ಬೆಳಗಾವಿ: ಎಚ್ಚರ ವಹಿಸುವಂತೆ ಜನರಲ್ಲಿ ಎಷ್ಟೇ ಮನವಿ ಮಾಡಿದ್ರೂ ನಗರದಲ್ಲಿ ಜನರು ರಾಜಾರೋಷವಾಗಿ ಸುತ್ತಾಡುತ್ತಾ ಶಾಪಿಂಗ್ ಮಾಡುತ್ತಿರುವುದು ಸಾಮಾನ್ಯವಾಗಿ ಕಂಡು ಬಂದಿತು.
ನಗರದಲ್ಲಿ ಲಾಕ್ ಡೌನ್ ಘೋಷಣೆಯಾಗಿದ್ದರೂ ಜನರು ಮಾತ್ರ ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ, ನಗರದಲ್ಲಿ ಸಾರ್ವಜನಿಕರ ಓಡಾಟ ಹೆಚ್ಚಾಗಿರುವ ಹಿನ್ನೆಲೆ ಚೆನ್ನಮ್ಮ ವೃತ್ತದಲ್ಲಿ ಬ್ಯಾರಿಕೇಡ್ ಹಾಕಿ ಪೊಲೀಸರು ಸಾರ್ವಜನಿಕರಿಗೆ ಲಾಠಿ ರುಚಿ ತೋರಿಸುತ್ತಿದ್ದಾರೆ.
ಈ ಸಂಬಂಧ ಮಾತನಾಡಿದ ಡಿಸಿಪಿ ಶಿಮಾ ಲಾಟ್ಕರ್, ಸರ್ಕಾರ ಈಗಾಗಲೇ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ. ಜನರು ತಾವೇ ಸ್ವತಃ ನಿಯಂತ್ರಣ ಹಾಕಿಕೊಳ್ಳಬೇಕು. ಏನು ಸಿಗುವುದಿಲ್ಲ ಎಂಬ ಭಯದಿಂದ ಶಾಪಿಂಗ್ ಮಾಡಲು ಮನೆಯಿಂದ ಹೊರ ಬರಬಾರದು, ಮನೆಯಲ್ಲಿಯೇ ಇರಬೇಕು, ಬೇಕಾದ ಅಗತ್ಯ ವಸ್ತುಗಳಿಗೆ ಮಾತ್ರ ಜನರು ಹೊರಗೆ ಬರಬೇಕು ಎಂದು ಮನವಿ ಮಾಡಿದರು.