ETV Bharat / state

ದುಷ್ಟಶಕ್ತಿಗಳನ್ನು ಮಟ್ಟ ಹಾಕಲು ಪೊಲೀಸರಿಗೆ ಆಧುನಿಕ ಶಸ್ತ್ರಾಸ್ತ್ರ ಒದಗಿಸಲಾಗಿದೆ: ಗೃಹ ಸಚಿವ ಆರಗ ಜ್ಞಾನೇಂದ್ರ - Araga jnanendra talk about duties of police

ದೇಶದ ನಾಗರಿಕರನ್ನು ಕಾಪಾಡಿ ಸಮಾಜದ ಸುವ್ಯವಸ್ಥೆ ಕಾಪಾಡುವ ಕೆಲಸ ನಮ್ಮ ಪೊಲೀಸರ ಮೇಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

home-minister-araga-jnanendra
ಕಾನ್ಸ್​ಟೇಬಲ್​ಗೆ ಸನ್ಮಾನ ಮಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ
author img

By

Published : Sep 8, 2021, 3:55 PM IST

ಬೆಳಗಾವಿ: ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರಿಗೆ ಆಧುನಿಕ ಉಪಕರಣ ಒದಗಿಸಲಾಗಿದೆ. ಆ ಮೂಲಕ ರಾಜ್ಯದಲ್ಲಿ ಅಪರಾಧ ಚಟುವಟಿಕೆ ಮಟ್ಟ ಹಾಕುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ

ನಗರದ ಕಂಗ್ರಾಳಿಯ ಕೆಎಸ್​ಆರ್​ಪಿಯ ಆವರಣದಲ್ಲಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ತರಬೇತಿ ಶಾಲೆಯ ಮೊದಲನೇ ತಂಡದ 171 ಸಶಸ್ತ್ರ ಪೊಲೀಸ್ ಕಾನ್ಸ್​ಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದೇಶದ ನಾಗರಿಕರನ್ನು ಕಾಪಾಡಿ ಸಮಾಜದ ಸುವ್ಯವಸ್ಥೆ ಕಾಪಾಡುವ ಕೆಲಸ ನಮ್ಮ ಪೊಲೀಸರ ಮೇಲಿದೆ. ನಮ್ಮ ದೇಶದ ಗಡಿಯಲ್ಲಿ ಸೈನಿಕರು ಮಾಡುವ ಕೆಲಸವನ್ನು ಪೊಲೀಸರು ರಾಜ್ಯದಲ್ಲಿ ಮಾಡಲಿದ್ದಾರೆ ಎಂದರು.

ಪೊಲೀಸ್ ಇಲಾಖೆ ಸಿಬ್ಬಂದಿಗೆ ಸಂಬಳದ ವಿಚಾರವಾಗಿ ನಾವು ಯಾವುದೇ ತಾರತಮ್ಯ ಮಾಡಿಲ್ಲ. ಬೇರೆ ಇಲಾಖೆಗೆ ಹೋಲಿಕೆ ಮಾಡಿದರೆ ನಮ್ಮ ಸಿಬ್ಬಂದಿಗೆ ಸಂಬಳ ಕಡಿಮೆ ಮಾಡಿಲ್ಲ. ಜೊತೆಗೆ ಅವರಿಗೆ ಬೇಕಾದ ಸೌಲಭ್ಯಗಳನ್ನು ನಾವು ನೀಡುತ್ತಿದ್ದೇವೆ. ಅವರ ಆರೋಗ್ಯ ಹಾಗೂ ಮಕ್ಕಳಿಗೆ ಉತ್ತಮ ಶಿಕ್ಷಣ ವ್ಯವಸ್ಥೆಯನ್ನು ಸರ್ಕಾರ ಮಾಡಿದೆ ಎಂದು ಹೇಳಿದರು.

ತರಬೇತಿ ಮುಗಿಸಿರುವ ಕರ್ತವ್ಯಕ್ಕೆ ಹೋಗುತ್ತಿರುವ 171 ಜನರಲ್ಲಿ ಎಸ್ ಎಸ್ ಎಲ್ ಶಿಕ್ಷಣ ಪಡೆದವರು 10 ಜನರು, ಪಿಯುಸಿ 34, ಪದವೀಧರರು 85, ಸ್ನಾತಕೋತ್ತರ 18, ಇಂಜಿನಿಯರಿಂಗ್‌ - 12, ಡಿಪ್ಲೊಮಾ 4 ಹಾಗೂ ಐಟಿಐ 8 ಜನ ಸೇರಿದಂತೆ ಎಲ್ಲರೂ ಉತ್ತಮ ವಿದ್ಯಾಭ್ಯಾಸ ಪಡೆದಿದ್ದಾರೆ ಎಂದು ತಿಳಿಸಿದರು.

ದೇಶಭಕ್ತಿ ಹಾಗೂ ಪ್ರಾಮಾಣಿಕ ಕೆಲಸ ಮಾಡಿ ನಮ್ಮ ಇಲಾಖೆ ಗೌರವ ಹೆಚ್ಚಿಸಬೇಕು. ಸ್ವಾತಂತ್ರ್ಯ ನಂತರ ಬ್ರಿಟಿಷರು ನಮಗೆ ಆಡಳಿತ ಇರುವುದಿಲ್ಲ ಎಂಬ ಕುಹಕ ಆಡಿದ್ದರು. ಆದರೆ, ನಮ್ಮ ಭಾರತ ಯಾವುದಕ್ಕೂ ಕಡಿಮೆ ಇಲ್ಲದಂತೆ ಆಡಳಿತ ನಡೆಸಿ ಜಗತ್ತಿನ ಗಮನ ಸೆಳೆದಿದೆ ಎಂದರು.

ಇದೇ ವೇಳೆ ವಿವಿಧ ಸ್ಪರ್ಧೆಯಲ್ಲಿ ಭಾಗಿಯಾಗಿ ವಿಜಯ ಶಾಲಿಗಳಾದ ಶರತ್ ಎಸ್.ವಿ, ನಿಂಗಪ್ಪ ಮಾನಗಾವಿ, ಶ್ರೀಧರ ಕೋಟಿ, ವಿಶಾಲ ಕತ್ತಿ, ಚಂದನ ಎಂ.ಸಿ., ಮಲ್ಲಿನಾಥ ಜಮಾದಾರ, ಧರ್ಮೇಶ್, ರಾವುತ್ತಪ್ಪ ಕೋಲಕಾರ ಅವರಿಗೆ ಪ್ರಶಸ್ತಿ, ಟ್ರೋಫಿ ನೀಡಿ ಗೃಹ ಸಚಿವರು ಅಭಿನಂದಿಸಿದರು.

ಓದಿ: ರಾಷ್ಟ್ರೀಯ ಉದ್ಯಾನದ ಹೆಸರು ಬದಲಾವಣೆ ಸಮರ್ಥಿಸಿಕೊಂಡ ಸಂಸದ ಪ್ರತಾಪ್ ಸಿಂಹ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.