ETV Bharat / state

ಪೋಲಿಸ್ ಸಿಬ್ಬಂದಿಗೆ ಉಚಿತ ಸ್ಯಾನಿಟೈಸರ್, ಮಾಸ್ಕ್ ವಿತರಣೆ ಮಾಡಿದ ಗಜಾನನ ಮಂಗಸೂಳಿ

ವಿಶ್ವವ್ಯಾಪಿ ಸಾವಿರಾರು ಜನರನ್ನು ಬಲಿ ಪಡೆದಿರುವ ಕೊರೊನಾ ನಮ್ಮ ದೇಶದಲ್ಲಿ ಹರಡದಂತೆ ಮತ್ತು ಹೆಚ್ಚಿನ ಸಾವು ನೊವುಗಳಾಗದಂತೆ ತಡೆಯಲು ಜನರು ಮನೆಯಲ್ಲಿ ಉಳಿಯುವ ಮೂಲಕ ಪೊಲೀಸರಿಗೆ ಸಹಕರಿಸಬೇಕು ಎಂದು ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಪೋಲಿಸ್ ಸಿಬ್ಬಂದಿಗೆ ಉಚಿತ ಸ್ಯಾನಿಟೈಜರ್ ಮತ್ತು ಮಾಸ್ಕ್ ವಿತರಣೆ

author img

By

Published : Apr 2, 2020, 8:12 AM IST

ಅಥಣಿ: ತಾಲೂಕಿನಲ್ಲಿ ಕೊರೊನಾ ವೈರಸ್ ಹರಡದಂತೆ ತಡೆಯುವ ನಿಟ್ಟಿನಲ್ಲಿ 144 ಜಾರಿಗೊಳಿಸುವ ಮೂಲಕ ಹೆಚ್ಚು ಜನಸಂಚಾರ ಮತ್ತು ಗುಂಪು ಕೂಡದಂತೆ ಆದ್ಯತೆ ನೀಡಿ ಅಥಣಿ ತಾಲೂಕಿನ ಶಾಂತಿ ಸುವ್ಯವಸ್ಥೆಗೆ ಶ್ರಮಿಸುತ್ತಿರುವ ಪೊಲೀಸ್​ ಸಿಬ್ಬಂದಿಗೆ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಎಂಭತ್ತಕ್ಕೂ ಹೆಚ್ಚು ಸಿಬ್ಬಂದಿಗೆ ಉಚಿತವಾಗಿ ಮಾಸ್ಕ್ ವಿತರಣೆ ಮತ್ತು ಸ್ಯಾನಿಟೈಜರ್ ವಿತರಣೆ ಮಾಡಿದರು.

ಈ ವೇಳೆ ಮಾತನಾಡಿದ ಗಜಾನನ ಮಂಗಸೂಳಿ ಸಮಾಜದ ಸ್ವಾಸ್ಥ್ಯ ಕಾಯುವ ನಿಟ್ಟಿನಲ್ಲಿ ಮತ್ತು ಸಾರ್ವಜನಿಕ ಹಿತಾಸಕ್ತಿಗಾಗಿ ಶ್ರಮವಹಿಸಿ ಕೆಲಸವನ್ನು ಅಚ್ಚುಕಟ್ಟಾಗಿ ನೀರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಯ ಹಿತ ಕಾಯುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ. ನಿತ್ಯವೂ ಜನಹಿತಕ್ಕಾಗಿ ಕೆಲಸದಲ್ಲಿ ತೊಡಗುವ ಪೋಲಿಸ್ ಸಿಬ್ಬಂದಿ ಆರೋಗ್ಯವಂತರಾಗಿರಬೇಕು ಆದ್ದರಿಂದ ಅವರಿಗೆ ಇಂದು ಉಚಿತ ಮಾಸ್ಕ್ ಮತ್ತು ಸ್ಯಾನಿಟೈಜರ್ ವಿತರಣೆ ಮಾಡಲಾಗಿದೆ.

ವಿಶ್ವವ್ಯಾಪಿ ಸಾವಿರಾರು ಜನರನ್ನು ಬಲಿ ಪಡೆದಿರುವ ಕೊರೊನಾ ನಮ್ಮ ದೇಶದಲ್ಲಿ ಹರಡದಂತೆ ಮತ್ತು ಹೆಚ್ಚಿನ ಸಾವುನೊವುಗಳಾಗದಂತೆ ತಡೆಯಲು ಜನರು ಮನೆಯಲ್ಲಿ ಉಳಿಯುವ ಮೂಲಕ ಪೊಲೀಸರಿಗೆ ಸಹಕರಿಸಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.