ETV Bharat / state

ಹಿರಿಯರ ಮನೆಯಲ್ಲಿ ಹೊರಟ್ಟಿ ಗುಣಗಾನ: ಪಕ್ಷಾತೀತವಾಗಿ ಹೊಗಳಿದ ಸದಸ್ಯರು - ಬಸವರಾಜ ಹೊರಟ್ಟಿ ಅವರು ಮತ್ತೊಮ್ಮೆ ಅವಿರೋಧ

ಪಕ್ಷವನ್ನು ಮೀರಿ ಅಭಿವೃದ್ಧಿ ವಿಚಾರದಲ್ಲಿ ನಿಲುವು ತಳೆದು ಜನಪರ ಕೆಲಸ ಮಾಡಿದ್ದೀರಿ. ಬೆಳಗಾವಿ ಅಧಿವೇಶನದಲ್ಲಿ ನೀವು ಸಭಾಪತಿಯಾಗಿದ್ದು ವಿಶೇಷ ಎಂದು ಹೊರಟ್ಟಿ ಅವರಿಗೆ ಸಿಎಂ ಅಭಿನಂದನೆ.

ಹಿರಿಯರ ಮನೆಯಲ್ಲಿ ಹೊರಟ್ಟಿ ಗುಣಗಾನ: ಪಕ್ಷಾತೀತವಾಗಿ ಸಭಾಪತಿ ಹಾಡಿ ಹೊಗಳಿದ ಸದಸ್ಯರು
council-members-congratulate-the-basavara-horatti-elected-as-legislative-council-chairman
author img

By

Published : Dec 21, 2022, 2:04 PM IST

ಬೆಂಗಳೂರು: ಬಸವರಾಜ ಹೊರಟ್ಟಿ ಅವರು ಮತ್ತೊಮ್ಮೆ ಅವಿರೋಧವಾಗಿ ಸಭಾಪತಿಯಾಗಿ ಆಯ್ಕೆಯಾಗಿದ್ದು, ಅವರ ಹಿರಿತನದ ಮಾರ್ಗದರ್ಶನದಲ್ಲಿ ಕಲಾಪ ಉತ್ತಮ ರೀತಿಯಲ್ಲಿ ನಡೆಯಲಿದೆ. ಹಿರಿಯರ ಮನೆಯ ಹಿರಿತನ ಉಳಿಸಿಕೊಂಡು ಹಿರಿತನಕ್ಕೆ ಮತ್ತಷ್ಟು ಮೆರಗು ಬರಲಿ ಎಂದು ನೂತನ ಸಭಾಪತಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಭ ಕೋರಿದರು.

