ಬೆಳಗಾವಿ: ಶೋಕಿಗಾಗಿ ಪಿಸ್ತೂಲಿನಿಂದ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಕೋರಿಕೊಪ್ಪ ಗ್ರಾಮದಲ್ಲಿ ಜರುಗಿದೆ. ಬಸವೇಶ್ವರ ಜಾತ್ರೆಯ ತೇರು ಎಳೆಯುವಾಗ ಪಿಸ್ತೂಲ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸಲಾಗಿದೆ.
ಈರಪ್ಪ ಏಣಗಿ, ಸಿದ್ರಾಮ್ ವೀರಭದ್ರಪ್ಪನವರ ಗುಂಡು ಹಾರಿಸಿ ಶೋಕಿ ಪ್ರದರ್ಶಿಸಿದ್ದಾರೆ. ಸಹೋದರ ಆನಂದ ಏಣಗಿ ಪಿಸ್ತೂಲ್‌ನಿಂದ ಈರಪ್ಪ ಏಣಗಿ ಗುಂಡು ಹಾರಿಸಿದರೆ ಇತ್ತ ಮಾವ ತಿಪ್ಪಣ್ಣ ಪಠಾಣ್ ಸಿದ್ರಾಮ ವೀರಭದ್ರಪ್ಪನರ ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾರೆ.
ನೂರಾರು ಜನರ ಮಧ್ಯೆ ನಿಂತು ಗುಂಡು ಹಾರಿಸಿ ದೂಂಡಾವರ್ತನೆ ಪ್ರದರ್ಶನ ಮಾಡಲಾಗಿದೆ. ಇಬ್ಬರು ಜಾತ್ರೆಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸುತ್ತಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನು ಓದಿ:ದಯವಿಟ್ಟು ಸಾಯಿಬಾಬಾ ಮಂದಿರದಲ್ಲಿ ಧ್ವನಿವರ್ಧಕಗಳನ್ನ ಬಂದ್ ಮಾಡ್ಬೇಡಿ: ಮುಸ್ಲಿಂ ಸಮುದಾಯದಿಂದ ಆಗ್ರಹ!