ETV Bharat / state

ಬರಕ್ಕೆ ನಲುಗಿದ ಬೆಳಗಾವಿ ಜಿಲ್ಲೆ ಜನತೆ... ಜಾನುವಾರುಗಳನ್ನು ಮಾರಲು ಮುಂದಾದ ರೈತ!

ಜಿಲ್ಲೆಯಲ್ಲಿ ತೀವ್ರ ಬರಗಾಲ ಎದುರಾಗಿದ್ದರಿಂದ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದ್ದು, ಅನಿವಾರ್ಯವಾಗಿ ದಲ್ಲಾಳಿಗಳು ಕೇಳಿದಷ್ಟು ದುಡ್ಡಿಗೆ ಜಾನುವಾರುಗಳನ್ನು ಮಾರುವ ಸ್ಥಿತಿ ರೈತರಿಗೆ ಎದುರಾಗಿದೆ.

ಜಾನುವಾರುಗಳನ್ನು ಮಾರಲು ಮುಂದಾದ ರೈತರು
author img

By

Published : Jun 20, 2019, 8:09 AM IST

ಬೆಳಗಾವಿ: ತೀವ್ರ ಬರಗಾಲ ಅನುಭವಿಸುತ್ತಿರುವ ಜಿಲ್ಲೆಯ ಅನೇಕ ಹಳ್ಳಿಗಳ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತಿದೆ. ಬಿತ್ತಿದ ಬೆಳೆ ಒಣಗಿದ್ದು, ಜನ ಜಾನುವಾರುಗಳಿಗೂ ನೀರಿನ ಸಮಸ್ಯೆ ತಲೆದೋರಿದೆ. ಇದರಿಂದ ರೈತರು ಜಾನುವಾರುಗಳನ್ನು ಮಾರಲು ಮುಂದಾಗಿದ್ದಾರೆ.

ಜಿಲ್ಲೆಯಲ್ಲಿ ತೀವ್ರ ಬರಗಾಲ ಪರಿಸ್ಥಿತಿ ಎದುರಾಗಿದ್ದರಿಂದ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದ್ದು, ಅನಿವಾರ್ಯವಾಗಿ ದಲ್ಲಾಳಿಗಳು ಕೇಳಿದಷ್ಟು ದುಡ್ಡಿಗೆ ಸಾಕಿದ ಜಾನುವಾರುಗಳನ್ನು ಮಾರುವ ಸ್ಥಿತಿ ರೈತರಿಗೆ ಎದುರಾಗಿದೆ. ಇದಕ್ಕೆ ಮೂಲ ಕಾರಣ ಮೇವಿನ ಕೊರತೆ ಜೊತೆಗೆ ಕುಡಿಯುವ ನೀರಿನ ಸಮಸ್ಯೆ.

ಜಾನುವಾರುಗಳನ್ನು ಮಾರಲು ಮುಂದಾದ ರೈತರು

ಬರಗಾಲಕ್ಕೆ ಹೆದರಿ ರೈತರು ತಮ್ಮ ಜಾನುವಾರುಗಳನ್ನು ಮಾರಲು ಮುಂದಾದರೂ ಪೇಟೆಯಲ್ಲಿ ಅವುಗಳನ್ನು ಯಾರೂ ಖರೀದಿ ಮಾಡುವ ಸಾಹಸ ತೋರುತ್ತಿಲ್ಲ. ಇದರಿಂದ ರೈತರು ದಾರಿ ಕಾಣದ ಕುರುಡರಂತಾಗಿದ್ದಾರೆ.

Intro:*****ವಿಶೇಷ ವರದಿ******

ಬರಗಾಲದ ಬವಣೆ : ನೆಲಕಚ್ಚಿದ ಜಾನುವಾರುಗಳ ಬೆಲೆ

ಬೆಳಗಾವಿ : ತೀವ್ರ ಬರಗಾಲದ ಅನುಭವಿಸುತ್ತಿರು ಜಿಲ್ಲೆಯ ಅನೇಕ ಹಳ್ಳಿಗಳಲ್ಲಿ ರೈತರಿಗೆ ನೋವಿನ ಮೇಲೆ ಬರೆ ಎಳೆದಂತಾಗುತ್ತಿದೆ. ಬಿತ್ತಿದ ಬೆಳೆ ಒಣಗಿದ್ದು ಜನ ಜಾನುವಾರುಗಳಿಗೂ ನೀರಿನ ಸಮಸ್ಯೆ ಕಾಡತೊಡಗಿದೆ. ಮನೆಯ ಮಕ್ಕಳಂತೆ ಬೆಳೆಸಿದ ಜಾನುವಾರುಗಳನ್ನು ರೈತ ಒಲ್ಲದ ಮನಸ್ಸಿನಿಂದ ಮಾರುತ್ತಿದ್ದು ಈ ಕುರಿತಾದ ಒಂದು ಸ್ಟೋರಿ.

