ಬೆಳಗಾವಿ: ಇಲ್ಲಿನ ಉತ್ತರ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕ ಅನಿಲ್ ಬೆನಕೆ ಮತ್ತೆ ಕೋವಿಡ್ ರೂಲ್ಸ್ ಬ್ರೇಕ್ ಮಾಡಿದ್ದಾರೆ. ವೀಕೆಂಡ್ ಕರ್ಫ್ಯೂ ದಿನವೇ ಧರ್ಮವೀರ ಸಂಭಾಜಿ ಪಾಟೀಲ್ ಪ್ರತಿಮೆಗೆ ಅಭಿಷೇಕ ಮಾಡಿದ್ದಾರೆ.
ಧರ್ಮವೀರ ಸಂಭಾಜಿ ವೃತ್ತದಲ್ಲಿರುವ ಸಂಭಾಜಿ ಪ್ರತಿಮೆಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಲಾಯಿತು. ಮಾಸ್ಕ್ ಹಾಕದೆ ಒಂದೇ ಕಡೆ 20ಕ್ಕೂ ಹೆಚ್ಚು ಜನರು ಜಮಾವಣೆಗೊಂಡಿದ್ದರು. ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದ್ದು, ಹೀಗಿದ್ದರೂ ಆಡಳಿತ ಪಕ್ಷದ ಶಾಸಕನೇ ಕೋವಿಡ್ ನಿಯಮ ಉಲ್ಲಂಘಿಸಿರುವುದಕ್ಕೆ ಜನ ಕಿಡಿಕಾರಿದ್ದಾರೆ.
ಇದನ್ನೂ ಓದಿ: ಜಗಳೂರು ಶಾಸಕ ರಾಮಚಂದ್ರಪ್ಪ ಭರ್ಜರಿ ಬರ್ತ್‌ಡೇ ಪಾರ್ಟಿ.. ಶಾಸಕ ರೇಣುಕಾಚಾರ್ಯ ರೂಲ್ಸ್‌ಗೆ ಡೋಂಟ್‌ಕೇರ್..
ಕಳೆದ ಎರಡು ದಿನಗಳ ಹಿಂದೆ ಎಮ್ಮೆ ಓಡಿಸುವ ಸ್ಪರ್ಧೆಗೆ ಚಾಲನೆ ನೀಡಿದ್ದ ಅನಿಲ್ ಬೆನಕೆ, ಸಾವಿರಾರು ಜನರನ್ನು ಜಮಾವಣೆಗೊಳಿಸಿದ್ದರು. ಇದೀಗ ಜನರಿಗೊಂದು ನ್ಯಾಯ ಜನಪ್ರತಿನಿಧಿಗಳಿಗೊಂದು ನ್ಯಾಯವೇ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಶಾಸಕರ ವಿರುದ್ಧ ಬೆಳಗಾವಿ ಪೊಲೀಸರು ಯಾವುದೇ ದೂರನ್ನು ಇದುವರೆಗೂ ದಾಖಲಿಸಿಲ್ಲ ಎಂದು ತಿಳಿದುಬಂದಿದೆ.