ಭಿಲ್ವಾರ (ರಾಜಸ್ಥಾನ) : ತಾನು ಬದುಕಿರುವವರೆಗೂ ಹಿಂದೂಗಳ ಪರ ಮಾತನಾಡುತ್ತೇನೆ. ಹಿಂದೂಗಳಿಗಾಗಿ ಹೋರಾಡುತ್ತೇನೆ. ಈಗ ಹಿಂದೂಗಳೂ ಎಚ್ಚೆತ್ತುಕೊಳ್ಳಬೇಕು. ನಾವು ಸನಾತನದ ಸೈನಿಕರಾಗಬೇಕು ಎಂದು ಬಾಗೇಶ್ವರ ಪೀಠಾಧೀಶ್ವರ ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ಕರೆ ನೀಡಿದ್ದಾರೆ.
ರಾಜಸ್ಥಾನದ ಭಿಲ್ವಾರ ನಗರದಲ್ಲಿ ಹನುಮಾನ್ ಕಥಾ ವಾಚನದ ವೇಳೆ ಮಾತನಾಡಿದ ಅವರು, ನವೆಂಬರ್ 21 ರಿಂದ 29 ರವರೆಗೆ ಬಾಗೇಶ್ವರ ಧಾಮದಿಂದ ಓರ್ಚಾದವರೆಗೆ ಪಾದಯಾತ್ರೆ ನಡೆಸಲಾಗುವುದು. ಇದಾದ ಬಳಿಕ ರಾಜಸ್ಥಾನ ಸೇರಿದಂತೆ ದೇಶದ ವಿವಿಧ ಪ್ರದೇಶಗಳಿಂದ ಪಾದಯಾತ್ರೆಗಳನ್ನು ಕರೆದೊಯ್ದು, ಹಿಂದೂ ಏಕತೆ ಮತ್ತು ಜಾಗೃತಿ ಕಾರ್ಯ ನಡೆಸಲಿದ್ದೇವೆ ಎಂದು ಹೇಳಿದರು.
ಹಿಂದೂಗಳ ಸ್ಥಿತಿ ಹದಗೆಟ್ಟಿದೆ : ಪ್ರಸ್ತುತ ಹಿಂದೂಗಳ ಸ್ಥಿತಿ ಹದಗೆಟ್ಟಿದೆ. ಕುಂಭಕರ್ಣನ ನಂತರ ಯಾರಾದರೂ ಮಲಗಿದರೆ ಅವನು ಹಿಂದೂ. ಈಗ ಹಿಂದೂಗಳು ಎಚ್ಚೆತ್ತುಕೊಳ್ಳಬೇಕು. ನಮ್ಮ ದೇಹದಲ್ಲಿ ಜೀವ ಇರುವವರೆಗೂ ನಾವು ಹಿಂದೂಗಳ ಪರವಾಗಿ ಮಾತನಾಡುತ್ತೇವೆ. ಹಿಂದೂಗಳ ಪರ ಹೋರಾಡುತ್ತೇವೆ. ಈಗ ವೇದಿಕೆಯ ಮೂಲಕ ಹಿಂದೂ ರಾಷ್ಟ್ರ ರಚನೆಯಾಗುವುದಿಲ್ಲ. ಈಗ ಮಾಡು ಇಲ್ಲವೇ ಮಡಿ ಎಂಬ ಸರದಿ ಬಂದಿದೆ ಎಂದರು.
ಹಿಂದೂಗಳನ್ನು ಎಬ್ಬಿಸಲು ನಾವು ಹಳ್ಳಿ ಹಳ್ಳಿಗೆ ಪಾದಯಾತ್ರೆ ನಡೆಸುತ್ತೇವೆ. ಐದು ಜನ ಪಾದಯಾತ್ರೆ ಹೋಗುತ್ತೇವೆ. ನವೆಂಬರ್ 21 ರಿಂದ ನವೆಂಬರ್ 29 ರವರೆಗೆ ಬಾಗೇಶ್ವರ್ ಧಾಮ್ನಿಂದ ಓರ್ಚಾ ಧಾಮ್ವರೆಗೆ ಮೊದಲ ಪಾದಯಾತ್ರೆ ನಡೆಯಲಿದೆ. ಎರಡನೇ ಪಾದಯಾತ್ರೆ ದೆಹಲಿಯಿಂದ ವೃಂದಾವನಕ್ಕೆ ಮತ್ತು ಮೂರನೇ ಪಾದಯಾತ್ರೆ ಲಕ್ನೋದಿಂದ ಅಯೋಧ್ಯೆಗೆ ಮತ್ತು ಆರನೇ ಪಾದಯಾತ್ರೆಯನ್ನು ವೆಲ್ಲೂರಿನಿಂದ ತಿರುಪತಿ ಬಾಲಾಜಿಗೆ ಕೊಂಡೊಯ್ಯಲಿದ್ದೇವೆ. ಮುಂಬರುವ ದಿನಗಳಲ್ಲಿ ರಾಜಸ್ಥಾನದಲ್ಲಿಯೂ ಸಹ ಪಾದಯಾತ್ರೆಯನ್ನು ಕೈಗೊಳ್ಳಲಾಗುವುದು ಎಂದು ಅವರು ಇದೇ ವೇಳೆ ಹೇಳಿದರು.
ಇದನ್ನೂ ಓದಿ : ಮೂರು ಪ್ರಶ್ನೆಗೆ ಉತ್ತರ ಹೇಳಿದಲ್ಲಿ ದೇವಮಾನವ ಧೀರೇಂದ್ರ ಶಾಸ್ತ್ರಿ ಬಾಬಾಗೆ 10 ಲಕ್ಷ ರೂ ಬಹುಮಾನ : ನರೇಂದ್ರ ನಾಯಕ್ ಸವಾಲು