ETV Bharat / state

ಭ್ರಮೆಯಲ್ಲಿರುವ ರಾಜ್ಯ ಕಾಂಗ್ರೆಸ್ ನಾಯಕರು ಈಗಲೇ ಖಾತೆ ಹಂಚಿಕೊಳ್ಳುತ್ತಿದ್ದಾರೆ : ಬಿಎಸ್‌ವೈ ಲೇವಡಿ - former CM yadiyurappa spoke against congress

ನಾವು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 135 ರಿಂದ 140 ಸೀಟ್ ಗೆಲ್ಲಬೇಕು. ಪ್ರತಿ ಜಿಲ್ಲೆ ಪ್ರವಾಸ ಮಾಡಿ ಸಂಪರ್ಕ ಬಾರದ ನಾಯಕರ ಜೊತೆ ಒಂದೆರಡು ಗಂಟೆ ಚರ್ಚಿಸಿ ದೂರ ಇದ್ದವರನ್ನು ಮನವೊಲಿಸಿ ಪಕ್ಷಕ್ಕೆ ಕರೆತರುವ ಪ್ರಯತ್ನ ಮಾಡಬೇಕು. ಆಗ ಮಾತ್ರ 135 ರಿಂದ 140 ಸೀಟ್ ಗೆಲ್ಲಲು ಸಾಧ್ಯವಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

former-cm-yadiyurappa-statement-against-congress
ಅಧಿಕಾರದ ಭ್ರಮೆಯಲ್ಲಿರುವ ರಾಜ್ಯ ಕಾಂಗ್ರೆಸ್ ನಾಯಕರು ಈಗಲೇ ಖಾತೆ ಹಂಚಿಕೊಳ್ಳುತ್ತಿದ್ದಾರೆ : ಬಿಎಸ್‌ವೈ ಲೇವಡಿ
author img

By

Published : Jun 8, 2022, 10:49 PM IST

ಬೆಳಗಾವಿ : 2023 ರ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದು ಭ್ರಮೆಯಲ್ಲಿರುವ ಕಾಂಗ್ರೆಸ್ ನಾಯಕರು ಈಗಲೇ ಖಾತೆ ಹಂಚಿಕೊಳ್ಳಲು ಆರಂಭಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಲೇವಡಿ ಮಾಡಿದರು. ವಾಯವ್ಯ ಕ್ಷೇತ್ರದ ಚುನಾವಣೆ ಅಂಗವಾಗಿ ಬೆಳಗಾವಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರು ಈಗಾಗಲೇ ಅಧಿಕಾರಕ್ಕೆ ಬಂದಿದ್ದೇವೆ ಎಂಬ ಭ್ರಮೆಯಲ್ಲಿದಾರೆ. ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.

ನಾವು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 135 ರಿಂದ 140 ಸೀಟ್ ಗೆಲ್ಲಬೇಕು. ಪ್ರತಿ ಜಿಲ್ಲೆ ಪ್ರವಾಸ ಮಾಡಿ ಸಂಪರ್ಕಕಕ್ಕೆ ಬಾರದ ನಾಯಕರ ಜೊತೆ ಒಂದೆರಡು ಗಂಟೆ ಚರ್ಚಿಸಿ ದೂರ ಇದ್ದವರನ್ನು ಮನವೊಲಿಸಿ ಪಕ್ಷಕ್ಕೆ ಕರೆತರುವ ಪ್ರಯತ್ನ ಮಾಡಬೇಕು. ಆಗ ಮಾತ್ರ 135 ರಿಂದ 140 ಸೀಟ್ ಗೆಲ್ಲಲು ಸಾಧ್ಯವಿದೆ. ಈಗಾಗಲೇ ಅಧಿಕಾರಕ್ಕೆ ಬಂದಿದ್ದೇವೆ ಎಂಬ ಭ್ರಮೆಯಲ್ಲಿರುವವರಿಗೆ ಪಾಠ ಕಲಿಸಬೇಕು ಎಂದು ಹೇಳಿದರು.