ವಿಧಾನ ಪರಿಷತ್​​ನಲ್ಲಿ ಸಭಾಪತಿ ಆಯ್ಕೆ ಪ್ರಕ್ರಿಯೆ ನಂತರ ಸದನದಲ್ಲಿ ಮಾತನಾಡಿದ ಅವರು, 1980 ರಿಂದ ನಿಮ್ಮನ್ನು ಬಲ್ಲೆ, ಆರಂಭದಲ್ಲಿ ಶಿಕ್ಷಕರಾಗಿ ಶಿಕ್ಷರ ಸಂಘಟನೆಯಲ್ಲಿ ಒಳ್ಳೆಯ ಕೆಲಸ ಮಾಡಿ ಎಲ್ಲ ಶಿಕ್ಷಕರ ಪ್ರೀತಿಗೆ ಪಾತ್ರರಾಗಿದ್ದಿರಿ. ಪ್ರತಿ ಬಾರಿ ಚುನಾವಣೆಯಲ್ಲಿ ಗೆಲ್ಲುವ ಮೂಲಕ 42 ವರ್ಷಗಳಿಂದ ಆದರ್ಶಪ್ರಾಯವಾಗಿ ಬಂದಿದ್ದೀರ. ನಿಮ್ಮ ಕಾರ್ಯಶೈಲಿ ಮತ್ತು ನಿಮ್ಮ ಮತದಾರರ ಹಿತಚಿಂತನೆ ಮಾಡುವ ರೀತಿ, ಶಿಕ್ಷಣ ಸಚಿವರಾಗಿ ತಂದಿರುವ ಹತ್ತು ಹಲವು ಬದಲಾವಣೆ ಶಿಕ್ಷಣ ಕ್ಷೇತ್ರಕ್ಕೆ ಸ್ಥಿರತೆ ಕೊಟ್ಟಿದೆ. ಆಡಳಿತಗಾರನಾಗಿ ಕಠಿಣ ನಿರ್ಧಾರ ಕೈಗೊಂಡಿದ್ದರಿಂದಲೇ ಶಿಕ್ಷಣ ಕ್ಷೇತ್ರದಲ್ಲಿ ನಾವು ಪ್ರಗತಿ ಮಾಡಲು ಸಾಧ್ಯವಾಗಿದೆ. ಶಿಕ್ಷಕರ ವರ್ಗಾವಣೆ ಸೇರಿ ಹಲವು ವಿಷಯದಲ್ಲಿ ಬದಲಾವಣೆ ತಂದಿದ್ದೀರಿ. ಹೊರಟ್ಟಿ ಎಲ್ಲಾ ಮುಖ್ಯಮಂತ್ರಿಗಳ ಜೊತೆ ಆತ್ಮೀಯರಾಗಿದ್ದರು. ಹಾಗಾಗಿ ಅವರು ಯಾವುದೇ ಪಕ್ಷದಲ್ಲಿದ್ದರೂ ಅವರ ಕೆಲಸಗಳು ನಡೆಯುತ್ತಿದ್ದವು. ಇದೊಂದು ಕಲೆ. ಇದರ ಗುಟ್ಟು ನಮಗೆಲ್ಲಾ ಹೇಳಿದರೆ ನಮಗೂ ಒಳ್ಳೆಯದಾಗಲಿದೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಕಾನೂನು ವಿವಿ ಹುಬ್ಬಳ್ಳಿಗೆ ಬಂದಿದ್ದರೆ, ಅದಕ್ಕೆ ಪ್ರಮುಖ ಕಾರಣ ಹೊರಟ್ಟಿ. ಉತ್ತರ ಕರ್ನಾಟಕ ಹೋರಾಟಕ್ಕೆ ದನಿಯಾಗಿ ಕೆಲಸ ಮಾಡಿದ್ದೀರಿ. ಪಕ್ಷವನ್ನು ಮೀರಿ ಅಭಿವೃದ್ಧಿ ವಿಚಾರದಲ್ಲಿ ನಿಲುವು ತಳೆದು ಜನಪರ ಕೆಲಸ ಮಾಡಿದ್ದೀರಿ. ಬೆಳಗಾವಿ ಅಧಿವೇಶನದಲ್ಲಿ ನೀವು ಸಭಾಪತಿಯಾಗಿದ್ದು ವಿಶೇಷ. ನಿಮ್ಮ ಆಯ್ಕೆಯ ನಂತರ ಈ ಭಾಗದ ಸಮಸ್ಯೆಗಳ ಚರ್ಚೆ ಉತ್ತಮವಾಗಿ ನಡೆಯಲಿ ಎನ್ನುವ ಆಶಯ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಪ್ರಜಾಪ್ರಭುತ್ವದ ಬೇರುಗಳು ಗಟ್ಟಿಯಾಗಬೇಕಾದರೆ ನಿರಂತರ ಶ್ರಮ, ಜನತಂತ್ರ ವ್ಯವಸ್ಥೆಯಲ್ಲಿ ಅಪಾರ ನಂಬಿಕೆ, ಆಳವಾದ ಅಧ್ಯಯನ, ಸಂವಿಧಾನದ ಆಶಯ ಅರ್ಥಮಾಡಿಕೊಂಡು ನಡೆಯಬೇಕು ಆಗ ಮಾತ್ರ ವ್ಯವಸ್ಥೆಗೆ ಹೆಚ್ಚು ಶಕ್ತಿಬರಲಿದೆ. ನಿಮ್ಮ ಇಡೀ ರಾಜಕಾರಣದ ಅನುಭವ ಸದನಕ್ಕೆ ಉಪಯುಕ್ತವಾಗಲಿದೆ. ನಿಮ್ಮಂತಹ ಅನುಭವಿಗಳು ಸಭಾಪತಿಯಾಗಿ ಆಯ್ಕೆಯಾಗಿದ್ದು ಹೆಮ್ಮೆ ತರಲಿದೆ ಎಂದು ಶುಭಹಾರೈಸಿದರು

ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಮಾತನಾಡಿ, ಹಂಗಾಮಿ ಸಭಾಪತಿ ರಘುನಾಥರಾವ್ ಮಲ್ಕಾಪುರೆ ಅವರಿಗೆ ಧನ್ಯವಾದ ಹೇಳುತ್ತೇನೆ. ಮೊದಲ ಬಾರಿ ಅವರಿಗೆ ಅವಕಾಶ ಸಿಕ್ಕಾಗ ಹೊಸದಾಗಿ ಬಂದವರು ಯಾವ ರೀತಿ ಸದನ ನಡೆಸಲಿದ್ದಾರೆ ಎಂದು ಎಲ್ಲರೂ ಯೋಚನೆ ಮಾಡಿದ್ದರು. ಎರಡು ಅಧಿವೇಶನದಲ್ಲಿ ಅವರು ಕಾರ್ಯನಿರ್ವಹಿಸಿದಾಗ ಅವರ ಕಾರ್ಯನಿರ್ವಹಣೆಯನ್ನು ಎಲ್ಲರೂ ಅಭಿನಂದಿಸಿದ್ದಾರೆ. ಸದಾ ನಗುಮೊಗದಿಂದ ಇದ್ದು ಪ್ರತಿಪಕ್ಷಗಳಿಗೆ ಹೆಚ್ಚಿನ ಅವಕಾಶ ಕೊಟ್ಟಿದ್ದರು ಎಂದರು.

ಥರ್ಡ್ ಅಂಪೈರ್ ಆಗದೆ ಮೊದಲ ಅಂಪೈರ್ ಆಗಿ:
ಇನ್ನು ನಿಮ್ಮನ್ನು ಸರ್ವಾನುಮತದ ಆಯ್ಕೆ ಮಾಡಲು ಹಲವಾರು ಕಾರಣಗಳಿವೆ. ರಚನಾತ್ಮಕ ಚರ್ಚೆ ಆಗಬೇಕಾದಾಗ ತಮ್ಮ ಮಧ್ಯಸ್ಥಿಕೆ ಬಹಳ ಮುಖ್ಯ. ಥರ್ಡ್ ಅಂಪೈರ್ ಆಗದೆ ಮೊದಲ ಅಂಪೈರ್ ಆಗಿರಬೇಕು. ಒಳ್ಳೆಯ ಗರಡಿಯಲ್ಲಿ ಪಳಗಿ ಬಂದಿದ್ದೀರಿ. ಮೌಲ್ಯಾಧಾರಿತ ರಾಜಕಾರಣದಲ್ಲಿ ಬಹಳ ಪಳಗಿದವರು ಹಾಗಾಗಿ ನಾವು ಕೂಡ ಹೆಚ್ಚು ನಿರೀಕ್ಷೆ ಇರಿಸಿಕೊಂಡಿದ್ದೇವೆ. ಹಾಗಾಗಿ ನಾವು ಅವಿರೋಧ ಆಯ್ಕೆಗೆ ಅವಕಾಶ ಕಲ್ಪಿಸಿದೆವು. ಇಲ್ಲದೇ ಇದ್ದಲ್ಲಿ ಅಭ್ಯರ್ಥಿ ಹಾಕುತ್ತಿದ್ದೆವು ಎಂದರು.

ಮೋದಿ ಟೀಕಿಸುವುದನ್ನು ಮರೆಯದ ಪ್ರತಿಪಕ್ಷ ನಾಯಕ:
ಪ್ರತಿಪಕ್ಷದ ಟೀಕೆ ಸಹಿಸಿಕೊಳ್ಳಬೇಕು ಎಂದು ಆಡಳಿತಪಕ್ಷದವರು ಹೇಳುತ್ತಾರೆ. ಆದರೆ ಕೆಲವರು ಟೀಕೆ ಟಿಪ್ಪಣಿ ಎಷ್ಟರಮಟ್ಟಿಗೆ ತಡೆದುಕೊಳ್ಳುತ್ತಾರೋ ಗೊತ್ತಿಲ್ಲ. ಕೆಲವರಂತು ಸುದ್ದಿಗೋಷ್ಟಿಯನ್ನೇ ಮಾಡಲ್ಲ ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಟೀಕೆ ಮಾಡಿದರು. ಕೆಲವು ವಿಚಾರ ವಿಧಾನಸಭೆಯಲ್ಲಿ ಚರ್ಚೆ ಮಾಡಲು ಸಾಧ್ಯವಾಗಿರುವುದಿಲ್ಲ ಅದನ್ನು ಸರಿಯಾಗಿ ಚರ್ಚಿಸಲು ಮೇಲ್ಮನೆ ಇದೆ ಅದಕ್ಕೆ ಸರಿಯಾದ ಅವಕಾಶ ಕಲ್ಪಿಸಬೇಕು. ಗುಣಾತ್ಮಕ ಚರ್ಚೆಯಾಗಬೇಕು. ಚರ್ಚೆ ನಂತರ ಉತ್ತರ ಕೊಡಬೇಕು. ಒಂದು ಇತಿಹಾಸ ನೀವು ಸೃಷ್ಟಿ ಮಾಡಿದ್ದೀರಿ. ಮೇಲ್ಮನೆಯಲ್ಲಿ ಬಹಳ ಆಳವಾದ ಚರ್ಚೆಯಾಗಬೇಕು. ಪ್ರತಿಪಕ್ಷಗಳಿಗೆ ಹೆಚ್ಚಿನ ಅವಕಾಶ ನೀಡಿ ಸರ್ಕಾರದ ತಪ್ಪುಗಳನ್ನು ಜನರಿಗೆ ತಿಳಿಸಲು ಸಹಕಾರ ನೀಡಬೇಕು ಎಂದು ಹರಿಪ್ರಸಾದ್ ಮನವಿ ಮಾಡಿದರು.

