ETV Bharat / state

ಹೋಟೆಲ್​, ರೆಸಾರ್ಟ್​ಗಳಲ್ಲಿ ಭದ್ರತಾ ವ್ಯವಸ್ಥೆ ಪರಿಶೀಲಿಸುವಂತೆ ಡಿಜಿ,ಐಜಿಪಿಗೆ ಸಚಿವ ಆರಗ ಸೂಚನೆ - chandarashekar guruji murder case

ಚಂದ್ರಶೇಖರ ಗುರೂಜಿ ಹತ್ಯೆಯ ಹಿನ್ನೆಲೆಯಲ್ಲಿ ಪ್ರತಿಷ್ಠಿತ ಹೋಟೆಲ್‌ಗಳು ಹಾಗೂ ರೆಸಾರ್ಟ್​ಗಳಲ್ಲಿ ಭದ್ರತಾ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸುವಂತೆ ಗೃಹ ಸಚಿವರು ರಾಜ್ಯ ಪೊಲೀಸ್​ ಮಹಾನಿರ್ದೇಶಕರಿಗೆ ಸೂಚಿಸಿದ್ದಾರೆ.

Araga Jnanendra
ಹೋಟೆಲ್​,ರೆಸಾರ್ಟ್​ಗಳಲ್ಲಿ ಭದ್ರತಾ ವ್ಯವಸ್ಥೆ ಪರಿಶೀಲಿಸುವಂತೆ ಸೂಚಿಸಿದ ಆರಗ ಜ್ಞಾನೇಂದ್ರ
author img

By

Published : Jul 7, 2022, 8:36 AM IST

ಬೆಳಗಾವಿ: ಸರಳವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಭೀಕರ ಹತ್ಯೆಯ ಹಿನ್ನೆಲೆಯಲ್ಲಿ‌ ರಾಜ್ಯದ ಎಲ್ಲ ಪ್ರತಿಷ್ಠಿತ ಹೋಟೆಲ್​ಗಳು ಹಾಗೂ ಪಂಚತಾರಾ ರೆಸಾರ್ಟ್​ಗಳಲ್ಲಿ ಭದ್ರತಾ ಪರಿಶೀಲನೆ ನಡೆಸಬೇಕೆಂದು ಗೃಹ ಸಚಿವ ಆರಗ ಜ್ಞಾನೇಂದ್ರ, ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ನಿರ್ದೇಶಿಸಿದ್ದಾರೆ. ಬೆಳಗಾವಿಯಲ್ಲಿ ‌ಮಾತನಾಡಿದ ಸಚಿವರು, ಹೋಟೆಲ್​ಗಳು ಹಾಗೂ ರೆಸಾರ್ಟ್​ಗಳು ಪರವಾನಗಿ ಪಡೆಯುವ ಪೂರ್ವದಲ್ಲಿ ವಿಧಿಸಲಾದ ರಕ್ಷಣಾ ಸಂಬಂಧಿತ ನಿಯಮಾವಳಿಗಳನ್ನು ಪಾಲಿಸುತ್ತಿವೆಯೇ? ಎಂಬುದರ ಬಗ್ಗೆ ಪರಿಶೀಲನೆ ಆಗಬೇಕಿದೆ.

ಯಾವುದಾದರೂ ಹೋಟೆಲ್​ ಅಥವಾ ಪ್ರತಿಷ್ಠಿತ ರೆಸಾರ್ಟ್ ರಕ್ಷಣೆಯ ಸಂಬಂಧ ನಿಯಮಗಳನ್ನು ಪಾಲಿಸಲು ವಿಫಲವಾಗಿದ್ದರೆ ಅಗತ್ಯ ಕಾನೂನು ಕ್ರಮ ಜರುಗಿಸುವಂತೆ ನಿರ್ದೇಶಿಸಲಾಗಿದೆ. ಹೋಟೆಲ್ ವ್ಯವಸ್ಥಾಪಕರು ತಮ್ಮ ಅತಿಥಿಗಳಿಗೆ ಸರಿಯಾದ ರಕ್ಷಣಾ ವ್ಯವಸ್ಥೆ ಒದಗಿಸದೇ ಇರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಸಚಿವರು ಹೇಳಿದರು.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ.. ಸರಳ ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಜೀವನ ಹೀಗಿತ್ತು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.