ETV Bharat / state

ಕೊರೊನಾ ನಿಯಂತ್ರಣಕ್ಕಾಗಿ ಗಡಿಭಾಗಗಳಲ್ಲಿ ಹೆಚ್ಚಿನ ನಿಗಾವಹಿಸಿ : ಸಚಿವ ಉಮೇಶ್ ಕತ್ತಿ ಸೂಚನೆ - For corona control

ಜೆ ಹೆಚ್‌ ಪಟೇಲ್, ಯಡಿಯೂರಪ್ಪ ಸರ್ಕಾರದಲ್ಲಿ ಕೂಡ ನಾನು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೆ. ಈಗ ಅವಕಾಶ ಕೊಟ್ಟರೆ ನಿರ್ವಹಿಸುತ್ತೇನೆ, ಕೊಡದಿದ್ದರೆ ಜಿಲ್ಲೆಯ ಸಚಿವನಾಗಿ ಕೆಲಸ ಮಾಡುತ್ತೇನೆ. ಅನುಭವಿ ರಾಜಕಾರಣಿ ಆಗಿದಕ್ಕೆ ಕೋವಿಡ್ ‌ಸಭೆ ಮಾಡಿದ್ದೇನೆ..

for-corona-control-keep-a-close-watch-on-the-borders-minister-umesh-kathi
ಉಮೇಶ್ ಕತ್ತಿ
author img

By

Published : Apr 20, 2021, 7:16 PM IST

ಬೆಳಗಾವಿ : ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಸಚಿವ ಉಮೇಶ್ ‌ಕತ್ತಿ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಯಿತು.

ಬೆಳಗಾವಿ ಡಿಸಿ ಕಚೇರಿಯ ವಿಡಿಯೋ ಕಾನ್ಫರೆನ್ಸ್ ಹಾಲ್​ನಲ್ಲಿ ನಡೆದ ಸಭೆಯಲ್ಲಿ ಭಾಗಿಯಾಗಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಸಚಿವನಾಗಿ ನಾನು ಕೋವಿಡ್ ‌ನಿಯಂತ್ರಣ ಸಂಬಂಧ ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದೇನೆ. ನನ್ನ ಜಿಲ್ಲೆಯ ಜನರಿಗೆ ಕೊರೊನಾದಿಂದ ಯಾವುದೇ ತೊಂದರೆ ಆಗಬಾರದು.

ಸಾವು, ನೋವು ಸಂಭವಿಸದಂತೆ ‌ಕ್ರಮವಹಿಸಬೇಕು. ಕೊರೊನಾ ಸಂಬಂಧ ಸರ್ಕಾರದ ಮಾರ್ಗಸೂಚಿಗಳನ್ನು ಜಾರಿಗೊಳಿಸುವಂತೆ ಸೂಚಿಸಿದ್ದೇನೆ ಎಂದರು. ಮಹಾರಾಷ್ಟ್ರ, ಗೋವಾ ಗಡಿಭಾಗಗಳ ಚೆಕ್ ಫೋಸ್ಟ್​ಗಳಲ್ಲಿ ಪೊಲೀಸ್, ಟೀಚರ್ಸ್, ಅಂಗನವಾಡಿ ಕಾರ್ಯಕರ್ತರು ಸೇರಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಬೇಕು. ಮಾಹಿತಿ ಇಲ್ಲದೇ ಯಾರೂ ಗಡಿಪ್ರವೇಶ ಮಾಡದಂತೆ ಕ್ರಮವಹಿಸುವಂತೆ ಸೂಚಿಸಿದ್ದೇನೆ ಎಂದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಉಮೇಶ್ ಕತ್ತಿ ಸೂಚನೆ..

ನಿತ್ಯ ಜಿಲ್ಲೆಯಲ್ಲಿ 3 ಸಾವಿರ ಟೆಸ್ಟ್, 5 ಸಾವಿರ ಲಸಿಕೆ ನೀಡುತ್ತಿದ್ದೇವೆ. ಅಗತ್ಯ ಬಿದ್ರೆ ಇದರ ಪ್ರಮಾಣ ಹೆಚ್ಚಿಸಲಾಗುವುದು. ತಾಲೂಕು ಕೇಂದ್ರಗಳಲ್ಲಿ ವಾರ್ ರೂಂ ತೆರೆಯುವ ಅಗತ್ಯತೆ ಈಗಿಲ್ಲ. ಕೊರೊನಾ ‌ನಿಯಂತ್ರಣಕ್ಕೆ ಬಾರದಿದ್ದರೆ ವಾರ್ ರೂಂ ನಿರ್ಮಿಸುತ್ತೇವೆ ಎಂದರು.

ಬಿಜೆಪಿ ‌ಗೆಲುವು ಶತಃಸಿದ್ಧ : ಲೋಕಸಭೆ ಉಪಚುನಾವಣೆಯಲ್ಲಿ 10 ಲಕ್ಷ ಮತದಾನವಾಗಿದೆ. ಎರಡೂವರೆ ಲಕ್ಷ ಅಂತರದಿಂದ ನಮ್ಮ ಅಭ್ಯರ್ಥಿ ಗೆಲ್ಲಬೇಕು ಎಂಬ ಆಸೆ ನನ್ನದು. ಆದರೆ, ಮತದಾನ ಕಡಿಮೆ ಆಗಿರುವ ಕಾರಣ ಕನಿಷ್ಠ ಒಂದೂವರೆ ಲಕ್ಷ ಮತಗಳ ಅಂತರದಿಂದ ನಾವು ಗೆಲ್ಲುತ್ತೇವೆ.

ಎಂಇಎಸ್ ಅಭ್ಯರ್ಥಿ ಸ್ಪರ್ಧೆಯಿಂದ ನಮಗೇನೂ ತೊಂದರೆ ಆಗಿಲ್ಲ. ಅನುಕಂಪದ ಅಲೆ, ಸುರೇಶ ಅಂಗಡಿ ಅವರು ಮಾಡಿದ ಕೆಲಸ ನೋಡಿ ಜನ ಮತ ಹಾಕಿದ್ದಾರೆ. ಮಂಗಳಾ ಅಂಗಡಿ ಬಿಎಸ್​ಸಿ ಪದವೀಧರೆ, ಮೂರು ವರ್ಷ ಉತ್ತಮ ಸಂಸದೆಯಾಗಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿದ್ದಾರೆ ಎಂದರು.

ಜೆ ಹೆಚ್‌ ಪಟೇಲ್, ಯಡಿಯೂರಪ್ಪ ಸರ್ಕಾರದಲ್ಲಿ ಕೂಡ ನಾನು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೆ. ಈಗ ಅವಕಾಶ ಕೊಟ್ಟರೆ ನಿರ್ವಹಿಸುತ್ತೇನೆ, ಕೊಡದಿದ್ದರೆ ಜಿಲ್ಲೆಯ ಸಚಿವನಾಗಿ ಕೆಲಸ ಮಾಡುತ್ತೇನೆ. ಅನುಭವಿ ರಾಜಕಾರಣಿ ಆಗಿದಕ್ಕೆ ಕೋವಿಡ್ ‌ಸಭೆ ಮಾಡಿದ್ದೇನೆ ಎಂದರು.

ಇದನ್ನೂ ಓದಿ.. ಕೊರೊನಾ ನಿಯಮ ಉಲ್ಲಂಘನೆಗೆ 5ಸಾವಿರ ರೂ. ದಂಡ.. ಸಾರ್ವಜನಿಕರ ಆಕ್ರೋಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.