ಚಿಕ್ಕೋಡಿ/ಬೆಳಗಾವಿ: ಹೃದಯಾಘಾತದಿಂದ ಮೃತಪಟ್ಟ ಮಾಜಿ ಸೈನಿಕ ಅಪ್ಪಣ್ಣಾ ಚನ್ನಪ್ಪಾ ಹಂಚಿನಮನಿ ಅವರ ಅಂತ್ಯಕ್ರಿಯೆಯನ್ನು ಮಾಜಿ ಸೈನಿಕರು ಗೌರವಯುತವಾಗಿ ನೆರವೇರಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಧುಪದಾಳ ಗ್ರಾಮದವರಾದ ಅಪ್ಪಣ್ಣಾ ಚನ್ನಪ್ಪಾ ಹಂಚಿನಮನಿ, 1971 ಭಾರತಿಯ ಸೇನೆಗೆ ಸೇರ್ಪಡೆಯಾಗಿ 1987 ವರಗೆ ಅಂದರೆ 17 ವರ್ಷ ತಮ್ಮ ಸೇವೆ ಸಲ್ಲಿಸಿ, 1971 ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಯುದ್ದದಲ್ಲಿ ಭಾಗವಹಿಸಿದ್ರು. ಇವರು ಸಾವನ್ನಪ್ಪಿರುವ ವಿಷಯ ತಿಳಿದು ಸೇನೆಯಲ್ಲಿ ಸೇವೆ ಸಲ್ಲಿಸಿದ ಮಾಜಿ ಸೈನಿಕರು ಸುತ್ತ ಮುತ್ತಲ ಹಳ್ಳಿಗಳಿಂದ ಕೊಣ್ಣೂರು, ಧುಪದಾಳ, ಸಾವಳಗಿ ಸೇರಿದಂತೆ ಮರಡಿಮಠ ಹಳ್ಳಿಗಳಿಂದ ಸೇರಿ ಬಂದು, ಮಾಜಿ ಸೈನಿಕನ ಅಂತ್ಯಸಂಸ್ಕಾರ ನಡೆಸಿಕೊಟ್ಟರು.
ಇನ್ನು ದೇಶದ ಸೈನಿಕರು ಯುದ್ದದಲ್ಲಿ ಹಾಗೂ ಕಾರ್ಯನಿರ್ವಹಿಸುವಾಗ ವೀರ ಮರಣ ಹೊಂದಿದಾಗ ಯೋಧರ ಅಂತ್ಯಸಂಸ್ಕಾರ ಮಾಡುವ ಹಾಗೆ ಭಾರತೀಯ ಮಾಜಿ ಸೈನಿಕರು ಸೇರಿ ಸೇನೆಯ ನಿಯಮದಂತೆ ರಾಷ್ಟ್ರ ಗೌರವ ಸಲ್ಲಿಸುವ ಮೂಲಕ ಕುಟುಂಬಕ್ಕೆ ಸಾಂತ್ವನ ಹೇಳಿದರು.