ETV Bharat / bharat

ನೀಟ್​-ಯುಜಿ 24 ಮರು ಪರೀಕ್ಷೆಗೆ ನಿರಾಕರಿಸಿದ್ದ ತೀರ್ಪಿನ ಮರುಪರಿಶೀಲನಾ ಅರ್ಜಿ ವಜಾ

ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್​, ನ್ಯಾ. ಬಿ ಪರ್ದಿವಾಲಾ ಮತ್ತು ನ್ಯಾ ಮನೋಜ್​ ಮಿಶ್ರಾ ಅವರನ್ನೊಳಗೊಂಡ ಪೀಠವು ಈ ಅರ್ಜಿಯನ್ನು ವಜಾ ಮಾಡಿದೆ.

no-error-apparent-sc-junks-plea-for-review-of-verdict-refusing-to-direct-re-exam-of-neet-ug-24
ಸುಪ್ರೀಂ ಕೋರ್ಟ್​ (ಸಂಗ್ರಹ ಚಿತ್ರ)
author img

By ETV Bharat Karnataka Team

Published : Nov 7, 2024, 4:14 PM IST

ನವದೆಹಲಿ: ನೀಟ್​- ಯುಜಿ 2024ರ ಪರೀಕ್ಷೆಗೆ ಅನುಮತಿ ನೀಡಲು ನಿರಾಕರಿಸಿದ ಆಗಸ್ಟ್​​ 2ರ ತೀರ್ಪನ್ನು ಮರು ಪರಿಶೀಲಿಸುವಂತೆ ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್​ ವಜಾ ಮಾಡಿದೆ.

ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್​, ನ್ಯಾ. ಬಿ ಪರ್ದಿವಾಲಾ ಮತ್ತು ನ್ಯಾ ಮನೋಜ್​ ಮಿಶ್ರಾ ಅವರನ್ನೊಳಗೊಂಡ ಪೀಠವು ಈ ಅರ್ಜಿಯನ್ನು ವಜಾ ಮಾಡಿದೆ. ಕಾಜಲ್​ ಕುಮಾರಿ ಮತ್ತು ಇತರರು ಅರ್ಜಿಯನ್ನು ಸಲ್ಲಿಸಿದ್ದು, ಈ ಕುರಿತು ಅಕ್ಟೋಬರ್​​ 22ರಂದು ಪೀಠ ಅದೇಶ ಹೊರಡಿಸಿತ್ತು. ಇದನ್ನು ಇತ್ತೀಚೆಗೆ ಸರ್ವೋಚ್ಛ ನ್ಯಾಯಾಲಯದ ವೆಬ್​ಸೈಟ್​ ಖಾತೆಯಲ್ಲೂ ಸಹ ಅಪ್​ಲೋಡ್​ ಮಾಡಲಾಗಿತ್ತು.

ದಾಖಲೆ ಮುಖಾಂತರ ಸ್ಪಷ್ಟವಾಗಿ ಯಾವುದೇ ದೋಷವಿಲ್ಲ. ಸುಪ್ರೀಂ ಕೋರ್ಟ್ ನಿಯಮ 2013ರ ಆದೇಶ XLVII ​ನಿಯಮ 1ರ ಅಡಿ ಪರಿಶೀಲನೆಗಾಗಿ ಯಾವುದೇ ಪ್ರಕರಣವನ್ನು ಸ್ಥಾಪಿಸಿಲ್ಲ. ಈ ಹಿನ್ನೆಲೆ ಮರು ಪರಿಶೀಲನೆ ಅರ್ಜಿಯನ್ನು ವಜಾ ಮಾಡಲಾಗುತ್ತಿದೆ ಎಂದು ಪೀಠ ತಿಳಿಸಿದೆ. ಇದೇ ವೇಳೆ ನ್ಯಾಯಾಲಯ ಮುಕ್ತ ವಿಚಾರಣೆ ನಡೆಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೂಡ ವಜಾ ಮಾಡಿದೆ.

ಆಗಸ್ಟ್​ 2ರಂದು ನೀಟ್​ ಯುಜಿ 2024 ಪರೀಕ್ಷೆಯನ್ನು ಹೊಸದಾಗಿ ನಡೆಸುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್​​ ನಿರಾಕರಿಸಿತ್ತು. ಪರೀಕ್ಷೆಯ ವ್ಯವಸ್ಥೆಯಲ್ಲಿಯ ಸೋರಿಕೆ ಅಥವಾ ಅಕ್ರಮ ನಡೆದಿದೆ ಎಂಬುದಕ್ಕೆ ತನ್ನ ದಾಖಲೆಯಲ್ಲಿ ಸಾಕಷ್ಟು ಪುರಾವೆಗಳಿಲ್ಲ. ಈ ಹಿನ್ನೆಲೆ ರದ್ದತಿ ಸಾಧ್ಯವಿಲ್ಲ ಎಂದು ತಿಳಿಸಿತ್ತು.