Body:ಕೆರೆ ಕಟ್ಟೆ, ನದಿಗಳಂತಹ ನೀರಿನ‌ ಮೂಲಗಳು ಬತ್ತಿ ಹೊಗಿವೆ. ಕುಡಿಯುವ ನೀರಿಗಾಗಿ ಹತ್ತಾರೂ ಕಿಮೀ ದೂರ ಸಾಗಬೇಕಾದ ಅನಿವಾರ್ಯತೆ ಎದುರಾಗಿದೆ. ಜನರ ಬವಣೆ ಒಂದು ಕಡೆಯಾದರೆ ಇನ್ನೂ ಮನೆಯ ಮಕ್ಕಳಂತೆ ಪೋಷಿಸಿದ ಜಾನುವಾರಗಳನ್ನು ಕಡಿಮೆ ದರದಲ್ಲಿ ಪೇಟೆಗೆ ಮಾರುವ ಪರಿಸ್ಥಿತಿ ಎದುರಾಗಿದೆ. ದಲ್ಲಾಳಿಗಳು ಹೇಳಿದ ಮೊತ್ತಕ್ಕೆ ಜಾನುವಾರು ಕೊಟ್ಟು ಸಪ್ಪೆ ಮೂಖ ಹಾಕಿ ರೈತ ಮನೆಗೆ ಬರುವ ದೃಶ್ಯ ಜಿಲ್ಲೆಯಲ್ಲಿ ಸಾಮಾನ್ಯವಾಗಿದೆ.

ಹೌದು ಬೆಳಗಾವಿ ಜಿಲ್ಲೆ ಈ ವರ್ಷ ಮಳೆರಾಯನ ಅವಕೃಪೆಗೆ ಒಳಪಟ್ಟಿದೆ. ರೈತರ ಕಷ್ಟ ಹೇಳತೀರದಾಗಿದ್ದು ಮನೆಯ ಮುಂದೆ ಜಾನುವಾರ ಕಟ್ಟಿಕೊಳ್ಳದ ಪರಿಸ್ಥಿತಿ ಎದುರಾಗಿದೆ. ಇದರಿಂದ ಜಾನುವಾರುಗಳನ್ನು ಸಾಕಿ ಹೊಸ ಬದುಕು ಕಟ್ಟಿಕೊಳ್ಳುವ ಹವಣಿಕೆಯಲ್ಲಿದ್ದ ರೈತ ತಲೆಯ ಮೇಲೆ ಕೈಇಟ್ಟು ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗಿದ್ದು, ಬಡವಣ ಸಿಟ್ಟು ದವಡೆಗೆ ಮೂಲ ಎಂಬ ಪರಿಸ್ಥಿತಿ ನಿರ್ಮಾಣವಾಗೆ.

ಸಮಾನ್ಯವಾಗಿ ಎತ್ತುಗಳಿಗೆ ಒಳ್ಳೆಯ ಬೆಲೆ ಸಿಗುತ್ತಿತ್ತು ಆದರೆ ತೀವ್ರವಾಗಿ ಬರಗಾಲ ಆವರಿಸಿರುವ ಪರಿಣಾಮ ಅರ್ಧ ಮೊತ್ತಕ್ಕೆ ಮಾರಾಟವಾಗುವ ದುಸ್ಥಿತಿ ಎದುರಾಗಿದೆ. ಇದಕ್ಕೆ ಮೂಲ ಕಾರಣ ಮೇವಿನ ಕೊರತೆ ಜೊತೆಗೆ ಕುಡಿಯುವ ನೀರಿನ ಕೊರತೆ. ಬರಗಾಲಕ್ಕೆ ಹೆದರಿ ರೈತರು ತಮ್ಮ ಜಾನುವಾರುಗಳನ್ನು ಪೇಟೆಗೆ ತರುತ್ತಿದ್ದು ಅವುಗಳನ್ನು ಯಾರೂ ಖರೀದಿ ಮಾಡದ ಪರಿಸ್ಥಿತಿ ಉಂಟಾಗಿದೆ. ಒಂದು ವೇಳೆ ಜಾನುವಾರುಗಳನ್ನು ಕೊಂಡುಕೊಳ್ಳಲು ಮುಂದಾದರು ಅವುಗಳ ಬೆಲೆ ಅರ್ಧದಷ್ಟು ಇಳಿಕೆ ಮಾಡಿ ಕೇಳುತ್ತಿದ್ದು ರೈತರಿಗೆ ಬೇರೆ ದಾರಿ ಇಲ್ಲದೆ ಕೊಟ್ಟು ಬರುತ್ತಿದ್ದಾರೆ.

Conclusion:ಒಟ್ಟಿನಲ್ಲಿ ಮಳೆಯಾಗದೆ ಕಂಗಾಲಾದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಬೆಳೆದ ಬೆಳೆಗಳು ಒಣಗಿರುವ ಸಂದರ್ಭದಲ್ಲಿ ಸರ್ಕಾರ ಗೋಶಾಲೆ ಪ್ರಾರಂಭಿಸಿ ಜನರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಬೇಕು. ಇದೇ ರೀತಿ ಪರಿಸ್ಥಿತಿ ಮುಂದುವರೆದರೆ ಜಾನುವಾರುಗಳನ್ನು ಕಟುಕರ ಪಾಲಾಗುವ ಲಕ್ಷಣ ಕಂಡುಬರುತ್ತಿದೆ. ಒಟ್ಟಿನಲ್ಲಿ ಬರಗಾಲದಿಂದ ತತ್ತರಿಸಿರುವ ರೈತರ ಕಷ್ಟಗಳಿಗೆ ಸರ್ಕಾರ ಆದಷ್ಟು ಬೇಗ ಸ್ಪಂದಿಸಿದರೆ ಒಳಿತು.

ಬೈಟ್ : ಚುನ್ನಪ್ಪ ಪುಜಾರಿ ( ರೈತ ಮುಖಂಡ)
‌ ‌ : ಜಯಶ್ರೀ ( ರೈತ ಮಹಿಳೆ)

ವಿನಾಯಕ ಮಠಪತಿ
ಬೆಳಗಾವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.