ಚಿಕ್ಕೋಡಿ : ಸೈಕಲ್ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ನನದಿವಾಡಿ ಗ್ರಾಮದಲ್ಲಿ ನಡೆದಿದೆ.
ನನದಿವಾಡಿ ಗ್ರಾಮದ ಕೃಷ್ಣಾ ದತ್ತು ಪಟವರ್ಧನ (57) ಮೃತವ್ಯಕ್ತಿ ಎಂದು ತಿಳಿದುಬಂದಿದೆ. ಕೃಷ್ಣಾ ಎಂಬುವವರು ಸೈಕಲ್ ಮೇಲೆ ಹೊಲಕ್ಕೆ ಹೋಗುತ್ತಿರುವಾಗ ಯಕ್ಸಂಬಾ-ಚಿಕ್ಕೋಡಿ ಮಧ್ಯೆ ನನದಿವಾಡಿ ಗ್ರಾಮದ ಬಳಿ ಈ ಅವಘಡ ಸಂಭವಿಸಿದೆ.
ಸೈಕಲ್ ಹಿಂಬದಿಯಲ್ಲಿ ಕುಳಿತಿದ್ದ ಇಚಲಕರಂಜಿಯ ಪೂಜಾ ಶಿವಾಜಿ ಶಿರಗೂರೆಯವರು ಗಂಭೀರ ಗಾಯಗೊಂಡಿದ್ದಾರೆ. ಈ ಕುರಿತು ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.