ಕಳಂಕಿತ ಅಭ್ಯರ್ಥಿಗಳನ್ನು ಕಳಂಕಿತವಲ್ಲದ ಅಭ್ಯರ್ಥಿಗಳಿಂದ ಬೇರೆ ಮಾಡಲು ಸಾಧ್ಯವಿದ್ದಾಗ, ಪರೀಕ್ಷೆಯನ್ನು ರದ್ದು ಮಾಡುವುದರಿಂದ ಯಾವುದೇ ಸಮರ್ಥನೆ ಇಲ್ಲ. ಪರೀಕ್ಷೆ ರದ್ದು ಮಾಡಿದಲ್ಲಿ ಪರೀಕ್ಷೆಗಾಗಿ ತಯಾರಿ ನಡೆಸಿದ ಪ್ರಾಮಾಣಿಕ ಅಭ್ಯರ್ಥಿಗಳು ತೊಂದರೆಗೆ ಒಳಗಾಗುತ್ತಾರೆ. ಮರು ಪರೀಕ್ಷೆಗೆ ಆದೇಶ ನೀಡುವುದರಿಂದ ವರ್ಷದ ಶೈಕ್ಷಣಿಕ ವೇಳಾಪಟ್ಟಿಗೆ ಅಡ್ಡಿಯಾಗುತ್ತದೆ ಎಂದು ಪೀಠ ತಿಳಿಸಿದೆ.

ಏನಿದು ಪ್ರಕರಣ: ಈ ವರ್ಷದ ಮೇ 5 ರಂದು ದೇಶಾದ್ಯಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ NEET-UG ಪರೀಕ್ಷೆಯನ್ನು ನಡೆಸಲಾಗಿತ್ತು. ಈ ವೇಳೆ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ದೇಶಾದ್ಯಂತ ಸಂಚಲನ ಮೂಡಿಸಿದ್ದ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು. ಬಳಿಕ ಪ್ರಮುಖ ಆರೋಪಿಯನ್ನು ಬಂಧಿಸಲಾಗಿತ್ತು. ಎನ್​ಟಿಎದಿಂದ ಪ್ರಶ್ನೆಪತ್ರಿಕೆ ಕದ್ದ ಪಂಕಜ್​ಕುಮಾರನನ್ನು ಸಿಬಿಐ ಬಂಧಿಸಿತ್ತು. ನಂತರ 14 ಜನ ಆರೋಪಿಗಳನ್ನು ಅರೆಸ್ಟ್​ ಮಾಡಿತ್ತು.

ಆರೋಪಿ ಪಂಕಜ್​ ಜಮ್‌ಶೆಡ್‌ಪುರದ 2017ರ ಬ್ಯಾಚ್‌ನ ಸಿವಿಲ್ ಎಂಜಿನಿಯರ್. ಹಜಾರಿಬಾಗ್‌ನಲ್ಲಿರುವ ಎನ್‌ಟಿಎ ಟ್ರಂಕ್ ಬಾಕ್ಸ್‌ಗಳಿಂದ ನೀಟ್ ಪ್ರಶ್ನೆಪತ್ರಿಕೆಯನ್ನು ಕದ್ದಿದ್ದ. ನಂತರ ಅದನ್ನು ರಾಜು ಸಿಂಗ್ ಎಂಬ ಇನ್ನೊಬ್ಬಾತನಿಗೆ ಕೊಟ್ಟಿದ್ದ. ಆತ ಅದನ್ನು ತನ್ನ ಗ್ಯಾಂಗ್ ಸದಸ್ಯರಿಗೆ ಹಂಚಿದ್ದ. ಈ ಹಿನ್ನೆಲೆಯಲ್ಲಿ ಸಿಬಿಐ ಇಬ್ಬರನ್ನೂ ಬಂಧಿಸಿತ್ತು.

ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಈ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಪ್ರತಿಪಕ್ಷದ ನಾಯಕರು ಪ್ರಸ್ತಾಪಿಸಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು.

571 ನಗರಗಳಲ್ಲಿ 4,750 ಕೇಂದ್ರಗಳಲ್ಲಿ ನಡೆದ ಈ ಪರೀಕ್ಷೆಗೆ 23 ಲಕ್ಷಕ್ಕೂ ಹೆಚ್ಚು ಮಂದಿ ಹಾಜರಾಗಿದ್ದರು. ಆದರೆ, ಪ್ರಶ್ನೆಪತ್ರಿಕೆ ನಡೆದಿದೆ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಗಳು ಸಲ್ಲಿಕೆಯಾಗಿದ್ದವು.

ಇದನ್ನೂ ಓದಿ: ಸರ್ಕಾರಿ ಉದ್ಯೋಗ ನೇಮಕಾತಿ ನಿಯಮ ಮಧ್ಯದಲ್ಲಿಯೇ ಬದಲಾಯಿಸುವಂತಿಲ್ಲ; ಸುಪ್ರೀಂಕೋರ್ಟ್​ ಆದೇಶ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.