ಮಂಗಳವಾರದಿಂದ ಅರುಣ್ ಶಹಾಪುರ, ಹನುಮಂತ ನಿರಾಣಿ ಗೆಲುವಿಗೆ ಪ್ರವಾಸ ಮಾಡಿದ್ದೇನೆ. ನಾಡಿದ್ದು ಮೈಸೂರು ಭಾಗಕ್ಕೆ ಓಡಾಟ ಮಾಡುವ ಆಪೇಕ್ಷೆ ಇದೆ. ಒಂದು ಕಾಲ ಇತ್ತು, ಹಣಬಲ, ಹೆಂಡ ಬಲ, ಅಧಿಕಾರ ಬಲ ತೋಲ್ಬಳ, ಜಾತಿಯ ವಿಷ ಬೀಜ ಬಿತ್ತಿ ಅಧಿಕಾರಕ್ಕೇರುವ ಕೆಲಸವನ್ನು ಕಾಂಗ್ರೆಸ್‌ನವರು ಮಾಡುತ್ತಿದ್ದರು. ಉತ್ತರ ಪ್ರದೇಶದಲ್ಲಿ ನಡೆದ ಚುನಾವಣೆಯಲ್ಲಿ ಬಹುತೇಕ ಕಾಂಗ್ರೆಸ್ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಬಹುಶಃ ದೇಶದಲ್ಲಿ ಕಾಂಗ್ರೆಸ್ ವಿಸರ್ಜನೆ ಮಾಡುವ ಪ್ರಯತ್ನ ನಡೆದಿದೆ. ನಮ್ಮ ಇಬ್ಬರೂ ಅಭ್ಯರ್ಥಿಗಳನ್ನು ದೊಡ್ಡ ಅಂತರದಿಂದ ಗೆಲ್ಲಿಸಿಕೊಡಬೇಕು. ಚುನಾವಣೆಯಂದು ಸಮಯ ಕೊಟ್ಟು ಮತದಾರರನ್ನು ಕರೆದುಕೊಂಡು ಬಂದ್ರೆ ಬಹಳ ದೊಡ್ಡ ಅಂತರದ ಗೆಲುವು ಸಾಧ್ಯ. ಪ್ರಧಾನಿ ನರೇಂದ್ರ ಮೋದಿ ದೇಶ-ವಿದೇಶ ಸುತ್ತಿ ಬಂದರೂ ಬೆಳಗ್ಗೆ 9 ಗಂಟೆಗೆ ಲೋಕಸಭೆಯ ಕಚೇರಿಯಲ್ಲಿ ಕೆಲಸ ಪ್ರಾರಂಭ ಮಾಡ್ತಾರೆ. ಕಳೆದ 8 ವರ್ಷಗಳಲ್ಲಿ ಪ್ರಧಾನಿ ಮೋದಿ ವಿಶ್ರಾಂತಿ, ರಜೆ ತಗೆದುಕೊಂಡ ಒಂದು ಉದಾಹರಣೆ ಇದೆಯಾ? ಪ್ರಧಾನಿ ಮೋದಿ ರಾತ್ರಿ 12 ಗಂಟೆಗೆ ಮಲಗಿ ಬೆಳಗ್ಗೆ 4 ಗಂಟೆಯಿಂದಲೇ ಅವರ ದಿನಚರಿ ಆರಂಭ ಆಗುತ್ತೆ. ನಾವು ಪ್ರಧಾನಿ ಮೋದಿ ಪಕ್ಷದವರು ಅನ್ನಬೇಕಾದ್ರೆ ನಾವು ಹೇಗಿರಬೇಕು ಅನ್ನೋದನ್ನು ಚಿಂತನೆ ಮಾಡಬೇಕು ಎಂದರು.

ನಾನು ಸಿಎಂ, ಡಿಸಿಎಂ ಆದ ಕಾಲದಲ್ಲಿ ನೌಕರರು ಶಿಕ್ಷಕರ, ಉಪನ್ಯಾಸಕರ ವಿರುದ್ಧ ಕ್ರಮ ಕೈಗೊಂಡಿಲ್ಲ. ನೌಕರರು, ಪದವೀಧರ, ಉಪನ್ಯಾಸಕರ ಪರ ಕೆಲಸ ಮಾಡಿದ್ದೆ. 5ನೇ 6ನೇ 7ನೇ ವೇತನ ಆಯೋಗ ತಂದೆ. ಪ್ರತಿ ಬಾರಿ ಕೇಂದ್ರ ಸರ್ಕಾರಕ್ಕಿಂತ ಹೆಚ್ಚು ಡಿಎಯನ್ನು ನಾವು ಕೊಟ್ಟಿದ್ದೇವೆ. ಖಾಲಿ ಇದ್ದ ಸಾವಿರಾರು ಶಿಕ್ಷಕರು, ಉಪನ್ಯಾಸಕ ಹುದ್ದೆ ನೇಮಕ ಮಾಡಿದ್ದೇವೆ. ಉಪನ್ಯಾಸಕರಿಗೆ ಯುಜಿಸಿ ವೇತನ ನೀಡಿದ್ದೇವೆ. ನಂಜುಂಡಪ್ಪ ವರದಿ ಅನುಷ್ಠಾನಗೊಳಿಸಿ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಕಳೆದ ಬಾರಿಯಂತೆ ಕಡಿಮೆ ಮತದಾನ ಆಗಬಾರದು. ಈ ಬಾರಿ 75 ರಿಂದ 80 ಪರ್ಸೆಂಟ್ ಮತದಾನ ಆಗಲು ನೀವು ಮನೆ ಮನೆಗೆ ಹೋಗಿ ಮತದಾರರನ್ನು ಕರೆದುಕೊಂಡು ಬನ್ನಿ ಎಂದು ಕಾರ್ಯಕರ್ತರಿಗೆ ಬಿಎಸ್​ವೈ ಕರೆ ನೀಡಿದರು.

ಓದಿ : 3ನೇ ಸ್ಥಾನಕ್ಕೆ ಕಡೆಯವರೆಗೂ ಕಾಯಬೇಕು, ನಮಗೇ ಗೆಲುವು: ಸಿಎಂ ಬೊಮ್ಮಾಯಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.