ETV Bharat / state

ಸೈಬರ್ ವಂಚನೆಯಾದ ತಕ್ಷಣವೇ ಮಾಹಿತಿ ನೀಡಿದ್ರೆ ಗಂಟೆಯೊಳಗೆ ಹಣ ಮರುಪಾವತಿ ಸಾಧ್ಯ: ಡಿಸಿಪಿ

ಆನ್‌ಲೈನ್ ವಂಚನೆ ತಡೆಯಲು ಸಾರ್ವಜನಿಕರೂ ಜಾಗೃತಿ ವಹಿಸುವ ಜೊತೆಗೆ ತಕ್ಷಣವೇ ಮಾಹಿತಿ ನೀಡುವಂತೆ ಡಿಸಿಪಿ ವಿಕ್ರಂ ಆಮಟೆ ಕೋರಿದ್ದಾರೆ.

ಡಿಸಿಪಿ ವಿಕ್ರಂ ಆಮಟೆ
ಡಿಸಿಪಿ ವಿಕ್ರಂ ಆಮಟೆ
author img

By

Published : Jul 3, 2021, 6:44 PM IST

ಬೆಳಗಾವಿ: ನಗರದಲ್ಲಿ ದಿನೇ ದಿನೇ ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿದ್ದು, ನಗರ ಪೊಲೀಸರು ಅಲರ್ಟ್ ಆಗಿದ್ದಾರೆ. 2020-21ನೇ ಸಾಲಿನಲ್ಲಿ 47 ಪ್ರಕರಣಗಳಲ್ಲಿ ಸೈಬರ್ ವಂಚಕರು 65 ಲಕ್ಷ ರೂ. ವಂಚಿಸಿದ್ದಾರೆ. ಈ ಪೈಕಿ ನಗರದ ಸಿಇಎನ್ ಪೊಲೀಸರು 29,13,300 ರೂ. ಜಪ್ತಿ ಮಾಡಿ ನೊಂದವರ ಖಾತೆಗೆ ವರ್ಗಾಯಿಸಿದ್ದಾರೆ.

ಸೈಬರ್ ವಂಚನೆಯಾದ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ರೆ ಹಣ ಸೇಫ್ ಆಗಿರಲಿದೆ. ವಂಚನೆಯಾದ ಒಂದು ಗಂಟೆಯೊಳಗೆ ದೂರು ನೀಡಿದವರ ಖಾತೆಗೆ ಹಣ ಮರುಪಾವತಿ ಸಾಧ್ಯವಾಗಲಿದೆ. ಸೈಬರ್ ವಂಚನೆ ನಡೆದು ತಕ್ಷಣ ಮಾಹಿತಿ ನೀಡಿದ್ರೆ ತನಿಖೆಗೆ ಅನುಕೂಲ ಆಗಲಿದೆ ಎಂದು ನಗರ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ವಿಕ್ರಂ ಆಮಟೆ ಜನರಲ್ಲಿ ಮನವಿ ಮಾಡಿದ್ದಾರೆ.

ಓಟಿಪಿ ನಂಬರ್ ಪಡೆದು ವಂಚನೆ, ಫೇಸ್‌ಬುಕ್ ಅಕೌಂಟ್ ಹ್ಯಾಕ್ ಮಾಡಿ ಹಣಕ್ಕಾಗಿ ಬೇಡಿಕೆ, ಮ್ಯಾಟ್ರಿಮೊನಿಯಲ್ ವೆಬ್‌ಸೈಟ್, ಆನ್‌ಲೈನ್ ಅಸ್ಟ್ರಾಲಾಜಿ, ಹರ್ಬಲ್ ಪ್ರೊಡಕ್ಟ್, ಕೆವೈಸಿ ಅಪ್ಡೇಟ್, ಫೇಕ್ ಮಾರ್ಕೇಟಿಂಗ್ ವೆಬ್‌ಸೈಟ್ ಸೇರಿ ವಿವಿಧ ರೀತಿಯ ಸೈಬರ್ ವಂಚನೆ ಪ್ರಕರಣಗಳನ್ನು ಸಿಇಎನ್ ಪೊಲೀಸರು ಬೇಧಿಸಿದ್ದಾರೆ. ಆನ್‌ಲೈನ್ ವಂಚನೆ ತಡೆಯಲು ಸಾರ್ವಜನಿಕರೂ ಜಾಗೃತಿ ವಹಿಸುವ ಜೊತೆಗೆ ತಕ್ಷಣವೇ ಮಾಹಿತಿ ನೀಡುವಂತೆ ಡಿಸಿಪಿ ವಿಕ್ರಂ ಆಮಟೆ ಕೋರಿದ್ದಾರೆ.

ಇದನ್ನೂ ಓದಿ : ಹೆಣ್ಣೆಂದು ಹಸುಗೂಸಿನ ಕತ್ತಿಗೆ ನೇಣು ಬಿಗಿದು ಕಿಟಕಿಯಲ್ಲಿ ಎಸೆದ ಕ್ರೂರಿ.. ಇಂಥವರೂ ಇರ್ತಾರೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.