ETV Bharat / state

ಪಂಚಮಸಾಲಿ ಸಮಾಜಕ್ಕೆ ಡಿಸಿಎಂ ಸ್ಥಾನ ನೀಡಿ : ಮಾಜಿ ಸಚಿವ ಶಶಿಕಾಂತ ನಾಯಿಕ ಆಗ್ರಹ - ಈಟಿವಿ ಭಾರತ್​ ಕನ್ನಡ ನ್ಯೂಸ್

ಕಾಂಗ್ರೆಸ್ ಪಕ್ಷ ಬಹುಮತ ಪಡೆಯಲು ಲಿಂಗಾಯತ ಪಂಚಮಸಾಲಿ ಸಮಾಜ ಸಂಪೂರ್ಣ ಬೆಂಬಲ ನೀಡಿದೆ ಎಂದು ಶಶಿಕಾಂತ ನಾಯಿಕ ಹೇಳಿದರು.

ಮಾಜಿ ಸಚಿವ ಶಶಿಕಾಂತ ನಾಯಿಕ
ಮಾಜಿ ಸಚಿವ ಶಶಿಕಾಂತ ನಾಯಿಕ
author img

By

Published : May 16, 2023, 8:39 PM IST

ಕಾಂಗ್ರೆಸ್ ಪಕ್ಷಕ್ಕೆ ಲಿಂಗಾಯತ ಪಂಚಮಸಾಲಿ ಸಮಾಜ ಸಂಪೂರ್ಣ ಬೆಂಬಲ ನೀಡಿದೆ.

ಬೆಳಗಾವಿ : ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಲಿಂಗಾಯತ ಪಂಚಮಸಾಲಿ ಸಮಾಜ ಸಂಪೂರ್ಣ ಬೆಂಬಲ ನೀಡಿದ್ದು. ನಮ್ಮ ಸಮಾಜಕ್ಕೆ ಒಂದು ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಮಾಜಿ ಸಚಿವ ಶಶಿಕಾಂತ ನಾಯಿಕ ಕಾಂಗ್ರೆಸ್ ನಾಯಕರಿಗೆ ಒತ್ತಾಯಿಸಿದರು. ಇಂದು ನಗರದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದರು.

2023ರ ಚುನಾವಣೆಯಲ್ಲಿ ಕರ್ನಾಟಕ ಜನ ಬದಲಾವಣೆ ಬಯಸಿದ ಹಿನ್ನೆಲೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಹುಮತದಿಂದ ಸರ್ಕಾರ ರಚಿಸುತ್ತಿದೆ. ಇದರಿಂದ ನಮಗೂ ಬಹಳಷ್ಟು ಖುಷಿಯಾಗಿದೆ. ಬಿಜೆಪಿಯಲ್ಲಿ ಬಹಳ ಮನಸ್ಸಿಗೆ ನೋವಾಗಿದೆ ಎಂದು ಮಾಜಿ ಸಿಎಂ ಜಗದೀಶ್​ ಶೆಟ್ಟರ್ ಕಾಂಗ್ರೆಸ್​ ಸೇರಿದ್ದು, ಜೊತೆಗೆ ಅನೇಕ ನಾಯಕರು ಪಕ್ಷ ಬಿಟ್ಟಿದ್ದರಿಂದ ಬದಲಾವಣೆ ಆಗಿದೆ. ಇದರ ಪರಿಣಾಮ ಕಾಂಗ್ರೆಸ್​ನಿಂದ 39 ಲಿಂಗಾಯತ ಶಾಸಕರು ಆರಿಸಿ ಬಂದಿದ್ದಾರೆ. ಇದರಲ್ಲಿ 12 ಪಂಚಮಸಾಲಿ ಘಟಾನುಘಟಿ ನಾಯಕರು ಆರಿಸಿ ಬಂದಿದ್ದಾರೆ ಎಂದು ಶಶಿಕಾಂತ ನಾಯಿಕ ಹೇಳಿದರು.

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿಯವರಿಗೆ ನಮ್ಮ ಒತ್ತಾಯವಿದೆ. 12 ಪಂಚಮಸಾಲಿ‌ ಶಾಸಕರಲ್ಲಿ ಕೆಲವರಿಗೆ ಮಂತ್ರಿ ಸ್ಥಾನ‌ ನೀಡಬೇಕು. ಬೇರೆ ಸಮಾಜದವರು ಮುಖ್ಯಮಂತ್ರಿ ಸ್ಥಾನ ಕೇಳುತ್ತಿರುವ ವಿಚಾರವಾಗಿ ಎಂ.ಬಿ. ಪಾಟೀಲ ಸೇರಿ ಅನೇಕರು ಸಿಎಂ‌ ರೇಸ್​ನಲ್ಲಿದ್ದಾರೆ. ಹೀಗಾಗಿ ಅವರಿಗೂ ಕೂಡ ಸ್ಥಾ‌ನಮಾನ‌ ಕೊಡಬೇಕು. ವಿಜಯಾನಂದ ಕಾಶಪ್ಪನವರ, ಲಕ್ಷ್ಮೀ ಹೆಬ್ಬಾಳ್ಕರ್, ವಿನಯ ಕುಲಕರ್ಣಿ, ಸಿದ್ದು ಸವದಿ‌ ಸೇರಿ ಅನೇಕ ಮುಖಂಡರು‌ ನಮ್ಮಲ್ಲಿ ಮುಂಚೂಣಿಯಲ್ಲಿದ್ದಾರೆ.

