ETV Bharat / state

ಬೀದಿಗೆ ಬಿದ್ದ ನೆರೆ ಸಂತ್ರಸ್ತರ ಬದುಕು: ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಜನ - flood in Belagavi

ನೆರೆ ಪೀಡಿತ ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಹೆಚ್ಚಾಗಿದ್ದು, ಆದಷ್ಟು ಬೇಗ ಅಧಿಕಾರಿಗಳು ಔಷಧ ಸಿಂಪಡನೆ ಕಾರ್ಯಕ್ಕೆ ಮುಂದಾಗಬೇಕೆಂದು ಜನರು ಆಗ್ರಹಿಸುತ್ತಿದ್ದಾರೆ.

ಔಷಧ ಸಿಂಪಡನೆ ಕಾರ್ಯ
author img

By

Published : Aug 22, 2019, 12:25 PM IST

ಚಿಕ್ಕೋಡಿ: ಪ್ರವಾಹಕ್ಕೆ ನಲುಗಿ ಹೋಗಿದ್ದ ಜನರಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ನೆರೆ ಪೀಡಿತ ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಹೆಚ್ಚಾಗುವ ಸಂಭವ ಕಾಣುತ್ತಿದೆ.

ಸರ್ಕಾರ ಪರಿಹಾರ ಕೇಂದ್ರಗಳಲ್ಲಿದ್ದ ಸಂತ್ರಸ್ತರಿಗೆ ಮೊದಲ ಹಂತದ 3800 ರೂ. ಚೆಕ್ ಕೊಟ್ಟು ಮನೆಗೆ ಕಳುಹಿಸಿದೆ. ನೆರೆ ಪೀಡಿತ ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಕ್ರಮ ಕೈಗೊಳ್ಳಬೇಕಿದ್ದ ಅರೋಗ್ಯ ಇಲಾಖೆ ಮತ್ತು ಸ್ಥಳೀಯ ಪಂಚಾಯತಿ ಅಧಿಕಾರಿಗಳ ಮಂದಗತಿಯ ಕೆಲಸದಿಂದಾಗಿ, ಪ್ರವಾಹ ಪೀಡಿತ ಗ್ರಾಮಗಳಲ್ಲಿ ದುರ್ವಾಸನೆ ಬೀರುತ್ತಿದೆ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗದ ಭೀತಿ

ಕೆಲ ಪಂಚಾಯತಿಗಳಲ್ಲಿ ಫಾಗಿಂಗ್ ಮಷಿನ್​ಗಳಿಲ್ಲದ ಕಾರಣ ಕೆಲ ಗ್ರಾಮಗಳಲ್ಲಿ ಮಾತ್ರ ಔಷಧ ಸಿಂಪಡನೆ ಮಾಡುತ್ತಿದ್ದು, ಇನ್ನುಳಿದ ಗ್ರಾಮಗಳಲ್ಲಿ ಔಷಧ ಸಿಂಪಡನೆ ಕಾರ್ಯ ಪ್ರಾರಂಭವಾಗಿಲ್ಲ. ಇದರಿಂದ ನದಿ ತೀರದ ಜನರು ಸಾಂಕ್ರಾಮಿಕ ರೋಗಗಳಿಗೆ ಹೆದರುತ್ತಿದ್ದಾರೆ. ಆದಷ್ಟು ಬೇಗ ಅಧಿಕಾರಿಗಳು ಔಷಧ ಸಿಂಪಡನೆ ಕಾರ್ಯಕ್ಕೆ ಮುಂದಾಗಬೇಕೆಂದು ಜನರು ಆಗ್ರಹಿಸುತ್ತಿದ್ದಾರೆ.

Intro:ಬೀದಿಗೆ ಬಿದ್ದ ಸಂತ್ರಸ್ಥರ ಬದುಕು ರಾತ್ರಿಯಾದರೆ ಸೊಳ್ಳೆಗಳ ಕಾಟBody:

ಚಿಕ್ಕೋಡಿ :

ಆ ಗ್ರಾಮಗಳಲ್ಲಿ ಸಂಜೆಯಾದರೆ ಸಾಕು ಕವಿಯುವ ಕತ್ತಲೆ, ರಾತ್ರಿಯಾದರೆ ಸೊಳ್ಳೆಗಳ ಕಾಟ, ಉಸಿರಾಡುವ ಗಾಳಿಯೂ ಸದ್ಯ ಕಲುಷಿತ, ಕುಡಿಯುವ ನೀರಿಗಾಗಿ ಕಿಲೋಮಿಟರಗಳ ಅಲೆದಾಟ ಅದೇಲ್ಲಿ ಅಂತಿರಾ ಈ ಸ್ಟೋರಿ ನೋಡಿ.

