ETV Bharat / state

ಚುನಾವಣೆ ಮರೆತ ಮತದಾರ: ಗೋಕಾಕ್​ನಲ್ಲಿ ಲಸಿಕೆ ಹಾಕಿಸಿಕೊಳ್ಳಲು ಕ್ಯೂ ನಿಂತ ಜನ

author img

By

Published : Apr 17, 2021, 5:02 PM IST

ಚುನಾವಣೆಗೆ ಜನ ನೀರಸ ಪ್ರತಿಕ್ರಿಯೆ ನೀಡಿದ್ದು, ಗೋಕಾಕ ಕ್ಷೇತ್ರದಲ್ಲಿ ಬಹುತೇಕ ಮತಗಟ್ಟೆಗಳು ಖಾಲಿ ಖಾಲಿಯಾಗಿ ಕಂಡುಬಂದವು. ಕಾರಣ ಜನ ಕೋವಿಡ್​ ವ್ಯಾಕ್ಸಿನ್​ ಹಾಕಿಸಿಕೊಳ್ಳಲು ಉತ್ಸಾಹ ತೋರಿದ್ದಾರೆ.

Gokak
ಗೋಕಾಕ

ಗೋಕಾಕ(ಬೆಳಗಾವಿ): ಕೊರೊನಾ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆ ಜನರು ಜಾಗೃತರಾಗಿದ್ದು, ಬೆಳಗಾವಿ ಲೋಕಸಭಾ ಚುನಾವಣೆಯನ್ನೂ ಲೆಕ್ಕಿಸದೆ ಕೋವಿಡ್​ ವ್ಯಾಕ್ಸಿನ್​ ಹಾಕಿಸಿಕೊಳ್ಳಲು ಮುಂದಾಗಿದ್ದಾರೆ.

ಗೋಕಾಕ್​ನಲ್ಲಿ ಲಸಿಕೆ ಹಾಕಿಸಿಕೊಳ್ಳಲು ಕ್ಯೂ ನಿಂತ ಜನ

ಚುನಾವಣೆಗೆ ಜನ ನೀರಸ ಪ್ರತಿಕ್ರಿಯೆ ನೀಡಿದ್ದು, ಗೋಕಾಕ್​ನಲ್ಲಿ ಮತದಾನ ಮುಖ್ಯವಲ್ಲ ಜೀವ ಮುಖ್ಯ ಎಂದು ಜನತೆ ಸಾಬೀತುಪಡಿಸಿದಂತಿತ್ತು. ಆದರೆ, ಲಸಿಕಾ ಕೇಂದ್ರ ಗೋಕಾಕ ಸರ್ಕಾರಿ ಆಸ್ಪತ್ರೆಯಲ್ಲಿ ಸಾಮಾಜಿಕ ಅಂತರ ಮಾತ್ರ ಗಾಳಿಗೆ ತೂರಿ ಜನರು ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಸರತಿ ಸಾಲಿನಲ್ಲಿ ನಿಂತಿರುವುದು ಕಂಡುಬಂತು. ಇನ್ನು ಆರೋಗ್ಯ ಅಧಿಕಾರಿಗಳು ಸಹಿತ ನಿರ್ಲಕ್ಷ್ಯ ವಹಿಸಿದ್ದು, ಜನರನ್ನು ಸಾಮಾಜಿಕ ಅಂತರದಲ್ಲಿ ನಿಲ್ಲಿಸಲು ವಿಫಲರಾಗಿದ್ದಾರೆ.

ಇನ್ನು ಗೋಕಾಕ ಕ್ಷೇತ್ರದಲ್ಲಿ ಬಹುತೇಕ ಮತಗಟ್ಟೆಗಳು ಖಾಲಿ ಖಾಲಿಯಾಗಿದ್ದು, ಜನರು ಜೀವಕ್ಕೆ ಹೆದರಿ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಮುಂದಾಗಿದ್ದಾರೆ. ಗೋಕಾಕ ಪಟ್ಟಣದಲ್ಲಿ ಜನರು ಮತದಾನದತ್ತ ಹೆಚ್ಚು ಒಲವು ತೋರಲಿಲ್ಲ.

ಇದನ್ನೂ ಓದಿ: ಗೋಕಾಕ್​ನಲ್ಲಿ ಮತದಾನ ಮಾಡಿದ ಜಯಶ್ರೀ ರಮೇಶ್ ಜಾರಕಿಹೊಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.