ಸಮಾಜಕ್ಕೆ ಗೌರವ ಕೊಡುವ ನಿಟ್ಟಿನಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಒಂದು ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು. ಉಪಮುಖ್ಯಮಂತ್ರಿ ಸ್ಥಾನ ನೀಡುವುದರಿಂದ ಕಾಂಗ್ರೆಸ್ ಪಕ್ಷ ಮತ್ತು ಸಮಾಜಕ್ಕೆ ಒಳ್ಳೆಯ ಸಂದೇಶ ಹೋಗುತ್ತದೆ. ಈ ಮೂಲಕ ಕಾಂಗ್ರೆಸ್ ನಾಯಕರಿಗೆ ವಿನಮ್ರವಾಗಿ ಒತ್ತಾಯಿಸುತ್ತಿದ್ದೇವೆ ಎಂದು ಶಶಿಕಾಂತ ನಾಯಿಕ ಎಂದರು.

ಬಳಿಕ ಮಾತನಾಡಿದ ಕಾಡಾ ಮಾಜಿ ಅಧ್ಯಕ್ಷ ಅಡಿವೇಶ ಇಟಗಿ, ಕಾಂಗ್ರೆಸ್ ಜಾತ್ಯಾತೀತವಾಗಿದ್ದು, ಎಲ್ಲ ಸಮಾಜಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಪಕ್ಷ. ಹೈಕಮಾಂಡ್ ಮತ್ತು ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಆಯ್ಕೆ ಮಾಡುವುದು ಕಾಂಗ್ರೆಸ್​ನಲ್ಲಿ ಪದ್ಧತಿಯಿದೆ. ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ ಇಬ್ಬರು ಸಿಎಂ‌ ರೇಸ್ ನಲ್ಲಿದ್ದಾರೆ. ಇವರನ್ನು ಬಿಟ್ಟು ಎಂ.ಬಿ. ಪಾಟೀಲ, ಲಕ್ಷ್ಮೀ ಹೆಬ್ಬಾಳ್ಕರ್ ಕೂಡ ರೇಸ್ ನಲ್ಲಿದ್ದಾರೆ. ಮುಖ್ಯಮಂತ್ರಿ ಸ್ಥಾನ ನಮ್ಮ‌ ಸಮಾಜಕ್ಕೆ ಕೊಟ್ಟರೆ ಬಹಳ ಒಳ್ಳೆಯದು.

ಒಂದು ವೇಳೆ ಮುಖ್ಯಮಂತ್ರಿ ಸ್ಥಾನ ನೀಡದೇ ಹೋದರೆ. ನಮ್ಮ‌ ಸಮಾಜಕ್ಕೆ ಒಂದು ಉಪಮುಖ್ಯಮಂತ್ರಿ ಸ್ಥಾನ ಮತ್ತು ಪ್ರಮುಖ ಖಾತೆ‌ ನೀಡಬೇಕು. ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪಂಚಮಸಾಲಿ ಸಮಾಜದಿಂದ ಕಾಂಗ್ರೆಸ್ ಗೆ ಬಹಳಷ್ಟು ಲಾಭವಾಗಿದೆ. ಹೀಗಾಗಿ ನಮ್ಮ ಸಮಾಜದ ಶಾಸಕರಲ್ಲಿ ಒಬ್ಬರನ್ನು ಡಿಸಿಎಂ‌ ಮಾಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಜಿಲ್ಲಾ ಗೌರವಾಧ್ಯಕ್ಷ ಆರ್.ಕೆ. ಪಾಟೀಲ, ಯುವ ಘಟಕದ ಜಿಲ್ಲಾಧ್ಯಕ್ಷ ಗುಂಡು ಪಾಟೀಲ, ನಗರ ಘಟಕದ ಅಧ್ಯಕ್ಷ ರಾಜು ಮಗದುಮ್ಮ, ಶಿವಾನಂದ ಸಂಗನಾಯ್ಕರ್ ಸೇರಿ ಮತ್ತಿತರರು ಇದ್ದರು.

ಇದನ್ನೂ ಓದಿ : ಮೇ 18 ಕ್ಕೆ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ?: ವಿಧಾನಸೌಧದಲ್ಲಿ ಚುರುಕಾಗಲಿದೆ ಆಡಳಿತ ಯಂತ್ರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.