ETV Bharat / state

ಎಪಿಎಂಸಿ ಸದೃಢಗೊಳಿಸಿ, ರೈತ ಸ್ನೇಹಿ ಮಾಡಿ: ಕೃಷಿ ಆರ್ಥಿಕ ತಜ್ಞ ಡಾ ಪ್ರಕಾಶ ಕಮ್ಮರಡಿ ಆಗ್ರಹ - ಈಟಿವಿ ಭಾರತ್ ಕನ್ನಡ ಸುದ್ದಿ

ರೈತರಿಗೆ ಮಾರಕವಾಗಿದ್ದ ಎಪಿಎಂಸಿ ಕಾಯ್ದೆಯನ್ನು ಹಿಂಪಡೆಯುವ ನಿರ್ಧಾರ ಮಾಡಿದ್ದು, ರೈತರಿಗೆ ಹಾಗೂ ವರ್ತಕರ ಮೊಗದಲ್ಲಿ ಮಂದಹಾಸ ಮೂಡಿದೆ ಎಂದು ಕೃಷಿ ಆರ್ಥಿಕ ತಜ್ಞ ಡಾ ಪ್ರಕಾಶ ಕಮ್ಮರಡಿ ಹೇಳಿದ್ದಾರೆ.

ಕೃಷಿ ಆರ್ಥಿಕ ತಜ್ಞ ಡಾ ಪ್ರಕಾಶ ಕಮ್ಮರಡಿ
ಕೃಷಿ ಆರ್ಥಿಕ ತಜ್ಞ ಡಾ ಪ್ರಕಾಶ ಕಮ್ಮರಡಿ
author img

By

Published : Jul 3, 2023, 4:07 PM IST

ಕೃಷಿ ಆರ್ಥಿಕ ತಜ್ಞ ಡಾ ಪ್ರಕಾಶ ಕಮ್ಮರಡಿ

ಬೆಳಗಾವಿ : ಎಪಿಎಂಸಿ ಕಾಯ್ದೆಗೆ ತಂದಿರುವ ತಿದ್ದುಪಡಿ ಹಿಂಪಡೆದರೆ ಸಾಲದು ನಮ್ಮ ಕೃಷಿ ಮಾರಾಟ ವ್ಯವಸ್ಥೆ ಸದೃಢಗೊಳಿಸಿ ರೈತ ಸ್ನೇಹಿ ಮಾಡುವಂತೆ ಕೃಷಿ ಆರ್ಥಿಕ ತಜ್ಞ ಡಾ ಪ್ರಕಾಶ ಕಮ್ಮರಡಿ ಒತ್ತಾಯಿಸಿದ್ದಾರೆ.

ಬೆಳಗಾವಿಯ ಎಪಿಎಂಸಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ‌ ಹಿಂದಿನ ಕೊರೊನಾ ವೇಳೆ ಬಿಜೆಪಿ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಅವಶ್ಯಕತೆ ಇರಲಿಲ್ಲ. ಎಪಿಎಂಸಿ ಕಾಯ್ದೆ ವ್ಯಾಪ್ತಿಗೆ ಬರುವ ಉತ್ಪನ್ನಗಳ ಮಾರಾಟ ಈ ಪ್ರಾಂಗಣದಲ್ಲಿ ನಡೆಯಬೇಕು. ರೈತರು ಬೆಳೆದ ಬೆಳೆಗಳನ್ನು ನೇರವಾಗಿ ಎಪಿಎಂಸಿಗೆ ಬಂದರೆ ವರ್ತಕರು ಅದನ್ನು ಖರೀದಿಸಿ ಇಲ್ಲಿಯೇ ಮಾರಾಟ ಮಾಡುತ್ತಾರೆ. ಅದು ಬೇಡ ಎನ್ನುವ ಉದ್ದೇಶದಿಂದ ಹಿಂದಿನ ಬಿಜೆಪಿ ಸರ್ಕಾರ ನಿರ್ಧಾರ ಮಾಡಿ ಎಪಿಎಂಸಿ ಕಾಯ್ದೆ ಜಾರಿಗೆ ತಂದಿದ್ದರು. ರೈತರಿಗೆ ಮಾರಕವಾಗಿದ್ದ ಎಪಿಎಂಸಿ ಕಾಯ್ದೆ ಹಿಂಪಡೆಯುವ ನಿರ್ಧಾರ ಮಾಡಿದ್ದು, ರೈತರಿಗೆ ಹಾಗೂ ವರ್ತಕರ ಮೊಗದಲ್ಲಿ ಮಂದಹಾಸ ಮೂಡಿದೆ ಎಂದರು.

