ETV Bharat / state

ಮಳೆಯ ಅವಾಂತರದಿಂದ ರಸ್ತೆ ಸಂಚಾರ ಅಸ್ತವ್ಯಸ್ತ: ಧರೆಗುರುಳಿತು ಬೃಹತ್ ಆಲದ ಮರ - ಬೆಳಗಾವಿ ಲೇಟೆಸ್ಟ್​ ನ್ಯೂಸ್​

ಬೆಳಗಾವಿ ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಮುಂದುವರೆದಿದ್ದು, ಅನೇಕ ಗ್ರಾಮಗಳು ಜಲಾವೃತವಾಗಿವೆ. ಇನ್ನು ರಾಮದುರ್ಗ ತಾಲೂಕಿನಲ್ಲಿ ಬೃಹತ್ ಆಲದ ಮರವೊಂದು ಧರೆಗುರುಳಿದೆ.

ಧರೆಗುರುಳಿದ ಮರ
author img

By

Published : Oct 22, 2019, 11:12 AM IST

ಬೆಳಗಾವಿ/ಚಿಕ್ಕೋಡಿ: ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಮುಂದುವರೆದಿದ್ದು, ಹಲವು ಗ್ರಾಮಗಳು ಮತ್ತೊಮ್ಮೆ ಜಲಾವೃತವಾಗಿವೆ. ಜೊತೆಗೆ ರಾಮದುರ್ಗ ತಾಲೂಕಿನಲ್ಲಿ ಬೃಹತ್ ಆಲದ ಮರವೊಂದು ಧರೆಗುರುಳಿದೆ. ಜಮೀನುಗಳಲ್ಲಿ ನಿಂತ ನೀರಿನಿಂದಾಗಿ ರೈತರು ಹೈರಾಣಾಗಿದ್ದಾರೆ.

ಬೆಳಗಾವಿ ಮತ್ತು ಚಿಕ್ಕೋಡಿಯಲ್ಲಿ ಮಳೆಯ ಅವಾಂತರ

ಜಿಲ್ಲೆಯ ಅಥಣಿ, ಹುಕ್ಕೇರಿ, ಚಿಕ್ಕೋಡಿ, ಕಾಗವಾಡ, ರಾಯಭಾಗ, ನಿಪ್ಪಾಣಿ ತಾಲೂಕಿನ ಹಲವೆಡೆ ರಾತ್ರಿಯಿಡೀ ಸುರಿದ ಭಾರಿ ಮಳೆಯಿಂದ ಅಲ್ಲಲ್ಲಿ ರಸ್ತೆಗಳಿಗೆ ನೀರು ನುಗ್ಗಿ ಸಂಚಾರ ಅಸ್ತವ್ಯಸ್ತವಾಗಿದೆ. ರಾಮದುರ್ಗ ತಾಲೂಕಿನಲ್ಲಿ ಹರಿಯುವ ಮಲಪ್ರಭಾ ನದಿಯಲ್ಲಿ ಪ್ರವಾಹ ಉಂಟಾಗಿದ್ದು, ನದಿ ಪಾತ್ರದ ಹತ್ತಾರು ಹಳ್ಳಿಗಳು ಮುಳುಗಡೆಯಾಗಿವೆ.

ಮಲಪ್ರಭಾ ನದಿಗೆ ಮತ್ತೆ ನೀರು:
ಮಲಪ್ರಭಾ ಜಲಾಶಯದಿಂದ ಮತ್ತಷ್ಟು ನೀರನ್ನು ಬಿಡುಗಡೆ ಮಾಡಲಾಗಿದ್ದು, ರಾಮದುರ್ಗ ತಾಲೂಕಿನ ಸುರೇಬಾನ, ಹಿರೇ ಹಂಪಿಹೊಳಿ, ಚಿಕ್ಕ ಹಂಪಿಹೊಳಿ ಸೇರಿದಂತೆ ಅನೇಕ ಗ್ರಾಮದಲ್ಲಿ ಮತ್ತೆ ಪ್ರವಾಹ ಉಂಟಾಗಿದೆ. ನಿನ್ನೆ ಮಲಪ್ರಭಾ ನದಿಗೆ ಸುಮಾರು 2300 ಕ್ಯೂಸೆಕ್ ನೀರನ್ನು ಬಿಡಲಾಗಿದೆ.

