ಬೆಳಗಾವಿ: ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ನೇತೃತ್ವದಲ್ಲಿ ಕಳೆದ ನಾಲ್ಕೈದು ದಿನಗಳ ಹಿಂದೆ ಕೊರೊನಾ ನಿಯಂತ್ರಣಕ್ಕೆಂದು ಮಾಡಲಾದ ಹೋಮ, ಹವನದಲ್ಲಿ ಭಾಗಿಯಾದ್ದ ನಾಲ್ವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಬೆಳಗಾವಿಯ ಬಿಜೆಪಿ ಮುಖಂಡರಾದ ಗಿರೀಶ್, ಜಯಂತ್ ಜಾಧವ್, ಕಲ್ಲಪ್ಪ ಶಹಾಪುರಕರ್ ಹಾಗೂ ಸುನೀಲ್ ಮುತಗೇಕರ್ ವಿರುದ್ಧ ದೂರು ಎಫ್ಐಆರ್ ದಾಖಲಾಗಿದೆ. ಮೇ 24 ರಂದು ಬೆಳಗಾವಿಯ ಬಸವನಗಲ್ಲಿಯಲ್ಲಿ ಹೋಮ ನಡೆಸಿದ ವಿಚಾರಕ್ಕೆ ಸಂಬಂಧಿಸಿ ಮಹಾನಗರ ಪಾಲಿಕೆ ಕಿರಿಯ ಆರೋಗ್ಯ ನಿರೀಕ್ಷಕರು ದೂರು ನೀಡಿದ್ದರು. ದೂರು ಆಧರಿಸಿ ನಾಲ್ವರ ವಿರುದ್ಧ ಶಹಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ : ವಾತಾವರಣ ಶುದ್ಧಿಗೆ ಹೋಮ, ಹವನ ಮಾಡಿ ಮೂಢನಂಬಿಕೆ ಮೊರೆ ಹೋದ ಬಿಜೆಪಿ ಶಾಸಕ!?
ಆದರೆ, ಹೋಮ, ಹವನದ ನೇತೃತ್ವ ವಹಿಸಿಕೊಂಡಿದ್ದ ಶಾಸಕ ಅಭಯ್ ಪಾಟೀಲ್ ಮೇಲೆ ಪೊಲೀಸರು ಯಾವುದೇ ರೀತಿಯ ಕ್ರಮಕೈಗೊಳ್ಳದೇ ಇರುವುದು ಅಚ್ಚರಿಗೆ ಕಾರಣವಾಗಿದೆ. ಇದು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಿದಂತಾಗಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.