ಚಿಕ್ಕೋಡಿ: ಅಥಣಿಯಿಂದ ಬೆಳಗಾವಿಗೆ ಪ್ರಯಾಣಿಸಬೇಕಾದರೆ ಸುಮಾರು 200 ಕಿ.ಮೀ. ಕ್ರಮಿಸಬೇಕಾದ ಪರಿಸ್ಥಿತಿಯಿದೆ. ಹಾಗಾಗಿ ಅಥಣಿಯನ್ನು ಜಿಲ್ಲೆಯಾಗಿಸಿ ಇಲ್ಲಿನ ಜನರ ತೊಂದರೆಗಳಿಗೆ ವಿರಾಮ ಹೇಳಿ ಎಂದು ಜಿಲ್ಲಾ ಹೋರಾಟಗಾರರು ಒತ್ತಾಯಿಸುತ್ತಿದ್ದಾರೆ.
ಅಥಣಿ 109 ಹಳ್ಳಿಗಳನ್ನು ಒಳಗೊಂಡಿದೆ. ತಾಲೂಕಿನ ಕೊನೆಯ ಹಳ್ಳಿ ಕೊಟ್ಟಲಗಿಯಿಂದ ಬೆಳಗಾವಿಗೆ ಪ್ರಯಾಣಿಸಬೇಕಾದರೆ ಸುಮಾರು 200 ಕಿ.ಮೀ ಆಗುತ್ತದೆ. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆ ಉಂಟಾಗುತ್ತಿದೆ. ಅದಕ್ಕಾಗಿ ಅಥಣಿಯನ್ನು ಜಿಲ್ಲೆಯನ್ನಾಗಿಸಬೇಕು ಎಂದು ಆಗ್ರಹಿಸಲಾಗುತ್ತಿದೆ.
ಈ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಮುತುವರ್ಜಿ ವಹಿಸಿ ಮುಂದಿನ ಕ್ಯಾಬಿನೆಟ್ನಲ್ಲಿ ಪ್ರಸ್ತಾಪಿಸಬೇಕಿದೆ. ಜೊತೆಗೆ ಇದೇ ತಾಲೂಕಿನವರಾದ ಡಿಸಿಎಂ ಲಕ್ಷ್ಮಣ ಸವದಿಯವರೂ ಈ ಉತ್ತಮ ಕಾರ್ಯಕ್ಕೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.