ತಾಲೂಕು ಮಟ್ಟದಲ್ಲಿರುವ ಎಪಿಎಂಸಿ ಪ್ರಾಂಗಣಕ್ಕೆ ತಾವು ಬೆಳೆದಿರುವ ಉತ್ಪನ್ನ ತರಲು ರೈತರಿಗೆ ಕಷ್ಟವಾಗಿದೆ. ಇದಕ್ಕೆ ಪರಿಹಾರವಾಗಿ ಆದಷ್ಟು ಬೇಗ ರೈತರ ಸಮೀಪಕ್ಕೆ ಎಪಿಎಂಸಿ ಶಾಖೆ ತೆರೆಯಬೇಕು. ರೈತರನ್ನು ಒಗ್ಗೂಡಿಸಿ ಉತ್ಪಾದಕರ ಸಂಘಗಳನ್ನು ರಚಿಸಬೇಕು. ಸಂಪೂರ್ಣ ಉಚಿತವಾಗಿ ಸರ್ಕಾರವೇ ಕೃಷಿ ಉತ್ಪನ್ನ ಸಾಗಣೆ ವೆಚ್ಚ ಭರಿಸಬೇಕು ಮತ್ತು ಗುಣಮಟ್ಟದ ಬಗ್ಗೆ ರೈತರಿಗೆ ತರಬೇತಿ ನೀಡಿ ಹೊಲದಲ್ಲಿಯೇ ಇದು ನಿರ್ಧಾರವಾಗಬೇಕು ಎಂದರು.

ಬೆಲೆ ಏರಿಕೆಗೆ ನಿಯಂತ್ರಣ ಹಾಕಬಹುದು: ಇಂದು ಆಹಾರ, ತರಕಾರಿ, ದ್ವಿದಳಧಾನ್ಯ ಸೇರಿ ಎಲ್ಲ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದರಿಂದ ಜನಸಾಮಾನ್ಯರು ಬಹಳಷ್ಟು ಸಂಕಷ್ಟ ಅನುಭವಿಸುವಂತಾಗಿದೆ. ಆ ಹಿನ್ನೆಲೆಯಲ್ಲಿ ರೈತರು ಬೆಳೆದ ಬೆಳೆಗಳನ್ನು ಸ್ಪರ್ಧಾತ್ಮಕ ಲಾಭದಾಯಕ ಬೆಲೆಯಲ್ಲಿ, ಸಂಪೂರ್ಣ ಸರ್ಕಾರದ ನಿಯಂತ್ರಣ, ಉಸ್ತುವಾರಿಯಲ್ಲೇ ಮಾರಾಟ ಆಗಬೇಕು. ಇವುಗಳ ಅಂತಿಮ ಉಪಯೋಗ ಮತ್ತು ಅನುಭೋಗಕ್ಕೆ ಬಳಸುವವರಿಗಿನ ಶೇಖರಣೆ, ಸಾಗಾಣಿಕೆ, ಮೌಲ್ಯವರ್ಧನೆ, ವಾಣಿಜ್ಯ ಇತ್ಯಾದಿ ಮಾರಾಟ ಚಟುವಟಿಕೆಗಳ ಸಂಪೂರ್ಣ ಮಾಹಿತಿ ಲಭ್ಯವಿರಬೇಕು. ಆಗ ಮಾತ್ರ ಗ್ರಾಹಕರ ಹಿತರಕ್ಷಣೆ ಮಾಡಿ ಬೆಲೆ ಏರಿಕೆಗೆ ನಿಯಂತ್ರಣ ಹಾಕಬಹುದು ಎಂದರು.

