ಚಿಕ್ಕೋಡಿ: ಸ್ವತಃ ನಮ್ಮದೇ 80 ಎಕರೆ ಕಬ್ಬು ನೆರೆಯಿಂದ ಮುಳುಗಡೆಯಾಗಿದೆ. ಪೂರ್ಣ ಪ್ರಮಾಣದಲ್ಲಿ ಪರಿಹಾರ ಕೊಟ್ಟರೆ, ನನಗೇ ಸರ್ಕಾರ 80 ಲಕ್ಷ ರೂಪಾಯಿ ಕೊಡಬೇಕಾಗುತ್ತೆ, ಇಷ್ಟು ಹಣ ಕೊಡಲಾಗುವುದಿಲ್ಲ ಎಂದು ಸವದಿ ಅಥಣಿ ತಾಲೂಕಿನ ದರೂರ ಗ್ರಾಮದಲ್ಲಿ ನಡೆದ ಪರಿಹಾರ ವಿತರಣೆ ಹಾಗೂ ಅಹವಾಲು ಸ್ವೀಕಾರ ಸಭೆಯಲ್ಲಿ ಹೇಳಿದರು.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ದರೂರ ಗ್ರಾಮದಲ್ಲಿ ನಡೆದ ಪರಿಹಾರ ವಿತರಣೆ ಅಹವಾಲು ಸ್ವೀಕಾರ ಸಭೆಯಲ್ಲಿ ಅವರು ಮಾತನಾಡಿದರು. ನವಗ್ರಾಮ ನಿರ್ಮಾಣಕ್ಕೆ ಅಗತ್ಯವಿರುವ ಮೀನು ಸ್ವಾಧೀನಪಡಿಸಿಕೊಂಡು ಸಂಪೂರ್ಣ ಮುಳುಗಡೆಯಾಗುವ ಗ್ರಾಮಗಳನ್ನು ಶಾಶ್ವತವಾಗಿ ಸ್ಥಳಾಂತರಿಸುವುದು ನಮ್ಮ ಸರ್ಕಾರದ ಜವಾಬ್ದಾರಿಯಾಗಿದೆ. ನದಿತೀರದ ಕೆಲವು ಗ್ರಾಮಗಳು ಪದೆ ಪದೇ ಮುಳುಗಡೆಯಾಗುತ್ತಿದ್ದು, ಇಂತಹ 22 ಗ್ರಾಮಗಳ ಶಾಶ್ವತ ಸ್ಥಳಾಂತರ ಅಗತ್ಯವಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.
5 ಲಕ್ಷ ಏಕಕಾಲದಲ್ಲಿ ಕೊಟ್ಟರೆ ಮನೆ ಕಟ್ಟಿಕೊಳ್ಳದೆ ಸ್ವಂತಕ್ಕೆ ಬಳಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು, ಹಾಗಾಗಿಯೇ 4 ಕಂತುಗಳಲ್ಲಿ ಸಂತ್ರಸ್ತರಿಗೆ ಹಣ ನೀಡುತ್ತಿದೆ ಎಂದು ನೆರೆ ಸಂತ್ರಸ್ಥರನ್ನು ಉದ್ದೇಶಿಸಿ ಡಿಸಿಎಂ ಲಕ್ಷ್ಮಣ ಸವದಿ ಮಾತನಾಡಿದರು.