ಲೋಕಶಕ್ತಿ ದಳದ್ದಲ್ಲ:
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಬೋಜೇಗೌಡ ಮಾತನಾಡಿ, ಮೂರನೇ ಬಾರಿಗೆ ತಾವು ಪೀಠ ಅಲಂಕಾರ ಮಾಡುತ್ತಿರುವುದು ರಾಜ್ಯದ ಹಿರಿಮೆಯಾಗಿದೆ. ಹಿರಿಯ ಸದಸ್ಯರಾಗಿದ್ದೀರಿ, ಚಿಂತಕರ ಚಾವಡಿಯಲ್ಲಿ ತಮ್ಮ ಸುದೀರ್ಘವಾದ ಅನುಭವವನ್ನು ಎಲ್ಲರೂ ಹಂಚಿಕೊಂಡಿದ್ದಾರೆ. 34ನೇ ವಯಸ್ಸಿಗೆ ನೀವು ಈ ಮನೆಗೆ ಬಂದವರು ಇಲ್ಲಿಯವರೆಗೂ ತಿರುಗಿ ನೋಡಿಲ್ಲ. ದೇಹ ಬಿಜೆಪಿಯಲ್ಲಿದ್ದರೂ ಮನಸ್ಸು ದಳದಲ್ಲೇ ಇದೆ. ಭವಿಷ್ಯವನ್ನು ಚಿಂತನೆ ಮಾಡದೆ ಕೆಲಸ ಮಾಡಿದಿರಿ. ಪ್ರತಿಪಕ್ಷಗಳಿಗೆ ಹೆಚ್ಚಿನ ಅವಕಾಶ ಕೊಡಬೇಕು ಎಂದರು.

ಹಿರಿಯ ಸದಸ್ಯ ಹೆಚ್.ವಿಶ್ವನಾಥ್ ಮಾತನಾಡಿ, ಅವಿರೋಧವಾಗಿ ಈ ಮನೆಯ ಆಯ್ಕೆಯಾಗಿರುವುದಕ್ಕೆ ಅಭಿನಂದನೆ. ಅಲ್ಪಕಾಲದಲ್ಲಿ ತಮ್ಮ ಅನುಭವ ಮೆಚ್ಚುವಂತೆ ಕೆಲಸ ಮಾಡಿದ ಮಲ್ಕಾಪುರೆಗೂ ಅಭಿನಂದನೆ. 40 ವರ್ಷದ ಸುದೀರ್ಘ ಯಾನ. ಕೃಷ್ಣ ಸರ್ಕಾರದಲ್ಲಿ ನಾನು ಶಿಕ್ಷಣ ಸಚಿವನಾದಾಗ ನನಗೆ ಹಲವಾರ ಸಲಹೆ ಕೊಟ್ಟಿದ್ದೀರಿ, ನಾನು ಯಶಸ್ವಿ ಶಿಕ್ಷಣ ಸಚಿವನಾಗಲು ನಿಮ್ಮ ಸಲಹೆ ಮಹತ್ವದ್ದಾಗಿದೆ ಎಂದು ಸ್ಮರಿಸಿದರು. ಪ್ರಶ್ನೋತ್ತರ ಕಲಾಪ 1 ಗಂಟೆ ಮೀರದಂತೆ ನೋಡಿಕೊಳ್ಳುವ ಪರಿಪಾಠ ತಪ್ಪಿದೆ ಅದನ್ನು ಮತ್ತೆ ಜಾರಿಗೆ ತನ್ನಿ ಎಂದು ಸಲಹೆ ನೀಡಿದರು.

ಇದನ್ನೂ ಓದಿ: ವಿಧಾನಪರಿಷತ್ ಸಭಾಪತಿಯಾಗಿ ಬಸವರಾಜ ಹೊರಟ್ಟಿ ಅವಿರೋಧ ಆಯ್ಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.