ಬೆಳಗಾವಿ ಜಿಲ್ಲೆಯಲ್ಲಿ ಬರದ ಗಾಯದ ಮೆಲೆ ಉಪ್ಪು ಸುರಿದಂತೆ ಪ್ರವಾಹದ ಭೀಕರತೆಯನ್ನು ತಂದ ವರುಣ ಅಕ್ಷರಶಃ ಕೃಷ್ಣಾ ನದಿ ತೀರದ ನೆರೆ ಸಂತ್ರಸ್ಥರನ್ನು ಬೀದಿಗೆ ತಳ್ಳಿದ್ದಾನೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಟ್ಟಲಗಿ-ನಿಪ್ಪಾಣಿ ರಾಜ್ಯ ಹೆದ್ದಾರಿಯಲ್ಲಿ ಸದ್ಯ ತಂಗಡಿ, ಶಿನಾಳ, ಮತ್ತು ಮೋಳೆ ತೋಟದ ವಸತಿಯ ನೂರಕ್ಕು ಹೆಚ್ಚು ಕುಟುಂಬಗಳು ಬದುಕು ಕಟ್ಟಿಕೊಳ್ಳಲು ಪರದಾಡುತ್ತಿವೆ.

ಸರ್ಕಾರ ಕಾಳಜಿ ಕೇಂದ್ರಗಳಲ್ಲಿ ಮೊದಲ ಹಂತದ ಮೂರು ಸಾವಿರದ ಎಂಟನೂರು ರೂಪಾಯಿ ಚೆಕ್ ಕೊಟ್ಟು ಸಂತ್ರಸ್ಥರನ್ನು ಮನೆಗೆ ಕಳಿಸುತ್ತಿದೆ ಆದರೆ ನೆರೆ ಪೀಡಿತ ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಕ್ರಮ ಕೈಗೊಳ್ಳಬೇಕಿದ್ದ ಆರೋಗ್ಯ ಇಲಾಖೆ ಮತ್ತು ಸ್ಥಳೀಯ ಪಂಚಾಯತ ಅಧಿಕಾರಿಗಳ ಆಮೆಗತಿಯ ಕೆಲಸದಿಂದಾಗಿ ಪ್ರವಾಹ ಪೀಡಿತ ಗ್ರಾಮಗಳು ಗಬ್ಬೆದ್ದು ದುರ್ವಾಸನೆ ಬೀರುತ್ತಿದ್ದು ವಿದ್ಯುತ್ ಇಲ್ಲದೆ ಕತ್ತಲಲ್ಲಿ ಕಾಲ ಕಳೆಯುವ ಸ್ಥಿತಿ ಗ್ರಾಮೀಣ ಜನರದ್ದಾಗಿದೆ.

ಕೆಲ ಪಂಚಾಯತಿಗಳಲ್ಲಿ ಫಾಗಿಂಗ್ ಮಷೀನುಗಳಿಲ್ಲದೆ ಔಷಧ ಸಿಂಪಡನೆ ವಿಳಂಬವಾಗುತ್ತಿದ್ದೆ. ಸ್ವಚ್ಚತೆ ಕೈಗೊಳ್ಳಬೇಕಿದ್ದ ಮುನ್ನೆಚ್ಚರಿಕೆ ಕ್ರಮಗಳಿಗೆ ವಿಳಂಬವಾಗುತ್ತಿದ್ದು ಸಾಂಕ್ರಾಮಿಕ ರೋಗಗಳಾದ ಮಲೇರಿಯ, ಕಾಲರಾ, ಅತಿಸಾರ ಮತ್ತು ಡೆಂಗ್ಯೂ ಸೇರಿದಂತೆ ಹಲವು ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇದ್ದು ಸದ್ಯ ಸಂತ್ರಸ್ಥರ ಗೋಳು ಕೇಳುವವರು ಯಾರು ಎಂಬತಾಗಿದ್ದು ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಗಳು ಜನರಿಂದ ಕೇಳಿ ಬರುತ್ತಿವೆ.

ಕೆಲ ಗ್ರಾಮಗಳಲ್ಲಿ ಮಾತ್ರ ಔಷಧ ಸಿಂಪಡನೆ ಮಾಡುತ್ತಿದ್ದು ಇನ್ನುಳಿದ ಗ್ರಾಮಗಳಲ್ಲಿ ಔಷಧ ಸಿಂಪಡನೆ ಕಾರ್ಯ ಪ್ರಾರಂಭವಾಗಿಲ್ಲ ಇದರಿಂದ ನದಿ ತೀರದ ಜನರು ಮಾತ್ರ ಸಾಂಕ್ರಾಮಿಕ ರೋಗಗಳಿಗೆ ಹೆದರುತ್ತಿದ್ದಾರೆ. ಆದಷ್ಟು ಬೇಗ ಅಧಿಕಾರಿಗಳು ಔಷಧ ಸಿಂಪಡನೆ ಕಾರ್ಯಕ್ಕೆ ಮುಂದಾಗಬೇಕಿದೆ.

ವಿಶೂವಲ್ಸ್ 1 : ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ಔಷಧ ಸಿಂಪಡನೆ ಮಾಡುತ್ತಿರುವುದು.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.