ETV Bharat / bharat

ಕಾಂಗ್ರೆಸ್ ಸಂವಿಧಾನವನ್ನು ಪುನಃ ಬರೆಯಲು ಬಯಸುತ್ತದೆಯೇ?; 'ಖಾಲಿ' ಕೆಂಪು ಪುಸ್ತಕದ ಬಗ್ಗೆ ಬಿಜೆಪಿ ಪ್ರಶ್ನೆ - CONG WANT TO REWRITE CONSTITUTION

ರಾಹುಲ್​ ಗಾಂಧಿ ಅವರು ನಿನ್ನೆ ಸಂವಿಧಾನ್ ಸಮ್ಮಾನ್ ಸಮ್ಮೇಳನದಲ್ಲಿ ಕೆಂಪು ಪುಸ್ತಕ ಪ್ರದರ್ಶಿಸಿ ಸಂವಿಧಾನದ ಮಹತ್ವದ ಬಗ್ಗೆ ಹೇಳಿದ್ದರು. ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

Does Cong want to rewrite Constitution, asks BJP over blank red book in Maharashtra
ಕಾಂಗ್ರೆಸ್ ಸಂವಿಧಾನವನ್ನು ಪುನಃ ಬರೆಯಲು ಬಯಸುತ್ತದೆಯೇ?; 'ಖಾಲಿ' ಕೆಂಪು ಪುಸ್ತಕದ ಬಗ್ಗೆ ಬಿಜೆಪಿ ಪ್ರಶ್ನೆ (IANS)
author img

By ETV Bharat Karnataka Team

Published : Nov 7, 2024, 4:35 PM IST

ಮುಂಬೈ, ಮಹಾರಾಷ್ಟ್ರ: ಬುಧವಾರ ನಾಗ್ಪುರದಲ್ಲಿ ನಡೆದ ರಾಹುಲ್ ಗಾಂಧಿ ಅವರ ಸಂವಿಧಾನ್ ಸಮ್ಮಾನ್ ಸಮ್ಮೇಳನದ ಸಮಾವೇಶದಲ್ಲಿ ಸಂವಿಧಾನದ ಪ್ರತಿ ಎಂದು ಖಾಲಿ ನೋಟ್‌ಬುಕ್ ಹಂಚಿರುವುದನ್ನು ಭಾರತೀಯ ಜನತಾ ಪಕ್ಷ ಗುರುವಾರ ತೀವ್ರವಾಗಿ ಖಂಡಿಸಿದೆ. ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ಸುಳ್ಳುಗಳನ್ನು ಹರಡುತ್ತಿದೆ ಎಂದು ವಾಗ್ದಾಳಿ ನಡೆಸಿದೆ.

ಕಾಂಗ್ರೆಸ್ ಸಂಸದ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್​ ಗಾಂಧಿ ಅವರನ್ನು ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ಥರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಸಂವಿಧಾನದ ಪ್ರತಿ ಎಂದು ಖಾಲಿ ನೋಟ್‌ಪ್ಯಾಡ್ ತೋರಿಸುವ ಮೂಲಕ ಸಂವಿಧಾನವನ್ನು ಬರೆಯುವ ಪಕ್ಷದ ಯೋಜನೆಯನ್ನು ರಾಹುಲ್​ ಬಹಿರಂಗ ಪಡಿಸಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.

ಸಂವಿಧಾನವನ್ನು ತನಗೆ ಬೇಕಾದಂತೆ ಬರೆಯುವ ಯೋಜನೆಯೇ?: ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಕೇಶವ ಉಪಾಧ್ಯೆ ಎಕ್ಸ್​ ಪೋಸ್ಟ್​ನಲ್ಲಿ ಹೀಗೆ ಹೇಳಿದ್ದಾರೆ “ಖಾಲಿ ನೋಟ್‌ಪ್ಯಾಡ್‌ಗೆ ಸಂವಿಧಾನದ ಹೆಸರನ್ನು ನೀಡುವ ಮೂಲಕ, ಸಂವಿಧಾನವನ್ನು ತನಗೆ ಬೇಕಾದಂತೆ ಬರೆಯುವ ಯೋಜನೆಯನ್ನು ಕಾಂಗ್ರೆಸ್ ಪರೋಕ್ಷವಾಗಿ ಬಹಿರಂಗಪಡಿಸಿದೆಯೇ? ಇಲ್ಲವಾದಲ್ಲಿ ಸಂವಿಧಾನ ನೀಡಿರುವ ಮೀಸಲಾತಿಯನ್ನು ರದ್ದು ಮಾಡುವುದಾಗಿ ಕಾಂಗ್ರೆಸ್ ಕಳೆದ ಕೆಲವು ದಿನಗಳಿಂದ ಮಾತನಾಡುತ್ತಿದೆ. ಕಾಂಗ್ರೆಸ್‌ಗೆ ಬೆಂಬಲ ನೀಡುವುದು ಎಂದರೆ ಸಂವಿಧಾನವನ್ನು ಕೊಲ್ಲುವುದು ಎಂದು ಅರ್ಥವೇ ಎಂದು ಅವರು ಎಕ್ಸ್​ ಹ್ಯಾಂಡಲ್​ ಮೂಲಕ ಪ್ರಶ್ನಿಸಿದ್ದಾರೆ.

