ಚಿಕ್ಕೋಡಿ : ಸಾಲಬಾಧೆ ತಾಳಲಾರದೆ ಮನನೊಂದ ರೈತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ನಡೆದಿದೆ.
ಸರ್ಜೆರಾವ ಪರಶುರಾಮ ಕೋಳಿ (38) ಮೃತ ರೈತ. ಸರ್ಜೆರಾವ ಅವರ ತಂದೆ ಗ್ರಾಮದ ಹಲವಾರು ಸಹಕಾರಿ ಸಂಸ್ಥೆಗಳು ಹಾಗೂ ಇನ್ನಿತರ ಕಡೆ ಸುಮಾರು 6.70 ಲಕ್ಷ ರೂಪಾಯಿ ಸಾಲ ಮಾಡಿದ್ದರು. ತಂದೆ ಮಾಡಿದ ಸಾಲವನ್ನು ಹೇಗೆ ತೀರಿಸುವುದು ಎಂದು ಮನನೊಂದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಕುರಿತು ಸರ್ಜೆರಾವ ಪತ್ನಿ ಸರಸ್ವತಿ ಅವರು ಅಂಕಲಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.