ಬೆಳಗಾವಿ: ನನ್ನ ಮೇಲೆ ಲೂಟಿ, ಲ್ಯಾಂಡ್ ಗ್ರ್ಯಾಬಿಂಗ್ ಮಾಡಿದ ಬಗ್ಗೆ ಯಾವ ಠಾಣೆಯಲ್ಲೂ ದೂರು ದಾಖಲಾಗಿಲ್ಲ. ನನಗೆ ಹೇಗೆ ಲೂಟಿ ರವಿ ಎಂದು ಕರೆದರೋ ಅವರಿಗೆ ನಾನು ಡಿಕೆ ಬದಲು ಕೆಡಿ ಎಂದು ಕರೆಯಬೇಕಾಗುತ್ತದೆ ಎಂದು ಡಿ.ಕೆ ಶಿವಕುಮಾರ್ಗೆ ಸಿಟಿ ರವಿ ಟಾಂಗ್ ಕೊಟ್ಟಿದ್ದಾರೆ.
ನನ್ನ ಮೇಲೆ ED, IT ದಾಳಿಗಳು ಆಗಿಲ್ಲ. ನನ್ನ ವಿರುದ್ಧ ಯಾವುದೇ ಚಾರ್ಜ್ ಶೀಟ್ ಹಾಕಲಾಗಿಲ್ಲ. ನಾನು ಮೊದಲ ಬಾರಿಗೆ ಶಾಸಕನಾದಾಗ ಎಷ್ಟು ಆಸ್ತಿ ಇತ್ತೋ, ಈಗಲೂ ಅಷ್ಟೇ ಇದೆ. ನಿಮ್ಮ ಹೆಸರನ್ನು ಉಲ್ಟಾ ಹೇಳಿ, ಕೆಡಿ ಅಂತ ನಾನು ಹೇಳಲ್ಲ. ನಾನು ಒಂದು ರಾಷ್ಟ್ರೀಯ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ.
ನಾನು ಯಾವುದೇ ಬಕೆಟ್ ಹಿಡಿದು ಈ ಹುದ್ದೆಗೆ ಬರಲಿಲ್ಲ, ಮೈಕ್ ಹಿಡಿದು, ಪೋಸ್ಟರ್ ಹಂಚಿದ್ದೇನೆ. ಹೋರಾಟದ ಹಿನ್ನೆಲೆಯಿಂದ ಬಂದಿದ್ದೇನೆ. ಯಾರ ಸಾರ್ವಜನಿಕ ಜೀವನದ ಬಗ್ಗೆ ಹೇಳುವ ಮುನ್ನ, ತಮ್ಮ ವೈಯಕ್ತಿಕ ಜೀವನದ ಬಗ್ಗೆ ನೋಡಿಕೊಳ್ಳಿ ಎಂದಿದ್ದಾರೆ.
ಗಾಜಿನ ಮನೆಯಲ್ಲಿ ಕೂತು ಕಲ್ಲು ಹೊಡೆಯುವ ಯತ್ನ ಮಾಡಬೇಡಿ. ನಾನು ಗಾಜಿನ ಮನೆಯಲ್ಲಿಲ್ಲ. ನನ್ನ ಬಗ್ಗೆ ಹೇಳಿಕೆ ನೀಡುವ ಮೊದಲು ಯೋಚನೆ ಮಾಡಿ. ಡಿಕೆಶಿ ಶಾಸಕರಾದಾಗ ಅವರ ಬಳಿ ಇದ್ದ ಆಸ್ತಿ ಎಷ್ಟು? ಈಗ ಅವರ ಬಳಿ ಇರುವ ಆಸ್ತಿ ಎಷ್ಟು ಪಟ್ಟು ಹೆಚ್ಚಾಗಿದೆ ಎಂಬುದು ಎಲ್ಲರಿಗೂ ಗೊತ್ತು. ಡಿಕೆಶಿ ಸಭ್ಯತೆಯಿಂದ ವರ್ತಿಸುಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ನಮ್ಮಲ್ಲಿ ಮಂಚ ಮುರಿಯುವವರು ಇಲ್ಲ, ಬರೀ ನೆಲನೇ ಇರೋದು : ಸಿ.ಎಂ.ಇಬ್ರಾಹಿಂ