ETV Bharat / state

ಲುಂಗಿ ಧರಿಸುವುದು, ರವೀಂದ್ರನಾಥ ಟ್ಯಾಗೋರ್​ರಂತೆ ಗಡ್ಡ ಬಿಡುವುದು ಮೋದಿ ಸಾಧನೆ : ಸತೀಶ್ ಜಾರಕಿಹೊಳಿ ವ್ಯಂಗ್ಯ - ಕಾಂಗ್ರೆಸ್ ವತಿಯಿಂದ ಸೈಕಲ್ ಜಾಥಾ

ದೇಶದ ಅಭಿವೃದ್ಧಿಗಾಗಿ ತೈಲ ಬೆಲೆ ಏರಿಕೆ ಅನಿವಾರ್ಯ ಎಂದು ಬಿಜೆಪಿ ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಆ ಹಣ ಪಡೆಯುತ್ತಿರುವ ಇವರು ಯಾವ ಅಭಿವೃದ್ಧಿ ಕಾರ್ಯವನ್ನು ಮಾಡಿಲ್ಲ. ಆ ಹಣದಿಂದ ಇವರೇನು ಕುಡಚಿ-ಬಾಗಲಕೋಟೆಗೆ ಬುಲೆಟ್ ಟ್ರೈನ್ ಬಿಡುತ್ತಾರೆಯೇ, ಇಲ್ಲ ಉತ್ತಮ ರಸ್ತೆಗಳನ್ನಾದರೂ ನಿರ್ಮಿಸಿ ಕೊಡುತ್ತಾರೆಯೇ..

Cycle Jatha by Congress in chikkodi
ಕಾಂಗ್ರೆಸ್ ವತಿಯಿಂದ ಸೈಕಲ್ ಜಾಥಾ
author img

By

Published : Jul 10, 2021, 7:38 PM IST

ಚಿಕ್ಕೋಡಿ : ಪೆಟ್ರೋಲ್, ಡೀಸೆಲ್ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ವಿರೋಧಿಸಿ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿ ಕಾಂಗ್ರೆಸ್ ವತಿಯಿಂದ ಸೈಕಲ್ ಜಾಥಾ ಜರುಗಿತು. ಈ ಕಾರ್ಯಕ್ರಮಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಪೆಟ್ರೋಲ್ ಬೆಲೆ 50 ಪೈಸೆ ಹೆಚ್ಚಳವಾದರೂ ಕೂಡ ಬಿಜೆಪಿ ನಾಯಕರು ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುತ್ತಿದ್ದರು. ಆದರೆ, ಇಂದು ತೈಲ ಬೆಲೆ ಗಗನಕ್ಕೇರಿದರೂ ಅವರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ದೇಶದ ಅಭಿವೃದ್ಧಿಗಾಗಿ ತೈಲ ಬೆಲೆ ಏರಿಕೆ ಅನಿವಾರ್ಯ ಎಂದು ಬಿಜೆಪಿ ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಆ ಹಣ ಪಡೆಯುತ್ತಿರುವ ಇವರು ಯಾವ ಅಭಿವೃದ್ಧಿ ಕಾರ್ಯವನ್ನು ಮಾಡಿಲ್ಲ. ಆ ಹಣದಿಂದ ಇವರೇನು ಕುಡಚಿ-ಬಾಗಲಕೋಟೆಗೆ ಬುಲೆಟ್ ಟ್ರೈನ್ ಬಿಡುತ್ತಾರೆಯೇ, ಇಲ್ಲ ಉತ್ತಮ ರಸ್ತೆಗಳನ್ನಾದರೂ ನಿರ್ಮಿಸಿ ಕೊಡುತ್ತಾರೆಯೇ ಎಂದು ಪ್ರಶ್ನಿಸಿದರು.

ವೇಷ ಬದಲಾಯಿಸುವುದೇ ಮೋದಿ ಸಾಧನೆ : ತಂಡದ ನಾಯಕರಾಗಿರುವ ಪ್ರಧಾನಿ ಮೋದಿಯೇ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇನ್ನೂ, ಉಳಿದವರು ಏನು ಮಾಡುತ್ತಾರೆ. ತಮಿಳುನಾಡಿಗೆ ಹೋದರೇ ಲುಂಗಿ ಧರಿಸುವುದು, ಪಶ್ಚಿಮ ಬಂಗಾಳಕ್ಕೆ ಹೋದರೇ ರವೀಂದ್ರನಾಥ ಟ್ಯಾಗೋರ್ ಅವರಂತೆ ಗಡ್ಡ ಬಿಡುವುದು ಸೇರಿ, ಹೋದಲ್ಲೆಲ್ಲ ವೇಷ ಬದಲಾಯಿಸುವುದು ಪ್ರಧಾನಿ ಮೋದಿಯ ಸಾಧನೆ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ : ಕಾಂಟ್ರೋವರ್ಸಿ ಇಷ್ಟವಿಲ್ಲ, ವಿವಾದಕ್ಕೆ ಅವರೇ ಅಂತ್ಯವಾಡಿದ್ರೆ ನಂಗೆ ಸಂತೋಷ : ಸಂಸದೆ ಸುಮಲತಾ ಅಂಬಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.