ರೈತ ಬೆಳೆದಿರುವ ಉತ್ಪನ್ನಗಳ ಶೇಖರಣೆ ಪ್ರಮಾಣದ ಆಧಾರದ ಮೇಲೆ ರಿಯಾಯಿತಿ ದರದಲ್ಲಿ ಅಡಮಾನ ಸಾಲ ವ್ಯವಸ್ಥೆಯನ್ನು ಸಮರ್ಪಕವಾಗಿ ಜಾರಿಗೆ ತಂದಲ್ಲಿ ಬೆಳೆ ಕೊಯ್ಲಾದ ತಕ್ಷಣ ಬೇಕಾಬಿಟ್ಟಿ ಧಾರಣೆಗೆ ರೈತರು ಮಾರಾಟ ಮಾಡುವುದನ್ನು ತಡೆಗಟ್ಟಬಹುದು. ಗ್ರಾಮಾಂತರ ಪ್ರದೇಶದಲ್ಲಿ ಶೇಖರಿಸಿಟ್ಟರೆ ಆ ಆಧಾರದ ಮೇಲೂ ಅಡಮಾನ ಸಾಲ ವ್ಯವಸ್ಥೆ ನೀಡುವ ವಿನೂತನ ವ್ಯವಸ್ಥೆ ಜಾರಿಗೆ ಬರಬೇಕು. ರೈತ ಪಡೆದಿರುವ ಬೆಳೆ ಸಾಲ ಮತ್ತು ಮಾಡಿರುವ ಉತ್ಪನ್ನದ ಶೇಖರಣೆ ಇವೆರಡರ ನಡುವೆ ಸಂಬಂಧ ಏರ್ಪಡಿಸಿ ಸಾಲ ವಸೂಲಾತಿ ಕ್ರಮವನ್ನು ರೈತ ಸ್ನೇಹಿ ಮಾಡುವ ಜವಾಬ್ದಾರಿ ಸರ್ಕಾರದ್ದು ಎಂದು ಡಾ ಪ್ರಕಾಶ ಕಮ್ಮರಡಿ ಒತ್ತಾಯಿಸಿದರು.

ಕಾನೂನು ರಕ್ಷಣೆ ಒದಗಿಸುವುದು: ಕಾನೂನಿಗೆ ರಕ್ಷಣೆ ನೀಡಿ ಬೆಂಬಲ ಬೆಲೆ ಖಾತರಿಗೊಳಿಸಬೇಕು. ಕನಿಷ್ಟ ಬೆಂಬಲ ಬೆಲೆ ಅಥವಾ ಅದಕ್ಕೆ ಸಮಾನವಾದ ಬೆಲೆಗಿಂತ ಕಡಿಮೆ ಧಾರಣೆಯಲ್ಲಿ ರಾಜ್ಯದ ರೈತರು ಬೆಳೆದ ಉತ್ಪನ್ನ ಮಾರಾಟವಾಗದ ರೀತಿ ಕಾನೂನು ರಕ್ಷಣೆ ಒದಗಿಸುವುದು, ಇ ಟೆಂಡರ್​ನಲ್ಲಿ ಬೆಂಬಲ ಬೆಲೆ ಕಡಿಮೆ ಮಾಡಿ ಉಲ್ಲೇಖಕ್ಕೆ ಬರದ ಹಾಗೆ ಮಾಡುವ ಎಲ್ಲ ಹೊಣೆಗಾರಿಕೆಯನ್ನು ಎಪಿಎಂಸಿ ಕಾರ್ಯದರ್ಶಿಗೆ ವಹಿಸಬೇಕು. ಸಕಾಲದಲ್ಲಿ ಖರೀದಿ ಕೈಗೊಳ್ಳಲು 5 ಸಾವಿರ ಕೋಟಿ ಬೆಲೆ ನಿಗದಿಪಡಿಸಬೇಕೆಂದು ಆಗ್ರಹಿಸಿದರು.

ಚಾರ್ಟೆಡ್ ಅಕೌಂಟೆಂಟ್ ಜಿ. ವ್ಹಿ ಕುಲಕರ್ಣಿ, ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ, ಎಪಿಎಂಸಿ ತರಕಾರಿ ವರ್ತಕರ ಸಂಘದ ಅಧ್ಯಕ್ಷ ಬಸನಗೌಡ ಪಾಟೀಲ, ಶಿವಲೀಲಾ‌ ಮಿಸಾಳೆ ಸೇರಿ ಇನ್ನಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ: APMC Act: ಎಪಿಎಂಸಿ ಕಾಯ್ದೆ ವಾಪಸ್‌ಗೆ ಸರ್ಕಾರ ನಿರ್ಣಯ: ರೈತ ಮುಖಂಡರ ಬೆಂಬಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.