ಚಿಕ್ಕೋಡಿ : ಗ್ರಾಮ ಪಂಚಾಯತಿ ಚುನಾವಣಾ ವಿಜಯೋತ್ಸವ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸುಲ್ತಾಪುರ ಗ್ರಾಮದಲ್ಲಿ ನಡೆದಿದೆ.
ಸೋತ ಅಭ್ಯರ್ಥಿ ಮನೆ ಮುಂದೆ ಗೆದ್ದ ವ್ಯಕ್ತಿ ವಿಜಯೋತ್ಸವ ಆಚರಿಸಿದ್ದಾನೆ. ಈ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು ಕೊಲೆಯಲ್ಲಿ ಅಂತ್ಯ ಕಂಡಿದೆ.
ಸುಲ್ತಾನಪೂರ ಗ್ರಾಮದ ಬಶೀರ ಮುಲ್ಲಾ, ಶಬ್ಬೀರ ಮುಲ್ಲಾ ಗ್ರಾ.ಪಂ ಚುನಾವಣೆಗೆ ಸ್ಪರ್ಧಿಸಿದ್ದ ಸ್ಪರ್ಧಿಗಳು. ಚುನಾವಣೆಯಲ್ಲಿ ಬಶೀರ ಮುಲ್ಲಾಗೆ ಗೆಲುವಾಗಿದ್ದು, ಶಬ್ಬೀರ ಮುಲ್ಲಾಗೆ ಸೋಲಾಗಿತ್ತು. ಈ ಗಲಾಟೆಯಲ್ಲಿ ಗೆದ್ದ ಬಶೀರ ಮುಲ್ಲಾನ ಸಹೋದರ ಶಾನೂರ ಮುಲ್ಲಾ (50) ಸಾವಿಗೀಡಾಗಿದ್ದಾನೆ.
ಶಬ್ಬೀರ ಮುಲ್ಲಾ ಸಂಬಂಧಿಕರು ಶಾನೂರ ಮೇಲೆ ಮಾರಕಾಸ್ತ್ರಗಳಿಂದ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಇದೇ ವೇಳೆ ವ್ಯಕ್ತಿ ಸಾವನ್ನಪ್ಪಿದ್ದಾನೆ. ಘಟನೆ ನಡೆದ ಒಂದು ಗಂಟೆಯೊಳಗೆ ಪ್ರಕರಣಕ್ಕೆ ಸಂಬಂಧಪಟ್ಟ 6 ಜನ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.