ETV Bharat / state

ಅನರ್ಹರು ರಾಜಕೀಯವಾಗಿ ಮುಂದುವರೆಯಲು ನಾಲಾಯಕ್‌ : ಮಾಜಿ ಸಿಎಂ ಸಿದ್ದರಾಮಯ್ಯ - ಮಾಜಿ ಸಿಎಂ ಸಿದ್ದರಾಮಯ್ಯ ಗೋಕಾಕ್​ ಸುದ್ದಿ

ಗೋಕಾಕ್​ ಕಾಂಗ್ರೆಸ್ ‌ಪ್ರಚಾರ ಸಭೆಯಲ್ಲಿ ‌ ಮಾಜಿ ಸಿಎಂ ಸಿದ್ದರಾಮಯ್ಯ, ಅನರ್ಹರ ಶಾಸಕರ ವಿರುದ್ದ ತೀರ್ವ ವಾಗ್ದಾಳಿ ನಡೆಸಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಗೋಕಾಕ್​ ಪ್ರಚಾರ
ಮಾಜಿ ಸಿಎಂ ಸಿದ್ದರಾಮಯ್ಯ ಗೋಕಾಕ್​ ಪ್ರಚಾರ
author img

By

Published : Dec 1, 2019, 4:40 AM IST

ಗೋಕಾಕ್​ : 17 ಜನರು ರಾಜಕೀಯವಾಗಿ ಮುಂದುವರೆಯಲು ನಾಲಾಯಕ್‌. ಉಪಚುನಾವಣೆ ಯಾರಿಗೂ ಬೇಕಿರಲಿಲ್ಲ. ನಾವೂ ಬಯಸಿರಲಿಲ್ಲ‌‌. ಉಪಚುನಾವಣೆಗೆ ಮುಖ್ಯ ‌ಕಾರಣ ರಮೇಶ ‌ಜಾರಕಿಹೊಳಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹರಿಹಾಯ್ದರು.

ಮಾಜಿ ಸಿಎಂ ಸಿದ್ದರಾಮಯ್ಯ ಗೋಕಾಕ್​ ಪ್ರಚಾರ

ಕಾಂಗ್ರೆಸ್ ‌ಪ್ರಚಾರ ಸಭೆಯಲ್ಲಿ ‌ಮಾಜಿ ಸಿಎಂ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಕಾಂಗ್ರೆಸ್ 14 , ಜೆಡಿಎಸ್ 3 ಜನ ತಮ್ಮ ಪಕ್ಷ ತೊರೆದು ಬಿಜೆಪಿಗೆ ಪಕ್ಷಾಂತರ ‌ಮಾಡಿದ್ದಾರೆ. ಇದರಿಂದ ರಾಜ್ಯದ ಖಜಾನೆಯಿಂದ ಉಪಚುನಾವಣೆಗೆ ವೆಚ್ಚ ಮಾಡಲಾಗುತ್ತಿದೆ. ರಾಜಕಾರಣ ಅಂದ್ರೆ ಹುಡುಗಾಟ, ಮಕ್ಕಳಾಟ ಅಲ್ಲ. 2018ರಲ್ಲಿ ರಮೇಶ ಜಾರಕಿಹೊಳಿ‌ ‌ಪಕ್ಷಾಂತರ ಮಾಡುವ ವೇಳೆ ನಿಮ್ಮನ್ನು ಕೇಳಿದ್ರಾ?. ಗೋಕಾಕ ಕ್ಷೇತ್ರದ ಮತದಾರರಿಗೆ ರಮೇಶ ಜಾರಕಿಹೊಳಿ‌ ‌ಮೋಸ ಮಾಡಿದ್ದಾರೆ. ರಮೇಶ ಜಾರಕಿಹೊಳಿ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ ಎಂದು ರಮೇಶ್​ ಜಾರಕೀಹೊಳಿ ವಿರುದ್ದ ವಾಗ್ದಾಳಿ ನಡೆಸಿದರು.

ಪಕ್ಷ ವಿರೋಧಿ ಚಟುವಟಿಕೆ‌ ಮಾಡುತ್ತಿದ್ದ 17 ಜನರನ್ನು ಅನರ್ಹರನ್ನಾಗಿಸಲಾಗಿದೆ. ಅನರ್ಹರು ರಾಜಕೀಯವಾಗಿ ಮುಂದುವರೆಯಲು ನಾಲಾಯಕ್‌ ಸುಪ್ರೀಂ ಕೋರ್ಟ್ ಕೂಡ ಸ್ಪೀಕರ್ ಆದೇಶ ಎತ್ತಿ ಹಿಡಿದಿದೆ. ಡಿಸೆಂಬರ್ 5ಕ್ಕೆ ಜನತಾ ನ್ಯಾಯಾಲಯ ಅನರ್ಹರಿಗೆ ತಕ್ಕ ಪಠ ಕಲಿಸಬೇಕು. ಸುಪ್ರೀಂ ‌ಕೋರ್ಟ್ ಅನರ್ಹರಿಗೆ ನಾಲಾಯಕ್ ಎಂದು‌ ನಿಮ್ಮ ಬಳಿ ಕಳಿಸಿದೆ. ರಮೇಶ್​ ಜಾರಕಿಹೊಳಿ‌ ಪರ್ಮೆಂಟ್ ಆಗಿ ನಾಲಾಯಕ್ ಎಂದು ತೀರ್ಪು ಕೊಡಬೇಕು ಎಂದು ಕರೆ ನೀಡಿದರು.

