ETV Bharat / state

ಬೆಳಗಾವಿಯಲ್ಲಿಂದು ಕೊರೊನಾಗೆ ಐದು ಬಲಿ : 341 ಜನರಲ್ಲಿ ಸೋಂಕು ಪತ್ತೆ

ಬೆಳಗಾವಿ ಜಿಲ್ಲೆಯಲ್ಲಿ ಇಂದು ಒಂದೇ ದಿನ ದಾಖಲೆ ಪ್ರಮಾಣದಲ್ಲಿ ಸೋಂಕು ಪತ್ತೆಯಾಗಿದ್ದು, 341 ಜನರಿಗೆ ಸೋಂಕು ‌ವಕ್ಕರಿಸಿದೆ.

Belgavi
ಬೆಳಗಾವಿ
author img

By

Published : Jul 25, 2020, 10:31 PM IST

ಬೆಳಗಾವಿ: ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಇಂದು ಒಂದೇ ದಿನಕ್ಕೆ ಕೊರೊನಾಗೆ ಐವರು ಬಲಿಯಾಗಿದ್ದಾರೆ. ಇದರಿಂದ ಮೃತಪಟ್ಟವರ ಸಂಖ್ಯೆ 40ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಇಂದು ಒಂದೇ ದಿನ ದಾಖಲೆ ಪ್ರಮಾಣದಲ್ಲಿ ಸೋಂಕು ಪತ್ತೆಯಾಗಿದ್ದು, 341 ಜನರಿಗೆ ಸೋಂಕು ‌ವಕ್ಕರಿಸಿದೆ.

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1986ಕ್ಕೆ ಏರಿಕೆಯಾಗಿದೆ. ಅಥಣಿಯೊಂದರಲ್ಲೇ 170 ಕ್ಕೂ ಅಧಿಕ ಜನರಿಗೆ ಸೋಂಕು ಕಾಣಿಸಿಕೊಂಡಿದ್ದು ಗಡಿ ಭಾಗದ ಜನರನ್ನು ಬೆಚ್ಚಿ ಬೀಳಿಸಿದೆ. ಜಿಲ್ಲೆಯ ಕೋವಿಡ್ ವಾರ್ಡ್ ಹಾಗೂ ಕೋವಿಡ್ ಸೆಂಟರ್​​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 41 ಜನರು ಗುಣಮುಖರಾಗಿ ಡಿಸ್ಚಾರ್ಜ್​ ‌ಆಗ್ತಿದ್ದಾರೆ.

ಇನ್ನು ಜಿಲ್ಲೆಯಲ್ಲಿ ಈವರೆಗೆ 469 ಜನರು ಗುಣಮುಖರಾಗಿ ‌ಡಿಸ್ಚಾರ್ಜ್ ಆಗಿದ್ದು, 1477 ಸಕ್ರಿಯ ‌ಪ್ರಕರಣಗಳಿದ್ದು, ಕೋವಿಡ್ ‌ವಾರ್ಡ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.