ಇನ್ನು, ಬೆಳಗಾವಿ-ರಾಮದುರ್ಗ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಆಗಿದೆ. ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಬಳಿ ಚಿಕ್ಕೋಡಿ - ಮೀರಜ್​ ಹೆದ್ದಾರಿ ಮೇಲೆ ನೀರು ನಿಂತಿದೆ. ಇನ್ನೇನಾದರೂ ಸ್ವಲ್ಪ ನೀರು ಹೆಚ್ಚಾದರೂ ಸಹ ಹೆದ್ದಾರಿ ಸಂಪೂರ್ಣ ಬಂದ್​ ಆಗುವ ಸಾಧ್ಯತೆ ಇದೆ.

Intro:ಮುಂದುವರೆದ ಮಳೆಯ ಅವಾಂತರ : ಧರೆಗೆ ಉರುಳಿದ ಬೃಹತ್ ಆಲದ ಮರ

ಬೆಳಗಾವಿ : ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಮುಂದುವರೆದಿದ್ದು ಅನೇಕ ಗ್ರಾಮಗಳು ಜಲಾವೃತವಾಗಿವೆ. ಜೊತೆಗೆ ರಾಮದುರ್ಗ ತಾಲೂಕಿನಲ್ಲಿ ಬೃಹತ್ ಆಲದ ಮರ ಧರೆಗೆ ಉರುಳಿದ್ದು ವಾಹನ ಸಂಚಾರಕ್ಕೆ ಅಡಚನೆಯಾಗಿದೆ.

Body:ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನಲ್ಲಿ ಹರಿಯುವ ಮಲಪ್ರಭಾ ನದಿಯಲ್ಲಿ ಪ್ರವಾಹ ಉಂಟಾಗಿದ್ದು ನದಿ ಪಾತ್ರದ ಹತ್ತಾರು ಹಳ್ಳಿಗಳು ಮುಳುಗಡೆಯಾವಿವೆ. ಇಷ್ಟೇ ಅಲ್ಲದೆ ಭಾರಿ ಪ್ರಮಾನದಲ್ಲಿ ಗಾಳಿ ಸಹಿತ ಮಳೆಯಾಗುತ್ತಿದ್ದು ದೊಡ್ಡ ಗಾತ್ರದ ಆಲದ ಮರಗಳು ನೆಲಕ್ಕೆ ಉರುಳಿದ್ದು ಬೆಳಗಾವಿ ರಾಮದುರ್ಗ ರಸ್ತೆಯ ವಾಹನ ಸಂಚಾರ ಬಂದ್ ಆಗಿದೆ. ಅದೃಷ್ಟವಶಾತ್ ಮರ ಬಿದ್ದ ಜಾಗದಲ್ಲಿ ಯಾರು ಇರದ ಕಾರಣ ಪ್ರಾಣಾಪಾಯ ಸಂಭವಿಸಿಲ್ಲ.

Conclusion:ಮತ್ತೆ ಮಲಪ್ರಭಾ ನದಿಗೆ ನೀರು : ಮಲಪ್ರಭಾ ಜಲಾಶಯದಿಂದ ಮತ್ತಷ್ಟು ನೀರು ಬಿಡುಗಡೆ ಮಾಡಲಾಗಿದ್ದು ರಾಮದುರ್ಗ ತಾಲೂಕಿನ ಸುರೇಬಾನ, ಹಿರೇ ಹಂಪಿಹೊಳಿ, ಚಿಕ್ಕ ಹಂಪಿಹೊಳಿ ಸೇರಿದಂತೆ ಅನೇಕ ಗ್ರಾಮದಲ್ಲಿ ಮತ್ತೆ ಪ್ರವಾಹ ಉಂಟಾಗಿದೆ. ನಿನ್ನೆ ಮಲಪ್ರಭಾ ನದಿಗೆ ಸುಮಾರು 2300 ಕ್ಯೂಸೆಕ್ ನೀರು ಬಿಡಲಾಗಿದೆ.

ವಿನಾಯಕ ಮಠಪತಿ
ಬೆಳಗಾವಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.