Intro:17 ಜನರು ರಾಜಕೀಯವಾಗಿ ಮುಂದುವರೆಯಲು ನಾಲಾಯಕ್‌ರು-ಮಾಜಿ ಸಿಎಂ ಸಿದ್ದರಾಮಯ್ಯBody:ಗೋಕಾಕ: ಉಪಚುನಾವಣೆ ಯಾರಿಗೂ ಬೇಕಿರಲಿಲ್ಲ, ನಾವೂ ಬಯಸಿರಲಿಲ್ಲ‌‌, ಉಪಚುನಾವಣೆಗೆ ಮುಖ್ಯ ‌ಕಾರಣ ರಮೇಶ ‌ಜಾರಕಿಹೊಳಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹರಿಹಾಯ್ದರು.

ಗೋಕಾಕ ಕಾಂಗ್ರೆಸ್ ‌ಪ್ರಚಾರ ಸಭೆಯಲ್ಲಿ ‌ಮಾಜಿ ಸಿಎಂ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭಾಷಣ ಮಾತನಾಡಿ ಕಾಂಗ್ರೆಸ್ 14 , ಜೆಡಿಎಸ್ 3 ಜನರು ತಮ್ಮ ಪಕ್ಷ ತೊರೆದು ಬಿಜೆಪಿಗೆ ಪಕ್ಷಾಂತರ ‌ಮಾಡಿದ್ದಾರೆ ಇದರಿಂದ ರಾಜ್ಯದ ಖಜಾನೆಯಿಂದ ಉಪಚುನಾವಣೆಗೆ ವೆಚ್ಚ ಮಾಡಲಾಗುತ್ತಿದೆ ರಾಜಕಾರಣ ಅಂದ್ರೆ ಹುಡುಗಾಟ, ಮಕ್ಕಳಾಟ ಅಲ್ಲ. 2018 ರಲ್ಲಿ ರಮೇಶ ಜಾರಕಿಹೊಳಿ‌ ‌ಪಕ್ಷಾಂತರ ಮಾಡುವ ವೇಳೆ ನಿಮ್ಮನ್ನು ಕೇಳಿದ್ರಾ? ನಿಮ್ಮ ಕಿಮ್ಮತ್ತೇನು? ಗೋಕಾಕ ಕ್ಷೇತ್ರದ ಮತದಾರರಿಗೆ ರಮೇಶ ಜಾರಕಿಹೊಳಿ‌ ‌ಮೋಸ ಮಾಡಿದ್ದಾರೆ. ರಮೇಶ ಜಾರಕಿಹೊಳಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ದ್ರೋಹ ಮಾಡಿದ್ದಾರೆ.

ಪಕ್ಷ ವಿರೋಧಿ ಚಟುವಟಿಕೆ‌ ಮಾಡುತ್ತಿದ್ದ 17 ಜನರನ್ನು ಅನರ್ಹರನ್ನಾಗಿಸಲಾಗಿದೆ. 17 ಜನರು ರಾಜಕೀಯವಾಗಿ ಮುಂದುವರೆಯಲು ನಾಲಾಯಕ್‌ರು. ಸುಪ್ರೀಂ ಕೋರ್ಟ್ ಕೂಡ ಸ್ಪೀಕರ್ ರಮೇಶಕುಮಾರ ಆದೇಶ ಎತ್ತಿಹಿಡಿದಿದೆ.
ಡಿಸೆಂಬರ್ 5 ಕ್ಕೆ ಜನತಾ ನ್ಯಾಯಾಲಯ ಅನರ್ಹರಿಗೆ ತಕ್ಕ ಪಠ ಕಲಿಸಬೇಕು. ಸುಪ್ರೀಂ ‌ಕೋರ್ಟ್ ಅನರ್ಹರಿಗೆ ನಾಲಾಯಕ್ ಎಂದು‌ ನಿಮ್ಮ ಕಡೆ ಕಳಿಸಿದೆ. ರಮೇಶ ಜಾರಕಿಹೊಳಿ‌ ಪರ್ಮೆಂಟ್ ಆಗಿ ನಾಲಾಯಕ್ ಎಂದು ತೀರ್ಪು ಕೊಡಬೇಕು.

ರಮೇಶ ಜಾರಕಿಹೊಳಿ‌ ಶಾಸಕರಾಗಿಯೂ ಕೆಲಸ ಮಾಡಲ್ಲ, ಸಚಿವರಾಗಿಯೂ ಕೆಲಸ ಮಾಡಲ್ಲ. 25 ವರ್ಷ ರಮೇಶನನ್ನು ಕ್ಷೇತ್ರದ ಜನರು ಸಹಿಸಿಕೊಂಡಿದ್ದು ಹೇಗೆ? ಸತೀಶ ಜಾರಕಿಹೊಳಿ‌ ತೆಗೆದು ರಮೇಶನನ್ನು ‌ನಾನು ಮಂತ್ರಿ ಮಾಡಿದ್ದೇ ಆದ್ರೆ ರಮೇಶ ‌ಜಾರಕಿಹೊಳಿ ನನ್ನ ವಿರುದ್ಧನೇ ತಿರುಗಿ ಬಿದ್ದಿದ್ದಾರೆ.

