ಅಥಣಿ: ಕೊರೊನಾ ವೈರಸ್ ತಡೆಯಲು ಭಾರತ ಲಾಕ್ ಡೌನ್ ಆಗಿರುವ ಬೆನ್ನಲ್ಲೆ ಬಡವರು ಕೂಲಿ ಕಾರ್ಮಿಕರು ಕೆಲಸ ಮತ್ತು ಸಂಬಳ ಇಲ್ಲದೆ ಪರದಾಡುವಂತಾಗಿದೆ. ಅಂತಹವರಿಗೆ ತಾಲ್ಲೂಕು ಪುರಸಭೆ ಮಾಜಿ ಅಧ್ಯಕ್ಷ ರಾವಸಾಬ ಐಹೊಳೆ ಮತ್ತು ಕುಟುಂಬದ ಸದಸ್ಯರು ದಿನನಿತ್ಯ ಬಳಕೆಯ ಸಾಮಗ್ರಿ ವಿತರಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಜಂಬಗಿ. ಸಂಬರಗಿ ಮತ್ತು ಅಥಣಿ ಪಟ್ಟಣದ ವಾರ್ಡ್ ನಂಬರ ಮೂರರಲ್ಲಿ ಪುರಸಭೆ ಮಾಜಿ ಅಧ್ಯಕ್ಷ ರಾವಸಾಬ ಐಹೊಳೆ ಮತ್ತು ಕುಟುಂಬದ ಸದಸ್ಯರು ದಿನನಿತ್ಯ ಬಳಕೆಯ ಸಾಮಗ್ರಿ ವಿತರಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅಥಣಿ, ಜಂಬಗಿ, ಸಂಬರಗಿ ಸೇರಿದಂತೆ ಸುಮಾರು ಎರಡುನೂರಕ್ಕು ಹೆಚ್ಚು ಕುಟುಂಬಗಳಿಗೆ ರವೆ, ಎಣ್ಣೆ, ಸೋಪು, ಬೇಳೆ, ಅಕ್ಕಿ, ಸಕ್ಕರೆ, ಮಾಸ್ಕ್, ಪೇಸ್ಟ್ ಸೇರಿದಂತೆ ಒಂದು ತಿಂಗಳಿಗೆ ಆಗುವಷ್ಟು ದಿನ ಬಳಕೆ ವಸ್ತುಗಳ ವಿತರಣೆ ಮಾಡಿದರು.
ಈ ವೇಳೆ ಅಥಣಿ ಪೊಲೀಸ್ ಡಿವೈಎಸ್ಪಿ ಎಸ್.ವಿ ಗಿರೀಶ್ ಮತ್ತು ವೃತ್ತ ನಿರೀಕ್ಷಕ ಶಂಕರಗೌಡ ಬಸನಗೌಡರ ಹಾಗೂ ಕಾಂಗ್ರೆಸ್ ಮುಖಂಡರಾದ ಗಜಾನನ ಮಂಗಸೂಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.