ETV Bharat / state

ಹಳ್ಳದಲ್ಲಿ ಭ್ರೂಣ ಪತ್ತೆ ಕೇಸ್: ಕುಟುಂಬ ಕಲ್ಯಾಣ‌ ಅಧಿಕಾರಿಯ ಹೆಚ್ಚುವರಿ ಅಧಿಕಾರ ಮೊಟಕು!

ಮೂಡಲಗಿ ಹಳ್ಳದಲ್ಲಿ ಏಳು ಭ್ರೂಣಗಳು ಪತ್ತೆಯಾಗಿತ್ತು. ಈ ಬಗ್ಗೆ ಡಿಸಿ ಆರೋಗ್ಯ ಇಲಾಖೆಗೆ ವರದಿ ಸಲ್ಲಿಸಿದ್ದರು. ವರದಿ ಆಧಾರದ ಮೇಲೆ ಕುಟುಂಬ ಕಲ್ಯಾಣ‌ ಇಲಾಖೆ ಅಧಿಕಾರಿಯ ಹೆಚ್ಚುವರಿ ಅಧಿಕಾರವನ್ನು ಮೊಟಕುಗೊಳಿಸಲಾಗಿದೆ.

Extra powers curtailed of belagavi family welfare officer
ಭ್ರೂಣ ಪತ್ತೆ ಕೇಸ್: ಕುಟುಂಬ ಕಲ್ಯಾಣ‌ ಅಧಿಕಾರಿಯ ಹೆಚ್ಚುವರಿ ಅಧಿಕಾರ ಮೊಟಕು
author img

By

Published : Jul 1, 2022, 12:25 PM IST

ಬೆಳಗಾವಿ: ಬೆಳಗಾವಿಯ ಮೂಡಲಗಿ ಪಟ್ಟಣದ ಹಳ್ಳದಲ್ಲಿ ಏಳು ಭ್ರೂಣಗಳು ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬ ಕಲ್ಯಾಣ‌ ಇಲಾಖೆ ಅಧಿಕಾರಿ ಡಾ.ಎ.ವಿ ಕಿವಡಸಣ್ಣವರ ಅವರು ನಿರ್ವಹಣೆ ಮಾಡುತ್ತಿದ್ದ ಕೆಪಿಎಂಇ ಮತ್ತು ಪಿಸಿಪಿಎನ್​ಡಿಟಿ ಅಧಿಕಾರ ಮೊಟಕುಗೊಳಿಸಿ ಆದೇಶ ಹೊರಡಿಸಲಾಗಿದೆ.

Extra powers curtailed of belagavi family welfare officer
ಕುಟುಂಬ ಕಲ್ಯಾಣ‌ ಅಧಿಕಾರಿಯ ಹೆಚ್ಚುವರಿ ಅಧಿಕಾರ ಮೊಟಕು

ಜೂ.24ರಂದು ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದ ಹಳ್ಳದಲ್ಲಿ ಏಳು ಮೃತ ಭ್ರೂಣಗಳು ಪ್ಲಾಸ್ಟಿಕ್ ಡಬ್ಬಿಯಲ್ಲಿ ಪತ್ತೆಯಾಗಿದ್ದವು. ಪ್ರಕರಣದ ಸಂಬಂಧ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್​ ಪಾಟೀಲ ಆರೋಗ್ಯ ಇಲಾಖೆಗೆ ವರದಿ ಸಲ್ಲಿಕೆ ಮಾಡಿದ್ದರು. ವರದಿಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ವಿ ಕಿವಡಸಣ್ಣವರ ಕಾರ್ಯವೈಖರಿ ಸಮರ್ಪಕವಾಗಿಲ್ಲ.‌ ಕಾಲಕಾಲಕ್ಕೆ ಸ್ಕ್ಯಾನಿಂಗ್ ಸೆಂಟರ್, ಹೆರಿಗೆ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ಉಲ್ಲೇಖಿಸಿ ವರದಿ ಸಲ್ಲಿಸಿದ್ದರು.

ಇದನ್ನೂ ಓದಿ: ಹತ್ತುತ್ತಿರುವಾಗಲೇ ಮುಂದಕ್ಕೆ ಸಾಗಿದ ಬಸ್​, ಕೆಳಗೆ ಬಿದ್ದು ವಿದ್ಯಾರ್ಥಿನಿ ಸ್ವಲ್ಪದರಲ್ಲೇ ಪಾರು: ಸಿಸಿಟಿವಿ ವಿಡಿಯೋ

ಬೆಳಗಾವಿ ಡಿಸಿ ವರದಿಯನ್ನು ಆಧರಿಸಿ ಡಾ.ಎ.ವಿ. ಕಿವಡಸಣ್ಣವರ ನಿರ್ವಹಣೆ ಮಾಡುತ್ತಿದ್ದ ಕೆಪಿಎಂಇ ಮತ್ತು ಪಿಸಿಪಿಎನ್​ಡಿಟಿ ಅಧಿಕಾರ ಮೊಟಕುಗೊಳಿಸಿ ಆದೇಶ ಹೊರಡಿಸಲಾಗಿದೆ. ಕಿವಡಸಣ್ಣವರ ನಿರ್ವಹಣೆ ಮಾಡುತ್ತಿದ್ದ ಕೆಪಿಎಂಇ ಮತ್ತು ಪಿಸಿಪಿಎನ್​ಡಿಟಿ ಅಧಿಕಾರವನ್ನು ಬೆಳಗಾವಿ ಜಿಲ್ಲಾ ಸರ್ವೇಕ್ಷಣಾಧಿಕಾರಿಯಾಗಿದ್ದ ಡಾ.ಬಿ.ಎನ್ ತುಕ್ಕಾರಗೆ ವರ್ಗಾವಣೆ ಮಾಡಿ ಹೆಚ್ಚುವರಿ ಜವಾಬ್ದಾರಿ ನೀಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು ಆದೇಶ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.