ಬೆಳಗಾವಿ: ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪಾಲಿಕೆ ಮಾಜಿ ಸದಸ್ಯ ದಿನೇಶ ನಾಶಿಪುಡಿ ಐಸ್ ಮೇಲೆ ಮಲಗಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಬೆಳಗಾವಿ ಮಹಾನಗರ ಪಾಲಿಕೆ ಆವರಣ ಎದುರು ಪಾಲಿಕೆ ಮಾಜಿ ಸದಸ್ಯ ದಿನೇಶ ನಾಶಿಪುಡಿ ಐಸ್ ಮೇಲೆ ಮಲಗಿ ಪ್ರತಿಭಟನೆ ನಡೆಸಿದರು. ತಾಲೂಕಿನ ಬಸವನಕೊಪ್ಪ ನೀರು ಶುದ್ಧೀಕರಣ ಘಟಕದ ಕಾಮಗಾರಿ ಅನುಷ್ಠಾನದಲ್ಲಿ ಅವ್ಯವಹಾರ ಆಗಿದೆ. ಈ ಕುರಿತು ಪಾಲಿಕೆ ಆಯುಕ್ತರನ್ನೊಳಗೊಂಡ ಸಮಿತಿ ಅವ್ಯವಹಾರದ ಬಗ್ಗೆ ವರದಿ ನೀಡಿದೆ.
ಮಹಾನಗರ ಜನರ ತೆರಿಗೆ ಹಣದಿಂದ ಶುದ್ಧೀಕರಣ ಘಟಕ ನಿರ್ಮಿಸಲಾಗಿದೆ. ಹೀಗಾಗಿ ತಕ್ಷಣವೇ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಪಾಲಿಕೆಯ ಮಾಜಿ ಸದಸ್ಯ ದಿನೇಶ ನಾಶಿಪುಡಿ ಆಗ್ರಹಿಸಿದ್ದಾರೆ.