ಚಿಕ್ಕೋಡಿ (ಬೆಳಗಾವಿ): ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು ಅಕ್ರಮ ಕಳ್ಳಭಟ್ಟಿ ಸಾಗಿಸುತ್ತಿದ್ದ ಇಬ್ಬರನ್ನು ರಾಯಬಾಗ ತಾಲೂಕಿನ ಮೊರಬ ಗ್ರಾಮದಲ್ಲಿ ವಶಕ್ಕೆ ಪಡೆದಿದ್ದಾರೆ.
ಕಂಕಣವಾಡಿ ಗ್ರಾಮದ ವಿಜಯ ಪರಶುರಾಮ ಮಾವರಕರ, ಚಿಂಚಲಿಯ ರಾಮಚಂದ್ರ ಯಶವಂತ ಪೋಳ್ ಬಂಧಿತ ಆರೋಪಿಗಳು. ಇವರು ದ್ವಿಚಕ್ರ ವಾಹನದಲ್ಲಿ ಕಳ್ಳಭಟ್ಟಿ ಸಾಗಿಸುವಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ. ಬಂಧಿತ ಆರೋಪಿಗಳ ಹತ್ತಿರ ಇದ್ದ 5 ಲೀ. ಕಳ್ಳಭಟ್ಟಿ ಮತ್ತು ಒಂದು ದ್ವಿಚಕ್ರ ವಾಹನವನ್ನು ಜಪ್ತಿ ಮಾಡಿ ಅಬಕಾರಿ ಉಪ ನಿರೀಕ್ಷಕ ಹಣಮಂತ ಪಟಾಟ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದಾಳಿಯಲ್ಲಿ ರಾಯಬಾಗ ವಲಯದ ಅಬಕಾರಿ ನಿರೀಕ್ಷಕ ಜಟ್ಟೆಪ್ಪಾ ಮಾಳಾಬಗಿ, ಉಪನಿರೀಕ್ಷಕ ವಿಜಯ ಮೆಳವಂಕಿ, ಅಬಕಾರಿ ರಕ್ಷಕರಾದ ಬಿ.ಹೆಚ್.ಪೂಜಾರಿ, ಬಿ.ಎಸ್.ಪಾಟೀಲ, ಜಗದೀಶ ಐಗಳಿ, ಮಾಹಾದೇವ ಸಾಲೂಟಗಿ, ಡಿ.ಎಂ.ಮುಜಾವರ, ಸದಾಶಿವ ಚಿಂಚಲಿ ಮತ್ತು ರುದ್ರಯ್ಯ ಪೂಜಾರಿ ಪಾಲ್ಗೊಂಡಿದ್ದರು.