ರಾಯಬಾಗ: ತಾಲೂಕಿನಿಂದ ವರ್ಗಾವಣೆಯಾದ ತಹಶೀಲ್ದಾರ್ ಚಂದ್ರಕಾಂತ ಭಜಂತ್ರಿ ಹಾಗೂ ಶಾಸಕ ದುರ್ಯೋಧನ ಐಹೊಳೆ ನಡುವೆ ಹಾವು ಮುಂಗುಸಿ ಆಟ ಕೊನೆಗೊಳ್ಳುವಂತೆ ಕಾಣುತ್ತಿಲ್ಲ. ಶಾಸಕರ ರಾಜಕೀಯ ಕುತಂತ್ರದಿಂದ ಒಬ್ಬ ದಕ್ಷ ಆಡಳಿತ ಅಧಿಕಾರಿಯನ್ನು ಮಧ್ಯರಾತ್ರಿ ಸಾಮಗ್ರಿಗಳ ಸಹಿತ ಮನೆ ಖಾಲಿ ಮಾಡಿಸಿರುವ ಆರೋಪ ಕೇಳಿ ಬಂದಿದೆ.
ಹೌದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ದಂಡಾಧಿಕಾರಿಯಾಗಿ ಕಾರ್ಯನಿರ್ವಹಿಸಿ ಕಳೆದ ಒಂದು ವಾರದ ಹಿಂದೆ ವರ್ಗಾವಣೆಗೊಂಡ ಚಂದ್ರಕಾಂತ ಭಜಂತ್ರಿ ಕಂಕಣವಾಡಿ ಗೈರಾಣ ಜಾಗದ ಸಲುವಾಗಿ ರಾಯಬಾಗ ಶಾಸಕ ದುರ್ಯೋಧನ ಐಹೊಳೆ ನಡುವೆ ಕಿತ್ತಾಟ ನಡೆದಿತ್ತು. ಶಾಸಕ ಐಹೊಳೆ ಸಿಎಂಗೆ ಪತ್ರ ಬರೆದು ಭಜಂತ್ರಿ ಅವರನ್ನು ರಾಯಬಾಗ ತಹಶೀಲ್ದಾರ್ ಹುದ್ದೆಯಿಂದ ವರ್ಗಾವಣೆ ಮಾಡಿಸಿದ್ದರು. ಆದರೆ ವರ್ಗಾವಣೆ ವಿರೋಧಿಸಿ ಚಂದ್ರಕಾಂತ ಭಜಂತ್ರಿ ಕೆಇಟಿಯಲ್ಲಿ ಅರ್ಜಿ ಸಲ್ಲಿಸಿ ಕೋರ್ಟ್ ಮೊರೆ ಹೋಗಿದ್ದಾರೆ.
ಹೆಚ್ಚಿನ ಓದಿಗಾಗಿ: ಗೋಮಾಳ ಜಾಗ ನುಂಗಣ್ಣರಿಗೆ ಬಿಸಿ ಮುಟ್ಟಿಸುತ್ತಿದ್ದ ರಾಯಬಾಗ ತಹಶೀಲ್ದಾರ್ ವರ್ಗಾವಣೆ
ವರ್ಗಾವಣೆಗೊಂಡ ತಹಶೀಲ್ದಾರ್ ಭಜಂತ್ರಿಗೆ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ತಂಗಿದ್ದರು. ಆದ್ರೆ ಶಾಸಕ ಐಹೊಳೆ ವಸತಿ ಶಾಲೆ ಖಾಲಿ ಮಾಡುವಂತೆ ಆದೇಶಿಸಿದ್ದಾರೆ. ಅದರಂತೆ ಚಂದ್ರಕಾಂತ ಭಜಂತ್ರಿ ಅವರನ್ನ ಸಮಾಜ ಕಲ್ಯಾಣ ಅಧಿಕಾರಿಗಳು ಮನೆಯನ್ನು ಖಾಲಿ ಮಾಡಿಸಿ ಶಾಸಕರ ಆದೇಶವನ್ನು ಪಾಲನೆ ಮಾಡಿದ್ದಾರೆ.
ಬೆಳೆಗ್ಗೆಯಿಂದ ರಾಯಬಾಗ ಶಾಸಕ ದುರ್ಯೋಧನ ಐಹೊಳೆ ನನಗೆ ತೊಂದರೆ ಕೊಡುತ್ತಿದ್ದಾರೆ. ನಮ್ಮ ಮೇಲೆ ಆಗುತ್ತಿರುವ ಅವ್ಯವಸ್ಥೆ ಬಗ್ಗೆ ಮೇಲಧಿಕಾರಿಗಳಿಗೂ ತಿಳಿಸಲಾಗಿದೆ. ರಾತ್ರಿ 11 ಗಂಟೆ ಸುಮಾರಿಗೆ ಅಧಿಕಾರಿಗಳು ನನ್ನನ್ನು ಹೊರ ಹಾಕಿದ್ದಾರೆ. ಖಾಸಗಿ ಮನೆ ನೀಡದಂತೆ ಮನೆ ಮಾಲೀಕರ ಮೇಲೆ ಶಾಸಕರು ಪ್ರಭಾವ ಬೀರಿದ್ದಾರೆ. ಇದರಿಂದ ನನಗೆ ಇಲ್ಲಿ ಯಾವ ಮನೆಯೂ ಸಿಕ್ಕಿಲ್ಲ. ಈಗ ಮುಂದೆ ಏನ್ ಮಾಡಬೇಕು ಎಂದು ತಮಗೆ ತೋಚುತ್ತಿಲ್ಲ. ನನ್ನನ್ನು ವರ್ಗಾವಣೆ ಅಷ್ಟೇ ಮಾಡಿದ್ದಾರೆ. ಕೆಇಟಿಯಲ್ಲಿ ಪ್ರಕರಣ ಬಾಕಿ ಇದೆ. ಅದರ ಆದೇಶ ಬರುವವರೆಗೂ ಕಾಯಬೇಕಿದೆ ಎಂದರು.
ಹೆಚ್ಚಿನ ಓದಿಗಾಗಿ: ರಾಯಬಾಗ ತಹಶೀಲ್ದಾರರ ವರ್ಗಾವಣೆ ಮಾಡಿ; ಸಿಎಂಗೆ ದುರ್ಯೋಧನ ಐಹೊಳೆ ಪತ್ರ