂ ಮೇಜರ್ ಜನರಲ್ ‌ಭವನೀಷ್ ಕುಮಾರ್ ಹಾಗೂ ಜಪಾನ್ ‌ಸೇನೆಯ ಹಿರಿಯ ಅಧಿಕಾರಿಗಳ ‌ಸಮ್ಮುಖದಲ್ಲಿ ಅಣಕು ‌ಪ್ರದರ್ಶನ ನಡೆಯಿತು.

ಇದನ್ನೂ ಓದಿ: ಉಕ್ರೇನ್-ರಷ್ಯಾ ಯುದ್ಧ ಭಾರತದ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ: ನಿರ್ಮಲಾ ಸೀತಾರಾಮನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.