ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅಥಣಿ ಪುರಸಭೆ ವತಿಯಿಂದ ಪಟ್ಟಣದ ಹಲವು ಕಡೆ ಸ್ಯಾನಿಟೈಸಿಂಗ್ ಮಾಡಲಾಯಿತು.
ತಾಲೂಕಿನಲ್ಲಿ 50ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ನಾಲ್ಕು ಜನ ಮೃತಪಟ್ಟಿದ್ದಾರೆ. ಇದರಿಂದ ಅಥಣಿ ಪಟ್ಟಣದ ವ್ಯಾಪಾರಸ್ಥರು ಸ್ವಯಂ ಘೋಷಿತವಾಗಿ ಜುಲೈ 12 ರವರೆಗೆ ಸಂಪೂರ್ಣ ವ್ಯಾಪಾರ ವಹಿವಾಟು ಬಂದ್ ಮಾಡಿದ್ದಾರೆ.
ಇತ್ತ ಪಟ್ಟಣದ ವಿಕ್ರಂಪೂರದ ನಿವಾಸಿ ಒಬ್ಬರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಬಡಾವಣೆಯ ಪ್ರಮುಖ ಬೀದಿಗಳಲ್ಲಿ ಪುರಸಭೆ ಅಧಿಕಾರಿಗಳು ಸ್ಯಾನಿಟೈಸಿಂಗ್ ಮಾಡಿ ಸೀಲ್ ಡೌನ್ ಮಾಡಿದ್ದಾರೆ.
ಮತ್ತೊಂದೆಡೆ ಡೆಂಗಿ ಮತ್ತು ಮಾದಗುಡಿ ಓಣಿಯ ನಿವಾಸಿಗಳು ಮಹಾಮಾರಿ ರೋಗಕ್ಕೆ ಹೆದರಿ ಸ್ವಂತ ಖರ್ಚಿನಿಂದ ಬಡಾವಣೆ ಸಂಪೂರ್ಣವಾಗಿ ಸ್ಯಾನಿಟೈಸಿಂಗ್ ಮಾಡಿ ಸೀಲ್ ಡೌನ್ ಮಾಡಿಕೊಂಡಿದ್ದಾರೆ.