ಬೆಳಗಾವಿ: ಜಿಲ್ಲೆಯ ಸುರೇಬಾನ್ ಗ್ರಾಮದಲ್ಲಿ ಸಿಎಂ ಕಾರಿಗೆ ಪ್ರವಾಹ ಸಂತ್ರಸ್ತರು ಘೇರಾವ್ ಹಾಕಿರುವ ಘಟನೆ ನಡೆದಿದೆ.
ಅನಂತ ಎಂಬ ವ್ಯಕ್ತಿ ಸಿಎಂ ಬಿ.ಎಸ್. ಯಡಿಯೂರಪ್ಪ ಭೇಟಿ ಮಾಡಲು ಬಂದಾಗ ಪೊಲೀಸರು ಅವಕಾಶ ನೀಡದೇ, ಸಿಎಂ ಕಾರಿನ ಹತ್ತಿರ ಬರುತ್ತಿದ್ದಂತೆ ದೂರ ತಳ್ಳಿದ್ದಾರೆ. ಪ್ರವಾಹದಲ್ಲಿ ಅನಂತ ಅವರು ತಮ್ಮ ಅಂಗಡಿ ಹಾಗೂ ಮನೆಯನ್ನು ಕಳೆದುಕೊಂಡಿದ್ದರು.
ತಮ್ಮ ಅಳಲನ್ನು ಸಿಎಂ ಮುಂದೆ ಹೇಳಿಕೊಳ್ಳಲು ಅವಕಾಶ ನೀಡದ ಕಾರಣ ಸಿಎಂ ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಆಗ ತಕ್ಷಣ ಪೊಲೀಸರು ಅನಂತರವನ್ನು ಪಕ್ಕಕ್ಕೆ ಸರಿಸಿ ಸಿಎಂ ಕಾರು ಹೋಗಲು ಅನುವು ಮಾಡಿಕೊಟ್ಟಿದ್ದಾರೆ.