ಚಿಕ್ಕೋಡಿ : ಹೊಲದಲ್ಲಿನ ಒಣ ಮೇವನ್ನು ಟ್ರ್ಯಾಕ್ಟರ್ನಲ್ಲಿ ತುಂಬಿಕೊಂಡು ಬರುವಾಗ ವಿದ್ಯುತ್ ತಂತಿ ತಗುಲಿ ಅಪ್ಪ ಹಾಗೂ ಮಗ ಸಾವನ್ನಪ್ಪಿರೋ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಜುಗೂಳ ಗ್ರಾಮದಲ್ಲಿ ನಡೆದಿದೆ.
ತಮ್ಮ ಹೊಲದಲ್ಲಿ ಒಣ ಮೇವು (ಕಣಕಿ)ನ್ನು ಟ್ರ್ಯಾಕ್ಟರ್ ಟೇಲರ್ನಲ್ಲಿ ತುಂಬಿಕೊಂಡು ಬರುವಾಗ ವಿದ್ಯುತ್ ತಂತಿಗೆ ಸ್ಪರ್ಶವಾಗಿ ಜುಗೂಳ ಗ್ರಾಮದ ಭರತ ರಾಮು ಬೋರಗಾಂವೆ (ಅಲಾಸೆ) (45) ರೈತ ಹಾಗೂ ಆತನ ಮಗ ಪ್ರೇಮ ಭರತ ಬೋರಗಾಂವೆ (18) (ಅಲಾಸೆ) ಇವರಿಗೆ ವಿದ್ಯುತ್ ತಂತಿ ತಗುಲಿದೆ.
ಚಿಕಿತ್ಸೆಗಾಗಿ ಕೂಡಲೇ ಅವರನ್ನು ಚಿಕ್ಕೋಡಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ. ಈ ಕುರಿತು ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.