ಚಿಕ್ಕೋಡಿ: ಭಾರತೀಯ ಸೇನೆಯಲ್ಲಿ 17 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿ ಸ್ವಗ್ರಾಮಕ್ಕೆ ಆಗಮಿಸಿದ 10 ಯೋಧರನ್ನು ವಿಶೇಷವಾಗಿ ಸ್ವಾಗತಿಸಲಾಯಿತು.
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಶಿವಾಪೂರ ಹಾಲಿ ಸೈನಿಕರು, ಕುಟುಂಬಸ್ಥರು, ಮಕ್ಕಳು, ಕರುನಾಡು ಸೈನಿಕ ತರಬೇತಿಯ ಭಾವಿ ಸೈನಿಕರು ಹಾಗೂ ಗ್ರಾಮದ ಮಹಿಳೆಯರು ಸ್ವಗ್ರಾಮಕ್ಕೆ ಆಗಮಿಸಿದ 10 ಯೋಧರಿಗೆ ಆರತಿ ಬೆಳಗಿ ಆತ್ಮೀಯವಾಗಿ ಅದ್ಧೂರಿಯಿಂದ ಬರಮಾಡಿಕೊಂಡರು.
ಶಿವಾಪೂರ ಗ್ರಾಮದ ಬಸ್ ನಿಲ್ದಾಣದಿಂದ ಎಲ್ಲಾ ದೇವಾಲಯಗಳ ದರ್ಶನ ಪಡೆದು, ವೇದಿಕೆಯ ಉದ್ದಕ್ಕೂ ಯೋಧರ ಮೆರವಣಿಗೆ ಮಾಡಲಾಯಿತು. ದಾರಿಯುದ್ದಕ್ಕೂ ಗ್ರಾಮಸ್ಥರು ಯೋಧರ ಪರ ಘೋಷಣೆ ಕೂಗಿದರು. ಮೆರವಣಿಗೆ ಮೂಲಕ ಬಂದ ಯೋಧರನ್ನು ಹಾಲಿ ಸೈನಿಕರು ಹಾಗೂ ಕುಟುಂಬಸ್ಥರು ಒಂದೆಡೆ ಸೇರಿ ಸನ್ಮಾನಿಸಿದರು.
ಇದನ್ನು ಓದಿ: ಗೋಹತ್ಯೆ ನಿಷೇಧ ವಿಧೇಯಕ ಅಂಗೀಕಾರ: ಇಂದು ತುರ್ತು ಶಾಸಕಾಂಗ ಸಭೆ ಕರೆದ ಸಿದ್ದರಾಮಯ್ಯ
ಹಗಲಿರುಳೆನ್ನದೆ ದೇಶಕ್ಕಾಗಿ ದುಡಿದ ವೀರ ಯೋಧರಿಗೆ ಸನ್ಮಾನಿಸುವುದರ ಮೂಲಕ ಇತರರಿಗೆ ಮತ್ತಷ್ಟು ದೇಶಾಭಿಮಾನ ಹೆಚ್ಚಿಸಿ ಯುವ ದೇಶ ಭಕ್ತರಿಗೆ ಸೈನ್ಯಕ್ಕೆ ಸೇರಲು ಪ್ರೇರಣೆ ನೀಡಿದ ಕೀರ್ತಿ ಶಿವಾಪೂರ ಗ್ರಾಮದ ಮಾಜಿ ಯೋಧರಿಗೆ ಹಾಗೂ ಗ್ರಾಮಸ್ಥರಿಗೆ ಸಲ್ಲುತ್ತದೆ.