ಬಿಜೆಪಿ ನಕಲಿ ಸುದ್ದಿಯನ್ನು ಹರಡುತ್ತಿದೆ: ಈ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖ್ಯ ವಕ್ತಾರ ಅತುಲ್ ಲೋಂಧೆ, ಬಿಜೆಪಿ ನಕಲಿ ಸುದ್ದಿಯನ್ನು ಹರಡುತ್ತಿದೆ ಎಂದು ಆರೋಪಿಸಿದ್ದಾರೆ. ರಾಹುಲ್ ಗಾಂಧಿಯವರು ಸಂವಿಧಾನದ ಪ್ರತಿಯನ್ನು ಹೊತ್ತೊಯ್ದರೆ, ಅದನ್ನು ಉಳಿಸುವ ಪಕ್ಷದ ಸಂಕಲ್ಪವನ್ನು ಪುನರುಚ್ಚರಿಸಿದರೆ, ಬಿಜೆಪಿಯವರು ಏಕೆ ವಿಚಲಿತರಾಗಿದ್ದಾರೆ ಎಂದು ಮರು ಪ್ರಶ್ನೆ ಮಾಡಿದ್ದಾರೆ.

ಇದನ್ನು ಓದಿ:ಭಯೋತ್ಪಾದನೆ ಮುಕ್ತ ಭಾರತ ನಿರ್ಮಾಣಕ್ಕೆ ಮೋದಿ ಸರ್ಕಾರ ಬದ್ಧ: ಅಮಿತ್​ ಶಾ

ರಾಹುಲ್​ ಗಾಂಧಿ ಹೇಳಿದ್ದೇನು?: ಬುಧವಾರ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ರಾಹುಲ್​ ಗಾಂಧಿ, ಭಗವಾನ್ ಬುದ್ಧ, ಗಾಂಧೀಜಿ, ಅಂಬೇಡ್ಕರ್, ಅಶೋಕ್, ಫುಲೆ ಮಾತನಾಡಿದ್ದೆಲ್ಲ ಸಂವಿಧಾನದಲ್ಲಿದೆ. ಈ ಪುಸ್ತಕವು ಕೇವಲ ಆಧುನಿಕ ಆವೃತ್ತಿಯಲ್ಲ. ಅದರ ಹಿಂದಿನ ಆಲೋಚನೆಗಳು 1000 ವರ್ಷಗಳಷ್ಟು ಹಳೆಯವು... ಈ ಪುಸ್ತಕವು (ಪ್ರದರ್ಶನಗಳು) ಬದುಕುವ ಮಾರ್ಗವಾಗಿದೆ ಎಂದು ಬಣ್ಣಿಸಿದ್ದರು. ಅಷ್ಟೇ ಅಲ್ಲ ಬಿಜೆಪಿ ಮತ್ತು ಆರೆಸ್ಸೆಸ್ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಮೌಲ್ಯಗಳನ್ನು ನಾಶಪಡಿಸುತ್ತಿದೆ ಎಂದು ಆರೋಪಿಸಿದ್ದರು.

ರಾಹುಲ್​ ವಿರುದ್ಧ ಫಡ್ನವೀಸ್​ ವಾಗ್ದಾಳಿ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಕೂಡ ರಾಹುಲ್ ಗಾಂಧಿಯನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದಾರೆ. ರಾಹುಲ್​ ಗಾಂಧಿ ಸಂವಿಧಾನದ ಪ್ರತಿಯನ್ನು ಕೆಂಪು ಹೊದಿಕೆಯೊಂದಿಗೆ ಹೊತ್ತೊಯ್ದರು ಎಂದು ಲೇವಡಿ ಮಾಡಿದ್ದಾರೆ. ರಾಹುಲ್ ಗಾಂಧಿ ಅವರು ಭಾರತದ ಸಂವಿಧಾನದ ಕೆಂಪು ಪ್ರತಿಯನ್ನು ತೋರಿಸುವ ಮೂಲಕ ಯಾವ ಸಂದೇಶವನ್ನು ನೀಡಲು ಬಯಸಿದ್ದರು? ಇದೇ ವೇಳೆ ಅವರು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್​ ತಿರುಗೇಟು: ಕಾಂಗ್ರೆಸ್ ರಾಜ್ಯಾಧ್ಯಕ್ಷ ನಾನಾ ಪಟೋಲೆ ಫಡ್ನವೀಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಂವಿಧಾನವನ್ನು ವಿರೋಧಿಸುವವರಿಗೆ ಸಂವಿಧಾನದ ಪುಸ್ತಕ ಕೆಂಪು, ಹಳದಿ ಅಥವಾ ಕಪ್ಪು ಎಂದು ನಿರ್ಧರಿಸುವ ಹಕ್ಕು ಇಲ್ಲ. ಬಿಜೆಪಿ ಮತ್ತು ಫಡ್ನವೀಸ್ ಅವರು ಸಂವಿಧಾನವನ್ನು ಉಳಿಸುವುದನ್ನು ನಗರ ನಕ್ಸಲಿಸಂಗೆ ಸಮೀಕರಿಸುತ್ತಾರೆಯೇ? ಎಂದು ಅವರು ಮರು ಪ್ರಶ್ನೆ ಹಾಕಿದ್ದಾರೆ.

ಇದನ್ನು ಓದಿ:ಮಹಾರಾಷ್ಟ್ರದಲ್ಲಿ ಗಂಡು ಮಕ್ಕಳಿಗೂ ಉಚಿತ ಶಿಕ್ಷಣ, ಧಾರಾವಿ ಯೋಜನೆ ರದ್ದು: ಉದ್ಧವ್​ ಠಾಕ್ರೆ ಪ್ರಣಾಳಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.