ಗೋಕಾಕ ಒಂದು ರೀತಿ ರಿಪಬ್ಲಿಕ್ ಆಫ್ ಗೋಕಾಕ ಇದೆ. ರೆಡ್ಡಿ ಬ್ರದರ್ಸ್ ಕೂಡ ಬಳ್ಳಾರಿಯನ್ನು ರಿಪಬ್ಲಿಕ್ ಆಫ್ ಬಳ್ಳಾರಿ ಎಂದು ಮಾಡಿಕೊಂಡಿದ್ದರು. ಪಾದಯಾತ್ರೆ ಮಾಡಿಯೇ ಬಳ್ಳಾರಿಗೆ ನಾನು ಸ್ವಾತಂತ್ರ್ಯ ‌ತಂದುಕೊಟ್ಟಿದ್ದೇನೆ. ಗೋಕಾಕ ಜನತೆಯ ರಕ್ಷಣೆಗೆ ಸತೀಶ ಜಾರಕಿಹೊಳಿ ಲಖನ್ ಇದ್ದಾರೆ. ಪ್ರವಾಹ ಸಂದರ್ಭದಲ್ಲಿ ರಮೇಶ ಜಾರಕಿಹೊಳಿ‌ ಜನರ ಜತೆಗೆ ಇರಬೇಕಿತ್ತು. ಆದ್ರೆ ರಮೇಶ ಮುಂಬೈನ ಸೆವೆನ್ ಸ್ಟಾರ್ ಹೋಟೆಲಿನಲ್ಲಿ ಮೋಜು ಮಾಡ್ತಿದ್ದರು. ಇಲ್ಲಿನ ಜನರ ಸಂಕಷ್ಟಕ್ಕೆ ಸ್ಪಂದಿಸದ ರಮೇಶನನ್ನು ರಿಜೆಕ್ಟ್ ಮಾಡಿ ಎಂದು ಮನವಿ ಮಾಡಿದರು.

ಸತೀಶ್ ಜಾರಕಿಹೊಳಿ‌ ನನ್ನ ದೀರ್ಘ ಕಾಲದ ಸ್ನೇಹಿತ. ಆದರೂ ಆತನನ್ನು ಮಂತ್ರಿ ಸ್ಥಾನ ತೆಗೆದು ರಮೇಶಗೆ ಮಂತ್ರಿ ಮಾಡಿದೆ. ಆದರೆ ರಮೇಶ ಸಂಪುಟ ಸಭೆಗೆ ಗೈರಾಗಿದಕ್ಕೆ ಆತನನ್ನು ಸಂಪುಟದಿಂದ ಕೈಬಿಡಲಾಯಿತು. ಮರಳಿ ಮತ್ತೇ ಸತೀಶ್ ಜಾರಕಿಹೊಳಿ‌ಗೆ ಸಚಿವ ಸ್ಥಾನ ನೀಡಲಾಯಿತು.

ಯಡಿಯೂರಪ್ಪ ಹಿಂಬಾಗಿಲಿನಿಂದಲೇ ಸಿಎಂ ಆಗುತ್ತ ಬಂದಿದ್ದಾರೆ. ಪ್ರವಾಹ ಸಂತ್ರಸ್ತರಿಗೆ ಸಿಎಂ ಯಡಿಯೂರಪ್ಪ ಇನ್ನೂ ಪರಿಹಾರ ನೀಡಿಲ್ಲ. ಪ್ರವಾಹಕ್ಕೆ ಹಾನಿಯಾದ ಬೆಳೆಗಳಿಗೆ ಇನ್ನೂ ಪರಿಹಾರ ಕೊಟ್ಟಿಲ್ಲ. ರಾಜ್ಯದ ಖಜಾನೆ ಖಾಲಿ ಆಗಿದೆ ಎಂದು ಯಡಿಯೂರಪ್ಪ ಹೇಳ್ತಿದ್ದಾರೆ. ನಾನು ಸಿಎಂ ಆಗಿದ್ದಾಗ ಎಂದೂ ಖಜಾನೆ ಖಾಲಿ ಆಗಿರಲಿಲ್ಲ. ಖಜಾನೆ ಖಾಲಿ ಆದ್ರೆ ನನಗೆ ಸಿಎಂ ಸ್ಥಾನ ಬಿಟ್ಟು ಕೊಡಿ. ರಾಜ್ಯವನ್ನು ನಾವು ಮುನ್ನಡೆಸುತ್ತೇವೆ ಎಂದು ಸಿದ್ದರಾಮಯ್ಯ ‌ಹೇಳಿದ್ದರು.

kn_gkk_05_30_siddarammay_speech_vsl_kac10009Conclusion:ಗೋಕಾಕ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.